The Kerala story: ದೇಶದೆಲ್ಲೆಡೆ ಸಂಚಲನ ಮೂಡಿಸುತ್ತಿರುವ ಕೇರಳ ಸ್ಟೋರಿ ಸಿನೆಮಾಗೆ ಆಧಾ ಶರ್ಮ ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

The Kerala story: ಈಗ ಭಾರತ ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ದಿ ಕೇರಳ ಸ್ಟೋರಿ. ವಿವಾದಗಳಿಂದಲೇ ಈ ಸಿನಿಮಾ ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಕೇರಳ ರಾಜ್ಯ (Kerala) ದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಚಿತ್ರೀಕರಣ ಮಾಡಿರುವ ಸಿನಿಮಾ ಇದಾಗಿದ್ದು, ಸಾಕಷ್ಟು ಜನರು ಸಿನಿಮಾ ನೋಡಿ, ಪ್ರತಿ ಹೆಣ್ಣುಮಕ್ಕಳು ಕೂಡ ಈ ಸಿನಿಮಾ ನೋಡಲೇಬೇಕು, ನೋಡಿ ಕಲಿತುಕೊಳ್ಳಬೇಕು ಎನ್ನುತ್ತಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾವನ್ನು ಒಂದು ಪಕ್ಷದವರು ಬೆಂಬಲಿಸಿದರೆ, ಇನ್ನೊಂದು ಪಕ್ಷದವರು ವಿರುದ್ಧವಾಗಿ ನಿಂತಿದ್ದರು, ಬಿಡುಗಡೆಗಿಂತ ಮೊದಲು ಈ ಸಿನಿಮಾ ಬ್ಯಾನ್ ಆಗಬೇಕು, ಸ್ಟೇ ತರಬೇಕು ಎಂದು ಕೆಲವರು ಕೋರ್ಟ್ (Court) ಮೊರೆ ಹೋಗಿದ್ದರು. ಆದರೆ ಕೋರ್ಟ್ ಇಂದ ಅವರಿಗೆ ಉಪಯೋಗ ಅಗುವಂಥ ತೀರ್ಪು ಬರಲಿಲ್ಲ. ಕೊನೆಗೆ ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

ತಮಿಳುನಾಡು, ವೆಸ್ಟ್ ಬೆಂಗಾಲ್ ಈ ರಾಜ್ಯಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಸಿನಿಮಾವನ್ನು ಬಿಡುಗಡೆ ಮಾಡದೆ ನಿಷೇಧ ಮಾಡಲಾಗಿದೆ. ಆದರೆ ಕೇರಳ ಸ್ಟೋರಿ ಸಿನಿಮಾ ಉತ್ತಮವಾಗಿಯೇ ಪ್ರದರ್ಶನ ಕಾಣುತ್ತಾ, 100 ಕೋಟಿ ರೂಪಾಯಿಗಿಂತ ಹೆಚ್ಚು ಹಣಗಳಿಕೆ ಮಾಡಿ, ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ನಟಿ ಅದಾ ಶರ್ಮ. ಬಾಲಿವುಡ್ ನ ಈ ನಟಿ ಸೌತ್ ನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

15 ವರ್ಷಗಳಿಂದ ಅದಾ ಶರ್ಮ ಅವರು ಚಿತ್ರರಂಗದಲ್ಲಿ ಇದ್ದರು ಸಹ ಅವರಿಗೆ ಬಿಗ್ ಬ್ರೇಕ್ ತಂದುಕೊಟ್ಟಿರುವುದು ದಿ ಕೇರಳ ಸ್ಟೋರಿ. ಈ ಸಿನಿಮಾ ನಂತರ ಅದಾ ಶರ್ಮ ಅವರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಇನ್ನು ಕೇರಳ ಸ್ಟೋರಿ ಸಿನಿಮಾಗೆ ಇವರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಚರ್ಚೆ ಆಗುತ್ತಿದೆ, ಈ ಸಿನಿಮಾವನ್ನು 40 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದು, ಅದಾ ಶರ್ಮ ಅವರಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

Comments are closed.