September Horoscope: ಸಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾದ್ರೆ, ಇನ್ನೂ ಕೆಲವು ರಾಶಿಯವರು ಇದ್ದಿದ್ದನ್ನೂ ಕಳೆದು ಕೊಳ್ಳುತ್ತಾರೆ: 12 ರಾಶಿಗಳ ಭವಿಷ್ಯ ಹೇಗಿದೆ ನೋಡಿ!

September Horoscope: ಮೇಷರಾಶಿ: ವೃತ್ತಿ ಮತ್ತು ವ್ಯಾಪಾರ ಜೀವನದಲ್ಲಿ ಉತ್ತಮ ದಿನಗಳನ್ನು ಕಾಣುತ್ತೀರಿ ಸೆಪ್ಟೆಂಬರ್ ಆರಂಭದಿಂದಲೇ ನಿಮಗೆ ಎಲ್ಲಾ ರೀತಿಯ ಒಳ್ಳೆಯ ಸುದ್ದಿಗಳು ಕಿವಿಗೆ ಬೀಳುತ್ತವೆ. ಆದರೆ ಸಪ್ಟೆಂಬರ್ ಮೊದಲ ವಾರದಿಂದ ನೀವು ಹಣಕಾಸಿನ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಇಲ್ಲವಾದರೆ ಆರ್ಥಿಕ ಸಮಸ್ಯೆ ನಿಮಗೆ ಕಾಡಬಹುದು.  ತಿಂಗಳ ಎರಡನೇ ವಾರದಲ್ಲಿ ವೃತ್ತಿ ಹಾಗೂ ವ್ಯಾಪಾರ ಜೀವನಕ್ಕೆ ಸಂಬಂಧಪಟ್ಟ ಹಾಗೆ ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ ಆದರೆ ಈ ಸಮಯದಲ್ಲಿ ಸಂಬಂಧಪಟ್ಟವರು ಕೊಡುವ ಸಲಹೆಗಳನ್ನು ನಿರ್ಲಕ್ಷಿಸಬೇಡಿ. ಯಾವುದೇ ಕಾರಣಕ್ಕೂ ಹಠಮಾರಿತನದಿಂದ ಕೆಲಸವನ್ನು ಆತುರವಾಗಿ ಮಾಡಲು ಹೋಗಬೇಡಿ. ಸೆಪ್ಟೆಂಬರ್ ಕೊನೆಯಲ್ಲಿ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಮಯವನ್ನು ಕಳೆಯಬಹುದು. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು ತಾಯಿಯ ಜೊತೆಗಿನ ಸಂಬಂಧದಲ್ಲಿ ಸಮಸ್ಯೆ ಉಂಟಾಗಿ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಿ.

ಪರಿಹಾರ: ಸುಂದರಕಾಂಡವನ್ನು ಪಠಿಸಿ ಹಾಗೂ ಹನುಮಂತನ ಧ್ಯಾನ ಮಾಡಿ.

ವೃಷಭ ರಾಶಿ: ಧನಾತ್ಮಕವಾಗಿಯೇ ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತದೆ ಉದ್ಯೋಗದಲ್ಲಿ ನಿರೀಕ್ಷೆ ಮಾಡದೆ ಇರುವಷ್ಟು ಪ್ರಗತಿ ಸಾಧಿಸುತ್ತೀರಿ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡರು ಕೂಡ ಉತ್ತಮ ಆದಾಯ ಗಳಿಸುತ್ತೀರಿ. ಹೊಸ ಸ್ಥಳಗಳಿಗೆ ಭೇಟಿ ಹೊಸಬರ ಪರಿಚಯ ಆಗುವ ಸಾಧ್ಯತೆ ಇದೆ. ಸಪ್ಟೆಂಬರ್ 2ನೇ ವಾರ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಯಾಕೆಂದರೆ ನೀವು ನಿಮ್ಮ ಸುತ್ತಮುತ್ತಲು ಇರುವವರಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳಲು ಆರಂಭಿಸುತ್ತೀರಿ. ಪ್ರೀತಿ ಪ್ರೇಮನ ವಿಚಾರದಲ್ಲಿ ಈ ತಿಂಗಳು ಅಷ್ಟು ಉತ್ತಮವಾಗಿಲ್ಲ ಸಂಗಾತಿಯ ಜೊತೆಗೆ ಮನಸ್ತಾಪ ಉಂಟಾಗುವ ದಿನಗಳೆ ಹೆಚ್ಚು. ವ್ಯಾಪಾರ ವ್ಯವಹಾರದಲ್ಲಿ ಸೆಪ್ಟೆಂಬರ್ ಕೊನೆಯ ಭಾಗದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು.

