Hotel Business: ಹೊಟೆಲ್ ಆರಂಭಿಸುವುದು ಇನ್ನೂ ಸುಲಭ; ಸರ್ಕಾರದಿಂದ ಸಿಗುತ್ತೆ ಸಹಾಯಧನ; ಕೂಡಲೇ ಅರ್ಜಿ ಸಲ್ಲಿಸಿ!

Hotel Business: ಈಗ ಪ್ರತಿಯೊಬ್ಬರು ಒಂದಿಲ್ಲೊಂದು ಉದ್ಯೋಗದಲ್ಲಿ ತೊಡಗಿರುತ್ತಾರೆ. ಆದರೆ ಕೆಲವರಿಗೆ ಎಂತಹ ