Hasta Rekha: ಕೈಯಲ್ಲಿ ಈ ರೇಖೆ ಇದ್ರೆ ಮಕ್ಕಳಿಗೆ ಅಪ್ಪ ಅಂದ್ರೂ ಪ್ರೀತಿ; ಪಿತ್ರಾರ್ಜಿತ ಆಸ್ತಿ, ಉದ್ಯೋಗದಲ್ಲಿಯೂ ಶ್ರೀ ರಕ್ಷೆ; ನಿಮ್ಮ ಕೈನಲ್ಲಿಈ ರೇಖೆ ಅಚ್ಚಾಗಿದ್ಯಾ ನೋಡಿಕೊಳ್ಳಿ!

Hasta Rekha: ಜೀವ ರೇಖೆಗೆ ತಾಗಿಕೊಂಡು ಸೂಕ್ಷ್ಮವಾದ ನಸುಗಂಪಿನ ಧನ ರೇಖೆ ಗುರು ಪರ್ವಕ್ಕೆ ಸಾಗಿದರೆ ಅಂತಹ ವ್ಯಕ್ತಿ ಸಾಮಾನ್ಯವಾಗಿ ಹಿರಿಯರ ಆಸ್ತಿ ಅಥವಾ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾನೆ. ವಿದ್ಯಾರ್ಥಿ ಆಗಿರುವಾಗಲೆ ಸಮಯ ಸಿಕ್ಕಿದಾಗ ಹೋಗಿ ತಂದೆಯ ವ್ಯವಹಾರದಲ್ಲಿ ಭಾಗವಹಿಸುವುದು ಇವರಿಗೆ ಇಷ್ಟ. ತಂದೆ ತಾಯಿಯ ಅಚ್ಚು ಮೆಚ್ಚಿನ ಮಗನಾಗಿ ಇರುತ್ತಾನೆ. ಕೃಷಿಯಲ್ಲಿ ಅಥವಾ ವ್ಯಾಪಾರದಲ್ಲಿ ಏನಾದರೂ ಏರು ಪೇರು ಆದರೆ ಭದ್ರತೆಗಾಗಿ ಇರಲಿ ಅಂತ (safer side) ವಿದ್ಯಾಭ್ಯಾಸ ಮಾಡಿರುತ್ತಾರೆ.  ಇವರ ವಿದ್ಯಾಭ್ಯಾಸ ಸಹ ವಕೀಲ ವೃತ್ತಿ, ಇಲ್ಲ ವಾಣಿಜ್ಯ (ಕಾಮರ್ಸ್) ಆಗಿರುತ್ತದೆ, ಅಥವಾ ಸ್ವ ಉದ್ಯೋಗಕ್ಕೆ ಬೇಕಾದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ವಿದ್ಯೆಗೆ ಹೊಂದಿಕೊಂಡು ಜೀವನೋಪಾಯ ಕಂಡುಕೊಳ್ಳುವುದು ತೀರಾ ಕಡಿಮೆ. ಪಿತ್ರಾರ್ಜತವಾಗಿ ಬೆಳೆದ ಉದ್ಯೋಗವನ್ನು ತುಂಬಾ ಚೆನ್ನಾಗಿ ಅಭಿವೃದ್ಧಿಪಡಿಸಿಕೊಂಡು ಹೋಗುವ ಚಾಕಚಕ್ಯತೆ ಇರುತ್ತದೆ. ಇದನ್ನೂ ಓದಿ: Arecanut price: ಅಡಿಕೆ ಬೆಳೆಗಾರರಿಗೆ ಸ್ವಲ್ಪ ಕಾಯಿರಿ; ಅಡಿಕೆ ಬೆಲೆಯಲ್ಲಿ ಏರಿಕೆ ಯಾಗುವ ಸಾಧ್ಯತೆ ಇದೆ: ಗರಿಷ್ಠ ಎಷ್ಟರವರಿಗೆ ಏರಿಕೆ ಆಗಬಹುದು ಗೊತ್ತಾ ಬೆಲೆ?