ಪರಿಹಾರ: ದುರ್ಗಾದೇವಿಯ ಪಠಣೆ ಹಾಗೂ ಪೂಜೆ ಮಾಡಿ.

ಮಿಥುನ ರಾಶಿ: ಸೆಪ್ಟೆಂಬರ್ ತಿಂಗಳಿನಲ್ಲಿ ನಿಮಗೆ ಆರ್ಥಿಕವಾಗಿ ಸ್ವಲ್ಪ ಬಿಗುವಿನ ಪರಿಸ್ಥಿತಿ ಇರುತ್ತದೆ ನೀವು ಈ ತಿಂಗಳು ಸ್ವಲ್ಪವೂ ಅಹಂಕಾರ ತೋರದೆ ಎಲ್ಲರೊಂದಿಗೆ ಸರಿಯಾಗಿ ಮಾತನಾಡಿಕೊಂಡು ಬೆರೆತುಕೊಂಡು ಇದ್ದರೆ ಮಾತ್ರ ಸ್ವಲ್ಪವಾದರೂ ಸಕ್ಸಸ್ ಸಿಗಲು ಸಾಧ್ಯ ಸೆಪ್ಟೆಂಬರ್ ತಿಂಗಳ ದ್ವಿತೀಯಾರ್ಧದಲ್ಲಿ ಯಾವುದೇ ರೀತಿಯ ಹೊಸ ವ್ಯವಹಾರ ಮಾಡುವುದು ಅಥವಾ ಈಗಿರುವ ವ್ಯವಹಾರದಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಹೆಚ್ಚು ವಿಚಾರ ಮಾಡಿ ಈ ಸಂದರ್ಭದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮಗೆ ದೀರ್ಘಕಾಲದ ಸಮಸ್ಯೆಯನ್ನು ಉಂಟು ಮಾಡಬಹುದು ಪ್ರೇಮ ಸಂಬಂಧದಲ್ಲಿ ಅಷ್ಟು ಉತ್ತಮವಾದ ದಿನಗಳನ್ನು ನೀವು ಕಾಣುವುದಿಲ್ಲ ಇನ್ನು ನಿರುದ್ಯೋಗಿಗಳು ಯಾವುದೇ ಅವಕಾಶ ಬಂದರೂ ಕೂಡ ಬಿಟ್ಟು ಕೊಡಬೇಡಿ. ಒಟ್ಟಿನಲ್ಲಿ ಮಿಥುನ ರಾಶಿಯವರು ಸೆಪ್ಟೆಂಬರ್ ತಿಂಗಳಿನಲ್ಲಿ ಬಹಳ ಜಾಗರೂಕತೆಯಿಂದ ಹಾಗೂ ಮುತುವರ್ಜಿಯಿಂದ ವರ್ತಿಸುವುದು ಮುಖ್ಯ.

ಪರಿಹಾರ ಸೂರ್ಯನಿಗೆ ಆರೋಗ್ಯವನ್ನು ಸಮರ್ಪಣೆ ಮಾಡಿ ಶ್ರೀ ನಾರಾಯಣನ ಪಠಣೆ ಮಾಡಿ.

