Hasta Rekha: ವರ್ಷ 40 ದಾಟಿದ ಮೇಲೂ ನಿಮ್ಮ ಕೈಯಲ್ಲಿ ಈ ರೇಖೆ ಸ್ಪಷ್ಟವಾಗಿದ್ರೆ ಲಕ್ಷ್ಮಿದೇವಿ ನಿಮ್ಮನ್ನು ಬಿಟ್ಟು ಹೋಗುವ ಮಾತೇ ಇಲ್ಲ.. ಎಲ್ಲಿ ನೋಡಿದ್ರೂ ದುಡ್ಡೇ ದುಡ್ಡು!

Hasta Rekha: ನಲವತ್ತೆರಡು ವರ್ಷ ಆಯ್ತು ದುಡಿಯುವ ವಯಸ್ಸಿನ ಮುಕ್ಕಾಲು ಭಾಗ ಕಳ್ದು ಹೋಯ್ತು, ನನ್ನ ಹಣೆಯಲ್ಲಿ ಭಾಗ್ಯದ ಬಾಗಿಲು ತೆರೆಯುವ ದಿನವೇ ಬರೆದಿಲ್ಲವೇನೋ ಎಂದು ಅನ್ನಿಸಬಹುದು. ಏಷ್ಟು ದುಡಿದರೂ ಸಾಲದ (EMI) ಕಂತು ಕಟ್ಟಲಿಕ್ಕೆ ದುಡಿಮೆ ಸರಿ ಆಗಿ ಹೋಗತ್ತೆ. ಬದುಕಿನ ಸುಂದರ ಕನಸುಗಳೆಲ್ಲ ನನ್ನೊಂದಿಗೆ ಕನಸುಗಳಾಗಿಯೇ ಉಳಿದು ಬಿಡುತ್ತವೋ ಏನೋ ಅಂದುಕೊಳ್ಳುವಷ್ಟರಲ್ಲಿ ನಂಬಲೂ ಅಸಾಧ್ಯ ಆದ ಹಾಗೇ ಏನೋ ಒಂದು ಹೊಸ ದಾರಿ ಕಾಣುತ್ತದೆ. ಇದು ವಿದೇಶಕ್ಕೆ ಹೋಗುವ ಮತ್ತು ಚೆನ್ನಾಗಿ ಗಳಿಸುವ ಅವಕಾಶ ಇರಬಹುದು ಅಥವಾ ಹೊಸ ವ್ಯಾಪಾರದ ಅವಕಾಶವಿರಬಹುದು. ಬದುಕಿನಲ್ಲಿ ಯಾವುದೋ ಒಂದು ದೊಡ್ಡ ಭಾಗ್ಯದ ಬಾಗಿಲು ತೆರೆಯುತ್ತದೆ. ಇದನ್ನೂ ಓದಿ: Hasta Rekha: ಅಬ್ಬಬ್ಬಾ ಕೈನಲ್ಲಿ ಈ ರೇಖೆ ಇದ್ರೆ ಆ ವ್ಯಕ್ತಿಯ ಸ್ವಭಾವ ಎಂಥದ್ದು ಗೊತ್ತಾ? ಸೆಲ್ಫ್ ಮೇಡ್ ಮ್ಯಾನ್ ಅಂದ್ರೆ ಇವರೇ ನೋಡಿ!

ಎರಡು ಮೂರು ವರ್ಷಗಳ ಅವಧಿಯಲ್ಲಿಯೇ ಭಾರೀ ಅಭಿವೃದ್ಧಿ ಕಾಣುತ್ತದೆ. 46-47 ವಯಸ್ಸಿಗೆ ಮೊದಲು ನಾನು ಹೀಗಿದ್ದೆ ಎಂಬುದನ್ನು ನಂಬಲು ಸಾಧ್ಯ ಆಗದಷ್ಟು ಎತ್ತರಕ್ಕೆ ಬೆಳೆದಿರುತ್ತೇವೆ. ಕೇವಲ ಹತ್ತು ಹನ್ನೆರಡು ವರ್ಷಗಳ ಅವಧಿಯಲ್ಲಿ ತನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಷ್ಟು ದೊಡ್ಡ ಪ್ರಮಾಣದಲ್ಲಿ ಧನ ಆದಾಯವಾಗುತ್ತದೆ. ಸಮಾಜದಲ್ಲಿ ಗೌರವವೂ ಅದೇ ತರಹ ಸಿಗುತ್ತದೆ.

ಇವರು ಮಾತಿನಲ್ಲಿ ಸ್ವಲ್ಪ ಒರಟುತನ ಇದ್ದರೂ ಒಳ್ಳೆಯ ಹೃದಯವಂತರಾಗಿರುತ್ತಾರೆ. ಇವರಿಗೆ ಇವರ ಬಾಳ ಸಂಗಾತಿಯ ಸಹಾಯವು ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಖರ್ಚು ವೆಚ್ಚದ ವಿಚಾರವಾಗಿ ತುಂಬಾ ಜಾಗರೂಕರಾಗಿರುತ್ತಾರೆ. ಅವರ ಅಭಿವೃದ್ಧಿಯನ್ನು ನೋಡಿ ತಮಗೆ ತಾವೇ ಕನಸಲ್ಲಿದ್ದೆವೋ ಅಥವಾ ನಿಜವಾಗಿಯೂ ಬದುಕಿನಲ್ಲಿ ಹೀಗೆಲ್ಲಾ ನಡೆಯುತ್ತಿದೆಯೋ ಎನ್ನುವಷ್ಟು ಮಟ್ಟಿಗೆ ಬೆಳೆಯುತ್ತಾರೆ. ಇವರ ಗಳಿಕೆ ಏನಿದ್ದರೂ ಅದು ಸ್ವಂತದ ಕಾರಣಕ್ಕೆ ವಿನಿಯೋಗವಾಗುತ್ತದೆ ವಿನಹ ಸಾಮಾಜಿಕ ಕಾರ್ಯಗಳಲ್ಲಿ ಉಪಯೋಗವಾಗುವುದು ಬಹಳ ಕಡಿಮೆ. ಒಳ್ಳೆಯ ಆರೋಗ್ಯ ಪಡೆದಿರುತ್ತಾರೆ. ಮತ್ತೊಬ್ಬನ ಕಷ್ಟಕ್ಕೆ ಮನ ಮಿಡಿಯುವುದು ಕಡಿಮೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

ಹಸ್ತದ ಮಧ್ಯದಿಂದ ಪ್ರಾರಂಭವಾಗುವ ಇಂತಹ ಒಂದು ಧನರೇಖೆಯು ಗುರುಪರ್ವಕ್ಕೆ ಸಾಗಿದರೆ ಈ ಎಲ್ಲಾ ಫಲಗಳು ಇರುತ್ತವೆ.

Comments are closed.