ತಂದೆಯನ್ನು ತುಂಬಾ ಇಷ್ಟಪಡುತ್ತಾರೆ. ತಂದೆ ಯಾವುದೇ ಸಣ್ಣ ತೊಂದರೆಯಲ್ಲಿ ಇದ್ದರೂ ಇವರು ತುಂಬಾ ಗೊಂದಲಕ್ಕೆ ಒಳಗಾಗುತ್ತಾರೆ. ಹೆಚ್ಚಾಗಿ ಮಧ್ಯಮ ಎತ್ತರವಾಗಿರುವ ಇವರು ಗಂಭೀರ ಸ್ವಭಾವದವರು. ಜನರೊಂದಿಗೆ ಬೇಗನೇ ಬೆರೆಯುತ್ತಾರೆ. ಅಪರೂಪಕ್ಕೆ ಹಾಸ್ಯಚಟಾಕಿ ಹಾರಿಸುತ್ತಾರೆ. ತುಂಬಾ ದೈವ ಭಕ್ತಿ ಇರುವ ಇವರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಸಮಾಜದಲ್ಲೂ ಧಾರ್ಮಿಕ, ಸಾಮಾಜಿಕ ಮುಖಂಡರಾಗಿ ಇರುತ್ತಾರೆ. ಅಪರೂಪಕ್ಕೆ ರಾಜಕಾರಣಿಯೂ ಆಗಿರುತ್ತಾರೆ. ಸಾರ್ವಜನಿಕ ಯಾವುದೇ ಕಾರ್ಯಕ್ರಮ ಮಾಡಿದರೂ ಯಶಸ್ಸು ಇವರದ್ದೇ. ಇದನ್ನೂ ಓದಿ: RCB: ಸತತ ಪಂದ್ಯಗಳನ್ನು ಗೆಲ್ಲುತ್ತಿರುವ ಆರ್ಸಿಬಿ ಮತ್ತೊಂದು ಸಿಹಿ ಸುದ್ದಿ: ಖಡಕ್ ಆಟಗಾರ ತಂಡಕ್ಕೆ ಸೇರ್ಪಡೆ. ಇನ್ನು ಆರ್ಸಿಬಿಯನ್ನು ತಡೆಯಲು ಆಗಲ್ಲ. ಯಾರು ಗೊತ್ತೇ??

ಸಾಧಾರಣ 30 ವರ್ಷಗಳ ನಂತರ ಪ್ರಸಿದ್ಧಿಗೆ ಬರುವ ಇವರು ಸೊಗಸಾದ ಮಾತುಗಾರ. ಯಾರಿಗೂ ಮನನೋಯಿಸದೆ ಮಾತನಾಡುವ ಇವರು ಕುಟುಂಬದವರಿಗೆ ತುಂಬಾ ಪ್ರೀತಿ. ಪಿತ್ರಾರ್ಜತವಾಗಿ ಬಂದ ವಹಿವಾಟನ್ನು ಮೂರು ಪಟ್ಟು ಬೆಳೆಸುತ್ತಾರೆ. ಇವರಲ್ಲಿ ಅರ್ಧದಷ್ಟು ಜನ ಒಂದಕ್ಕಿಂತ ಹೆಚ್ಚು ಉದ್ದಿಮೆ, ವ್ಯಾಪಾರ ವ್ಯವಹಾರ ಮಾಡಿಕೊಂಡಿರುತ್ತಾರೆ. ಇವರು ಚಿನ್ನಾಭರಣಗಳಲ್ಲಿಯೂ ಆಸಕ್ತಿಯುಳ್ಳವರು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಒಳ್ಳೆಯ ಹೆಸರನ್ನು ಮಾಡುತ್ತಾರೆ. ಇದನ್ನೂ ಓದಿ: UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

Comments are closed.