Political news: ಬಂದ ಬಂದ ಮತ್ತೆ ಬಂದ ಪ್ರಕಾಶ್ ರಾಜ್- ಕಾಂಗ್ರೆಸ್ ಗೆದ್ದ ತಕ್ಷಣ ಹೇಳಿದ್ದೇನು ಗೊತ್ತೇ?? ಕರುನಾಡಿನ ಜನತೆಗೆ ಹೇಳಿದ್ದೇನು ಗೊತ್ತೇ??

Political news: ಕರ್ನಾಟಕ ವಿಧಾನಸಭಾ ಚುನಾವಣೆ ನಿನ್ನೆಯಷ್ಟೇ ಹೊರಬಿದ್ದಿದೆ. ಮೇ 10ರಂದು ಎಲೆಕ್ಷನ್ (Election) ನಡೆದು, ನಿನ್ನೆ ಮೇ 13 ರಂದು ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಪಕ್ಷ ಬರೋಬ್ಬರಿ 135 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸುವ ಮೂಲಕ ಬಹುಮತ ಪಡೆದಿದೆ. ಡಿಕೆ ಶಿವಕುಮಾರ್ (D.K shivkumar) ಮತ್ತು ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ (Congress party) ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷ ಬಹುಮತ ಪಡೆದಿರುವುದಕ್ಕೆ ಸಾಕಷ್ಟು ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: Film New: ದೇಶವೇ ತಿರುಗಿ ನೋಡುವಂತೆ ಮತ್ತೊಂದು ಅದೃಷ್ಟ ಪಡೆದ ರಶ್ಮಿಕಾ ಮಂದಣ್ಣ- ಕರುನಾಡಿನ ಮಗಳಿಗೆ ಅದೃಷ್ಟ. ಏನಾಗಿದೆ ಗೊತ್ತೇ?

ಇದೀಗ ನಟ ಪ್ರಕಾಶ್ ರಾಜ್ ಅವರು ಕೂಡ ಟ್ವೀಟ್ ಮಾಡುಗ ಕಾಂಗ್ರೆಸ್ ಪಕ್ಷಕ್ಕೆ ವಿಶ್ ಮಾಡಿ ಬಿಜೆಪಿಯನ್ನು ಟೀಕೆ ಮಾಡಿದ್ದಾರೆ. ಪ್ರಧಾಮಂತ್ರಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಂತೆಯೇ ಕಾಣುವ ಒಂದು ಫೋಟೋ ಶೇರ್ ಮಾಡಿ, ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ. ಕನ್ನಡಿಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “Thank you Karnataka for Kicking OUT Hatred and Bigotry ..The Emperor is NAKED …

ದ್ವೇಶ…ಬೂಟಾಟಿಕೆಯನ್ನು …ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ದನ್ಯವಾದಗಳು ..ಬೆತ್ತಲೆಯಾದ ಚಕ್ರವರ್ತಿ..” ಎಂದು ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಈಗ ವೈರಲ್ ಆಗುತ್ತಿದೆ. ಈ ಮೊದಲು ಕೂಡ ಪ್ರಕಾಶ್ ರಾಜ್ ಅವರು ಬಿಜೆಪಿ ಪಕ್ಷದ ನಿಲುವುಗಳನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ ಪ್ರಕಾಶ್ ರಾಜ್. ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದಾಗಲು ಪ್ರಶ್ನೆ ಮಾಡಿದ್ದರು. ಈಗ ಕಾಂಗ್ರೆಸ್ ಗೆದ್ದ ನಂತರ ಈ ರೀತಿ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರು ಮಾತ್ರವಲ್ಲದೆ ಇನ್ನು ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಮಿಳಿನ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಸಹ ರಾಹುಲ್ ಗಾಂಧಿ ಅವರೊಡನೆ ಇರುವ ಫೋಟೋ ಶೇರ್ ಮಾಡಿ, ಶುಭಾಶಯ ತಿಳಿಸಿ, ರಾಹುಲ್ ಗಾಂಧಿ ಅವರನ್ನು ಹೊಗಳಿದ್ದಾರೆ. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

Comments are closed.