Solar Panel: ಸರ್ಕಾರ ಕೊಡುವ ಉಚಿತ ವಿದ್ಯುತ್ತೇ ಯಾಕೇ? ನೀವೆ ಮನೆಯಲ್ಲಿಯೇ ವಿದ್ಯುತ್ ತಯಾರಿಸಿ, ಬಳಸಿ, ಬೆಸ್ಕಾಂ ಗೇ ಮಾರಾಟ ಮಾಡಿ ಆದಾಯ ಗಳಿಸಿ; ಸರ್ಕಾರದ ಸಬ್ಸಿಡಿ ಇದೆ!

Solar Panel: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೌರ ಶಕ್ತಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತೀವೆ. ಈ ಸೋಲಾರ್ ವಿದ್ಯುತ್ ಘಟಕಗಳನ್ನು ನಾವು ನಮ್ಮ ಮನೆಯ ಛಾವಣಿಯ ಮೇಲೂ ಸ್ಥಾಪಿಸಿಕೊಳ್ಳಬಹುದು. ಇದರಿಂದ ನಾವು ಸರ್ಕಾರದಿಂದ ವಿದ್ಯುತ್ ಪಡೆಯುವುದು ತಪ್ಪುತ್ತದೆ. ಅಲ್ಲದೆ ನಮಗೆ ಹೆಚ್ಚಾದ ವಿದ್ಯುತ್ನ್ನು ಸರ್ಕಾರಕ್ಕೆ ಮಾರಾಟ ಮಾಡುವುದರಿಂದ ನಾವು ಲಾಭವನ್ನೂ ಗಳಿಸಬಹುದು. ಈ ಸೋಲಾರ್ ಘಟಕ ಸ್ಥಾಪನೆಗೆ ಸರ್ಕಾರದಿಂದ ಸಹಾಯ ಧನವು ದೊರೆಯುತ್ತಿದೆ.

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿಸುತ್ತಿದ್ದರೆ ನಿಮಗೆ ಇದು ಒಂದು ಗುಡ್ ನ್ಯೂಸ್ ಇದೆ. ಬೆಸ್ಕಾಂ ಸೌರ ಗೃಹ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವವರಿಗೆ 2೦-4೦ ಪ್ರತಿಶತ ಸಹಾಯಧನ ನೀಡಲಿದೆ. ನೀವು ನಿಮ್ಮ ಮನೆಯ ಟೆರಸ್ ಅಥವಾ ಅಪಾರ್ಟ್ ಮೆಂಟ್ ಟೆರಸ್ ಮೇಲೆ ಈ ಸೋಲಾರ್ ಘಟಕ ಆರಂಭಿಸಬಹುದು. ನಿಮಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಹೆಚ್ಚಾದ ವಿದ್ಯುತ್ ಸರ್ಕಾರಕ್ಕೆ ನೀವೇ ನೀಡಬಹುದು. ಈ ರೀತಿ ನೀಡುವ ವಿದ್ಯುತ್ ಯುನಿಟ್ ಒಂದಕ್ಕೆ ಬೆಸ್ಕಾಂ 2.9೦ ರೂ. ಪಾವತಿಸುತ್ತದೆ. ಈ ರೀತಿ ನೀವು ಕನಿಷ್ಠ 25 ವರ್ಷ ಸೌರ ವಿದ್ಯುತ್ ಮಾರಾಟದಿಂದ ಹಣ ಗಳಿಸಬಹುದು. ಕಡಿಮೆ ವೆಚ್ಚ ಮಾಡಿ ಹೆಚ್ಚು ಲಾಭ ಗಳಿಸುವ ಯೋಜನೆ ಇದಾಗಿದೆ.