ಕರ್ಕ ರಾಶಿ: ಸೆಪ್ಟೆಂಬರ್ ತಿಂಗಳಿನಲ್ಲಿ ಏರು ಪೇರು ಗಳು ಇದ್ದೇ ಇರುತ್ತವೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೋರ್ಟು ಕಚೇರಿ ಅಂತ ಪದೇ ಪದೇ ಅಲೆಯಬೇಕಾದ ಪರಿಸ್ಥಿತಿ ಬರಬಹುದು. ಇದರ ಜೊತೆಗೆ ಉದ್ಯೋಗದಲ್ಲಿ ಇರುವವರಿಗೆ ಹೆಚ್ಚಿನ ಒತ್ತಡ ಉಂಟಾಗಬಹುದು ವ್ಯಾಪಾರದಲ್ಲಿ ತಿಂಗಳ ಮೊದಲಾರ್ಥಕಿಂತ ತಿಂಗಳ ದ್ವಿತೀಯ ಅರ್ಥದಲ್ಲಿ ಹೆಚ್ಚು ಲಾಭ ಸಿಗುತ್ತದೆ. ಮಿಥುನ ರಾಶಿಯವರು ನಷ್ಟವನ್ನು ಅನುಭವಿಸದೆ ಇರಲು ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡದೆ ಇರುವುದು ಉತ್ತಮ. ಇಷ್ಟೆಲ್ಲಾ ಒತ್ತಡದ ನಡುವೆಯೂ ನಿಮ್ಮ ಪ್ರೀತಿ ಪಾತ್ರರ ಮುತ್ತಿನಂತಹ ಮಾತುಗಳು ನಿಮಗೆ ಶ್ರೀರಕ್ಷೆ ಆಗಲಿದೆ. ತೀರ್ಥಯಾತ್ರೆಗೆ ಹೋಗುವ ಸಂದರ್ಭ ಬರಬಹುದು ವ್ಯಾಪಾರ ವ್ಯವಹಾರಕ್ಕಾಗಿ ಹೋಗುವ ಪ್ರಯಾಣ ಶುಭಫಲವನ್ನು ತರುತ್ತದೆ. ವಿದ್ಯಾರ್ಥಿಗಳು ಬಹಳ ಮುತುವರ್ಜಿಯಿಂದ ಓದಬೇಕು. ಆರೋಗ್ಯದ ವಿಚಾರಕ್ಕೆ ಬಂದರೆ ಸೆಪ್ಟೆಂಬರ್ ತಿಂಗಳು ದಣಿವಿನಿಂದ ಕೂಡಿರುತ್ತದೆ ಎನ್ನಬಹುದು.

ಪರಿಹಾರ: ಶಿವಲಿಂಗಕ್ಕೆ ನೀರು ಎರಡು ಪೂಜೆ ಮಾಡಿ ಶಿವ ಮಹಿಮನ ಶ್ಲೋಕವನ್ನು ಪಠಿಸಿ.

ಸಿಂಹ ರಾಶಿ: ಸೆಪ್ಟೆಂಬರ್ ತಿಂಗಳು ಮಿಶ್ರಫಲವನ್ನು ನೀಡಲಿದೆ ಹಠಾತ್ ತೀರ್ಥಯಾತ್ರೆಗೆ ಹೋಗುವ ಸಂದರ್ಭ ಬರಬಹುದು ಉದ್ಯೋಗದಲ್ಲಿ ಹೆಚ್ಚು ಅನುಕೂಲತೆ ಇದ್ದರೂ ಕೂಡ ಒತ್ತಡ ಹೆಚ್ಚಾಗಿರುತ್ತದೆ ಆದರೆ ಹಿರಿಯರ ಸಹಕಾರ ನಿಮ್ಮ ಜೊತೆಗೆ ಇರುತ್ತದೆ ಎಂಬುದನ್ನು ಮರೆಯಬೇಡಿ. ವಿಷಾರಾಮಿ ವಸ್ತುಗಳನ್ನು ಖರೀದಿ ಮಾಡಲು ಹೋಗಿ ಕೈಯಲ್ಲಿ ಇರುವ ಹಣವನ್ನೆಲ್ಲ ಖರ್ಚು ಮಾಡಿಕೊಳ್ಳಬಹುದು. ಇನ್ನು ದ್ವಿತೀಯಾರ್ಧದಲ್ಲಿ ಮೊದಲ ವಾರಕ್ಕಿಂತಲೂ ಹೆಚ್ಚಿನ ಹಣದ ಲಾಭ ಸಿಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು. ಉದ್ಯೋಗದಲ್ಲಿಯೂ ಕೂಡ ಹೆಸರು ಬರಬಹುದು. ಇದರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಕೂಡ ಬಹಳ ಮುಖ್ಯ.

