TATA: ನಮ್ಮನ್ನು ಆಳಿದ್ದ ಆಂಗ್ಲರ ನಾಡಿನಲ್ಲಿಯೇ ಟಾಟಾ ಹವಾ ಶುರು- ದೊಡ್ಡ ಘೋಷಣೆ ಮಾಡಿ ಇಂಗ್ಲೆಂಡ್ ಗೆ ಎಂಟ್ರಿ ಕೊಟ್ಟ ಟಾಟಾ.

TATA: ನಮ್ಮ ದೇಶದ ಖ್ಯಾತ ಟಾಟಾ ಮೋಟಾರ್ಸ್ ಸಂಸ್ಥೆಯು ಈಗ ಇವಿ ವಾಹನಗಳನ್ನು ತಯಾರಿಸುತ್ತಿದ್ದು, ಸೇಲ್ಸ್ ಟಾಪ್ ಸ್ಥಾನದಲ್ಲಿದೆ. ಹಾಗೆಯೇ ಆಂಗ್ಲರ ನಾಡು ಇಂಗ್ಲೆಂಡ್ ಗೆ ಎಂಟ್ರಿ ಕೊಟ್ಟಿದೆ. ಈ ಎಲ್ಲ ಯಶಸ್ಸಿಗೆ ಟಿಯಾಗೊ ಇವಿ, ಟಿಗೊರ್ ಇವಿ ಹಾಗೂ ನೆಕ್ಸಾನ್ ಇವಿ ಕಾರ್ ಗಳು ಪ್ರಮುಖ ಕಾರಣವಾಗಿದೆ.. ಕ್ಗ ಟಾಟಾ ಸಂಸ್ಥೆಯು ಬ್ರಿಟನ್ ನಲ್ಲಿ ಹೆಸರು ಮಾಡುವ ನಿರ್ಧಾರ ಮಾಡಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ತಯಾರಿಕಾ ಘಟಕವನ್ನು ಇಂಗ್ಲೆಂಡ್ ನಲ್ಲಿ ಸ್ಥಾಪಿಸಲು ಮುಂದಾಗಿದೆ.

ಇದಕ್ಕಾಗಿ 4 ಶತ ಕೋಟಿ ಪೌಂಡ್ ಖರ್ಚು ಮಾಡಲು ಮುಂದಾಗಿದ್ದು, ಇದರ ಬಗ್ಗೆ ಘೋಷಣೆ ಸಹ ಮಾಡಿದೆ. ಇಂಗ್ಲೆಂಡ್ ನ, ಸೋಮರ್ ಸೆಟ್ ನ ಬ್ರಿಡ್ಜ್ ವಾಟರ್ ನಲ್ಲಿ ಶುರುವಾಗಲಿದೆ. ಇಲ್ಲಿ ಘಟಕ ಸ್ಥಾಪಿಸಿ, ಇಲ್ಲಿಂದ ಟಾಟಾ ಸಂಸ್ಥೆಯ ಜಾಗ್ವರ್ ಲ್ಯಾನ್ಡ್ ರೋವರ್, ಹಾಗೂ ಇನ್ನಿತರ ಕಾರ್ ಗಳಿಗೆ ಬ್ಯಾಟರಿ ಉತ್ಪಾದನೆ ಮಾಡಲಿದೆ. ಇಷ್ಟು ದೊಡ್ಡ ಹೂಡಿಕೆಯ ಫ್ಯಾಕ್ಟರಿ 2026ರಿಂದ ಶುರುವಾಗಬಹುದು ಎನ್ನಲಾಗಿದೆ.

ಭಾರತ ದೇಶ ಹೊರತುಪಡಿಸಿ, ಬೇರೆ ದೇಶದಲ್ಲಿ ಟಾಟಾ ಸಂಸ್ಥೆ ಶುರು ಮಾಡುತ್ತಿರುವ ಮೊದಲ ಘಟಕ ಇದು ಇದು ಯುರೋಪ್ ನಲ್ಲಿ ಅತಿದೊಡ್ಡ ಉತ್ಪಾದನಾ ಘಟಕ ಆಗಲಿದೆ. ಈ ಬಗ್ಗೆ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಆಗಿರುವ ನಟರಾಜನ್ ಚಂದ್ರದೇಖರ್ ಅವರು ಮಾತನಾಡಿ, “ಇಂಗ್ಲೆಂಡ್ ನಲ್ಲಿ ಯುರೋಪ್ ನ ಅತ್ಯಂತ ದೊಡ್ಡದಾದ ಬ್ಯಾಟರಿ ಸೆಲ್ ಉತ್ಪಾದನಾ ಘಟಕದ ಸ್ಥಾಪನೆ ಮಾಡಲಿದೆ ಎನ್ನುವ ವಿಷಯ ಘೋಷಿಸಲು ಬಹಳ ಸಂತೋಷವಿದೆ.

ಈ ದೊಡ್ಡ ಉತ್ಪಾದನಾ ಘಟಕ ಎಲೆಕ್ಟ್ರಿಕ್ ವಾಹನಗಳಿಗೆ ಉಪಯುಕ್ತ ಆಗುವ ಬದಲಾವಣೆಗೆ ಸಹಾಯ ಮಾಡುತ್ತದೆ..” ಎಂದಿದ್ದಾರೆ. ಈ ಬಗ್ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಯುಕೆ ಆಟೋಮೊಬೈಲ್ ಕ್ಷೇತ್ರದಲ್ಲಿ ಇದು ಅತಿ ಹೆಚ್ಚಿನ ಹೂಡಿಕೆ ಆಗಿದೆ. ಈ ದೇಶದಲ್ಲಿ ಸೃಜನಶೀಲತೆ ಇರುವ ಸಾಕಷ್ಟು ಜನರಿಗೆ ಉದ್ಯೋಗ ನೀಡುತ್ತದೆ. ಗ್ಲೋಬಲ್ ಲೆವೆಲ್ ನಲ್ಲಿ ಬ್ರಿಟನ್ 0 ಹೊರಸೂಸುವಿಕೆಯ ಕಡೆಗೆ ಸಾಗುವುದನ್ನು ಪ್ರೋತ್ಸಾಹಿಸುತ್ತದೆ.

ಹಾಗೆಯೇ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.” ಎಂದಿದ್ದಾರೆ. ಸ್ಪೇನ್ ನಲ್ಲಿ ಬ್ಯಾಟರಿ ಉತ್ಪಾದನಾ ಘಟಕ ಶುರು ಮಾಡಬೇಕು ಎನ್ನುವುದು ಟಾಟಾ ಸಂಸ್ಥೆಯ ಉದ್ದೇಶ ಆಗಿತ್ತು, ಆದರೆ ಬ್ರಿಟನ್ ಜೊತೆಗಿನ ಮಾತುಕತೆ ಸ್ಟ್ರಾಂಗ್ ಆದ ನಂತರ ಬ್ರಿಟನ್ ನಲ್ಲಿ ಸ್ಥಾಪನೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಈ ಘಟಕ ಶುರುವಾದರೆ, ಯುರೋಪ್ ನಲ್ಲಿ ಟಾಟಾ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ, ಹಾಗೆಯೇ 4 ಸಾವಿರಕ್ಕಿಂತ ಹೆಚ್ಚು ಜನರಿಗೆ ಕೆಲಸ ಸಿಗುವ ಭರವಸೆ ಇದೆ..

Comments are closed.