ಏನು ಮಾಡಬೇಕು:

ನೀವು ಬೆಂಗಳೂರಿನ ನಿವಾಸಿಯಾಗಿರಬೇಕು. ನಿಮ್ಮ ಸ್ವಂತ ಮನೆ ಅಥವಾ ಅಪಾರ್ಟ್ಮೆಂಟ್ ಟೆರಸ್ ಮೇಲೆ ಸೋಲಾರ್ ವಿದ್ಯುತ್ ಘಟಕ ಆರಂಭಿಸುವಷ್ಟು ಜಾಗ ಹೊಂದಿರಬೇಕು. ಹೀಗಿದ್ದಲ್ಲಿ ನೀವು ಬೆಸ್ಕಾಂಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಬೆಸ್ಕಾಂ ಅಧಿಕಾರಿಗಳು ಆಗಮಿಸಿ ನಿಮ್ಮ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅವರಿಗೆ ಅದು ಸೂಕ್ತ ಎನಿಸಿದಲ್ಲಿ ನಿಮಗೆ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಅನುಮತಿ ನೀಡಲಿದ್ದಾರೆ. ಈ ಮೂಲಕ ಆಯ್ಕೆಯಾದ ಗ್ರಾಹಕರು ಮೊದಲು ಶೇ.6೦ರಷ್ಟು ಪಾವತಿ ಮಾಡಬೇಕು. ನಂತರ ಬೆಸ್ಕಾಂ ಸಹಾಯಧನವನ್ನು ಮಂಜೂರಿ ಮಾಡಲಿದೆ. ಹೀಗೆ ಸೋಲಾರ್ ಘಟಕ ಸ್ಥಾಪಿಸಿದ ನಂತರ ಮೊದಲು ನಿಮ್ಮ ಮನೆಗೆ ಅಥವಾ ಅಪಾರ್ಟ್ಮೆಂಟ್ಗೆ ಎಷ್ಟು ವಿದ್ಯುತ್ ಬೇಕೋ ಅಷ್ಟನ್ನು ಉಪಯೋಗಿಸಿಕೊಳ್ಳಬಹುದು. ಹೆಚ್ಚಾದ ವಿದ್ಯುತ್ ಬೆಸ್ಕಾಂಗೆ ಮಾರಾಟ ಮಾಡಬಹುದು.

ಯಾಕೆ ಈ ಯೋಜನೆ ಜಾರಿಗೆ ತಂದಿತು ಸರ್ಕಾರ?:

ಸೌರ ಶಕ್ತಿ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ. ಈಗ ಸುಮಾರು 142 ಮೆ.ವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತದೆ. 12೦೦ ಮೆ.ವ್ಯಾ. ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಆದರೆ ಈ ಟೆರಸ್ ವಿದ್ಯುತ್ ಉತ್ಪಾದನೆಯಲ್ಲಿ ತೀರಾ ಹಿಂದುಳಿದಿದೆ.

ಹೀಗಾಗಿ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನಗಳ ಸಚಿವಾಲಯವು ಅಪಾರ್ಟ್ಮೆಂಟ್ ಹಾಗೂ ಸ್ವಂತ ಮನೆಗಳನ್ನು ಹೊಂದಿರುವ ಗ್ರಾಹಕರಿಗೆ ನೆಟ್ ಮೀಟರ್ ಆಧಾರದಲ್ಲಿ ತಮ್ಮ ಮನೆಗಳ ಛಾವಣಿಯ ಮೇಲೆ ಸೋಲಾರ್ ಘಟಕ ಆರಂಭಿಸುವ ಸಲುವಾಗಿ ಮೇಲ್ಛಾವಣಿ ಸೌರ ಶಕ್ತಿ ಘಟಕ ಸ್ಥಾಪಿಸಿ 1-1೦ ಕಿ.ವ್ಯಾ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಸಲುವಾಗಿ 2ನೇ ಹಂತದ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಹೆಚ್ಚೆಚ್ಚು  ಜನರು ಸೌರ ಶಕ್ತಿ ಘಟಕ ಹೊಂದುವಂತೆ ಪ್ರೇರೇಪಿಸಲಾಗುತ್ತದೆ. ಇದರಿಂದ ವಿದ್ಯುತ್ನಲ್ಲಿ ಸ್ವಾವಲಂಭನೆ ಸಾಧಿಸಲು ಸಹಾಯಕವಾಗಲಿದೆ.

Comments are closed.