ಪರಿಹಾರ: ಶ್ರೀಗಂಧದ ತಿಲಕವನ್ನು ಶ್ರೀಮನ್ನಾರಾಯಣನಿಗೆ ಅರ್ಪಿಸಿ. ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ.

ಕನ್ಯಾ ರಾಶಿ: ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಬಹಳ ಅತ್ಯುತ್ತಮ ಸಮಯ ಎನ್ನಬಹುದು ಬಹುಕಾಲದಿಂದ ನಿಂತು ಹೋಗಿದ್ದ ಕೆಲಸಗಳೆಲ್ಲವೂ ಸ್ನೇಹಿತರ ಸಹಾಯದಿಂದ ಸಂಪೂರ್ಣವಾಗಲಿದೆ. ಐಷಾರಾಮಿ ವಸ್ತುಗಳನ್ನು ಕೂಡ ಖರೀದಿ ಮಾಡಬಹುದು ಹಣದ ಮೂಲ ಹೆಚ್ಚಾಗಲಿದೆ ನಿಮಗೆ ಗೊತ್ತಿದ್ದು ಗೊತ್ತಿಲ್ಲದೆಯೋ ನೀವು ಮಾಡುವ ಕೆಲಸದ ಸ್ಥಳದಲ್ಲಿ ಬಹಳ ದೊಡ್ಡ ಯಶಸ್ಸು ಸಿಗುತ್ತದೆ ಹಾಗಾಗಿ ಆರ್ಥಿಕವಾಗಿ ಯಾವ ಸಮಸ್ಯೆಯೂ ಕೂಡ ನಿಮ್ಮನ್ನು ಕಾಡುವುದಿಲ್ಲ. ತೀರ್ಥಯಾತ್ರೆಗೆ ಹೋಗುವ ಸುಯೋಗ ಇದೆ ಮನೆಯಲ್ಲಿ ಸಂಗಾತಿಯ ಜೊತೆಗೆ ಬಹಳ ಚೆನ್ನಾಗಿ ದಿನಗಳನ್ನು ಕಳೆಯುತ್ತೀರಿ. ಆರೋಗ್ಯದ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಲ್ಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗಂತೂ ಇದು ಅತ್ಯುತ್ತಮ ಸಮಯ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರುತ್ತದೆ.

ಪರಿಹಾರ: ಗಣಪತಿಗೆ ದರ್ಬೆ ಅಥವಾ ದೂರ್ವ ಅರ್ಪಿಸಿ ಪೂಜೆ ಮಾಡಿ ಕೃತರ್ಥರಾಗಿ.

ತುಲಾ ರಾಶಿ: ಸೆಪ್ಟೆಂಬರ್ ತಿಂಗಳಿನ ಆರಂಭದಲ್ಲಿ ಕೆಲಸದ ಸಲುವಾಗಿ ಸಿಕ್ಕಾಪಟ್ಟೆ ಓಡಾಟ ಮಾಡಬೇಕಾಗಬಹುದು. ಆದರೆ ಆಶ್ಚರ್ಯವೆಂದರೆ ನೀವು ಮಾಡಿರುವ ಓಡಾಟಕ್ಕೆ ನಿಮಗೆ ಸರಿಯಾದ ಫಲ ಸಿಗಲಿದೆ. ಕೆಲಸದಲ್ಲಿ ನಿಮ್ಮ ಬೆಸ್ಟ್ ನೀಡಲು ನೀವು ಪ್ರಯತ್ನಿಸುತ್ತೀರಿ ವ್ಯಾಪಾರಸ್ಥರು ಕೂಡ ಉತ್ತಮ ಲಾಭ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತಾರೆ ಉದ್ಯೋಗದಲ್ಲಿ ಇರುವವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಸಪ್ಟೆಂಬರ್ ತಿಂಗಳ ಎರಡನೇ ವಾರದಿಂದ ನೀವು ಯಾವುದೇ ರೀತಿಯ ಪ್ರಚೋದನೆಗಳಿಗೆ ಒಳಗಾಗಿ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಪ್ರತಿ ಬಾರಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ವ್ಯವಹರಿಸಬೇಕು. ಸೆಪ್ಟೆಂಬರ್ ತಿಂಗಳು ಎರಡನೆಯ ಭಾಗದಲ್ಲಿ ಆರ್ಥಿಕ ಸಮಸ್ಯೆ ಉಂಟಾಗಬಹುದು ಇದನ್ನು ತಪ್ಪಿಸಲು ನೀವು ಹಣದ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಆರೋಗ್ಯದಲ್ಲಿಯೂ ಒಂದಿಷ್ಟು ಏರುಪೇರು ಉಂಟಾಗಬಹುದು.

ಪರಿಹಾರ: ದುರ್ಗಾ ದೇವಿಯ ಆರಾಧನೆ ಮಾಡಿ ಶುದ್ಧ ತುಪ್ಪದಿಂದ ದೇವರಿಗೆ ದೀಪ ಹಚ್ಚಿ.

ವೃಶ್ಚಿಕ ರಾಶಿ: ಈ ತಿಂಗಳು ನಿಮಗೆ ಸವಾಲೇ ಸರಿ. ನೀವು ಏನನ್ನೇ ಪಡೆದುಕೊಳ್ಳಲು ಪ್ರಯತ್ನಿಸಿದರು ಅದಕ್ಕೆ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ ಇದರಿಂದಲೇ ಕೆಲಸದ ಸ್ಥಳದಲ್ಲಿಯೂ ಕೂಡ ಬಹಳ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಹದಗೆಡದಂತೆ ನೋಡಿಕೊಳ್ಳಲು ಹಣಕಾಸಿನ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಸಂಗಾತಿಯ ಜೊತೆಗೆ ಸಂಬಂಧ ಅಷ್ಟು ಉತ್ತಮವಾಗಿ ಇರುವುದಿಲ್ಲ ಆದರೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಹುತೇಕ ಎಲ್ಲಾ ಸಮಸ್ಯೆಗಳು ದೂರಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರು ಬಹಳ ಜಾಗರೂಕತೆಯಿಂದ ವ್ಯವಹಾರ ಮಾಡಬೇಕು. ಒಂದಲ್ಲ ಒಂದು ದಿನ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿಂದ ಶ್ರಮಪಟ್ಟು ಕೆಲಸ ಮಾಡಬೇಕು. ಆರೋಗ್ಯದ ವಿಚಾರದಲ್ಲಿಯೂ ಒತ್ತಡದ ಜೀವನದಿಂದಾಗಿ ಸ್ವಲ್ಪ ಏರುಪೇರು ಉಂಟಾಗಬಹುದು ಹಾಗಾಗಿ ಆರೋಗ್ಯದ ಬಗ್ಗೆಯೂ ಕೂಡ ಜಾಗೃತೆ ವಹಿಸಿ.

ಪರಿಹಾರ: ಶಿವನಿಗೆ ಬಿಳಿ ಚಂದನವನ್ನು ಅರ್ಪಿಸಿ. ಶಿವ ಚಾಲೀಸ ವನ್ನು ಪಠಿಸಿ.

ಧನು ರಾಶಿ: ಸೆಪ್ಟೆಂಬರ್ ತಿಂಗಳಿನಲ್ಲಿ ನೀವು ಯಾವ ರೀತಿ ಇತರರೊಂದಿಗೆ ವ್ಯವಹಾರ ಮಾಡುತ್ತಿರೋ ಅದೇ ರೀತಿ ನಿಮ್ಮ ಜೀವನವೂ ಕೂಡ ಸಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಬಹಳ ಮುತುವರ್ಜಿ ವಹಿಸಬೇಕಾಗುತ್ತದೆ ಹಾಗಾಗಿ ಮಾನಸಿಕವಾಗಿ ನೋವು ಉಂಟಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವವರೆಗೂ ಕೂಡ ಉತ್ತಮ ಫಲಿತಾಂಶ ಸಿಗುವುದಿಲ್ಲ. ಈ ತಿಂಗಳಿನಲ್ಲಿ ಗೊಂದಲದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಆತುರದಲ್ಲಿ ತೆಗೆದುಕೊಂಡ ನಿರ್ಧಾರ ನಿಮ್ಮ ಭವಿಷ್ಯಕ್ಕೆ ದೊಡ್ಡ ಸಮಸ್ಯೆ ಆಗಬಹುದು. ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ಮಾಡಬೇಕು. ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನೀವು ಕಠಿಣ ಸಮಯವನ್ನು ಕೂಡ ಯಶಸ್ವಿಯಾಗಿ ಎದುರಿಸಲು ಸಾಧ್ಯ.

ಪರಿಹಾರ: ವಿಷ್ಣುವಿಗೆ ಹಳದಿ ಹೂವುಗಳನ್ನು ಅರ್ಪಿಸಿ ಹಾಗೂ ವಿಷ್ಣುವನ್ನು ಪೂಜಿಸಿ.

ಮಕರ ರಾಶಿ: ಈ ತಿಂಗಳು ನಿಮಗೆ ಶುಭಾರಂಭ ವಾಗಲಿದೆ ಸಗಟು ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಉದ್ಯೋಗಿಗಳಿಗೆ ಭಡ್ತಿ ಸಿಗುವ ಸಾಧ್ಯತೆ ಇದೆ. ನೀವು ನಿಮ್ಮ ಪರಿಶ್ರಮದ ಕೆಲಸದಿಂದ ಯಶಸ್ಸನ್ನು ಸಾಧಿಸುತ್ತೀರಿ ಅಷ್ಟೇ ಅಲ್ಲದೆ ನಿಮ್ಮ ಪ್ರತಿ ಯೋಜನೆಗಳಿಂದ ಹಿರಿಯರನ್ನು ಮೆಚ್ಚಿಸುತ್ತೀರಿ. ಸಂಗಾತಿಯೊಂದಿಗೆ ನ ಜೀವನ ಉತ್ತಮವಾಗಿರುತ್ತದೆ ಆರ್ಥಿಕವಾಗಿ ಈ ತಿಂಗಳು ನಿಮಗೆ ಒಳ್ಳೆಯ ಸಮಯ ಎನ್ನಬಹುದು. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು ಹಾಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಜೀವನದಲ್ಲಿ ಅಪೇಕ್ಷಿತ ವ್ಯಕ್ತಿಯ ಆಗಮನ ಆಗಬಹುದು.

ಪರಿಹಾರ: ಹನುಮಂತನಿಗೆ ಬೆಲ್ಲ ತುಳಸಿ ಬೇಳೆಗಳನ್ನು ಅರ್ಪಿಸಿ ಹನುಮಾನ್ ಚಾಲೀಸಾ ಪಠಣೆ ಮಾಡಿ.

ಕುಂಭ ರಾಶಿ: ಈ ತಿಂಗಳು ನಿಮಗೆ ಹೆಚ್ಚು ಲಾಭದಾಯಕವಾಗಿರುತ್ತದೆ ಎಲ್ಲಾ ಕೆಲಸದಲ್ಲಿಯೂ ಬಹುತೇಕ ಯಶಸ್ಸನ್ನು ಸಾಧಿಸುತ್ತೀರಿ ವ್ಯಾಪಾರ ವ್ಯವಹಾರ ಮಾಡುವವರು ಜಾಗರೂಕತೆಯಿಂದ ವ್ಯವಹಾರ ಮಾಡಿದರೆ ಹೆಚ್ಚುವರಿ ಲಾಭ ಪಡೆಯಬಹುದು. ಸಂಗಾತಿಯೊಂದಿಗೆ ನ ಜೀವನ ಉತ್ತಮವಾಗಿರುತ್ತದೆ ಹೊಸ ಕೆಲಸ ಸಿಗುವ ಸಾಧ್ಯತೆ ಇದೆ ಇನ್ನು ನಿಮ್ಮ ನಡೆ-ನುಡಿ ಮಾತುಗಳು ಕೆಲಸ ಮಾಡುವ ಸ್ಥಳದಲ್ಲಿಯೂ ಕೂಡ ನಿಮ್ಮ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ ಇದರಿಂದ ಮನೆಯ ಹಿರಿಯರ ಸಂತೋಷಕ್ಕೂ ಕೂಡ ಕಾರಣವಾಗುತ್ತದೆ. ಪ್ರಭಾವಿ ವ್ಯಕ್ತಿಯನ್ನ ಭೇಟಿಯಾಗುವ ಸಾಧ್ಯತೆ ಇದೆ. ದಾನ ಧರ್ಮಗಳಲ್ಲಿ ನಂಬಿಕೆ ಇರುವವರಿಗೆ ಇಂತಹ ಕೆಲಸಗಳಿಂದ ಹೆಚ್ಚಿನ ಫಲ ಪುಣ್ಯಪ್ರಾಪ್ತಿಯಾಗಲಿದೆ. ಆರೋಗ್ಯದಲ್ಲಿ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗಬಹುದು ಹಾಗಾಗಿ ಕಾಳಜಿ ಮಾಡಿ.

ಪರಿಹಾರ: ನಿತ್ಯವೂ ಶಿವನಿಗೆ ತಾಮ್ರದ ಪಾತ್ರೆಯಿಂದ ನೀರನ್ನು ಅರ್ಪಿಸಿ. ರುದ್ರಾಷ್ಟಕ ಪಠಣ ಮಾಡಿ.

ಮೀನ ರಾಶಿ: ಈ ತಿಂಗಳು ನಿಮಗೆ ಉತ್ತಮವಾಗಿದೆ ಯಾವುದಾದರೂ ಹೊಸ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಳ್ಳಲು ಇದು ಸರಿಯಾದ ಸಮಯ. ವ್ಯಾಪಾರದಲ್ಲಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸಲು ಅವಕಾಶಗಳು ಕೂಡ ಸಿಗುತ್ತದೆ. ತಿಂಗಳಿನಲ್ಲಿ ಹಣದ ಖರ್ಚು ಕೂಡ ಅಧಿಕವಾಗಿರುವುದರಿಂದ ಹಣದ ಕರ್ಚನ್ನು ನಿರ್ವಹಿಸುವುದು ಬಹಳ ಮುಖ್ಯ ಇಲ್ಲವಾದರೆ ಆರ್ಥಿಕ ಸಮಸ್ಯೆ ಉಂಟಾಗಬಹುದು. ಕೆಲಸದ ಸಮಯದಲ್ಲಿ ಅಸಡ್ಡೆ ಮತ್ತು ಸೋಮಾರಿತನವನ್ನು ತಪ್ಪಿಸಿ. ವ್ಯಾಪಾರದಲ್ಲಿ ಯಶಸ್ಸು ಕಾಣಲು ಸಾಧ್ಯ. ಗ್ರಹಿಣಿಯರು ಧಾರ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಪರಿಹಾರ: ವಿಷ್ಣುವಿಗೆ ತುಳಸಿಯನ್ನು ಅರ್ಪಿಸಿ ವಿಷ್ಣು ಸಹಸ್ರನಾಮ ಪಠಣೆ ಮಾಡಿ.

Comments are closed.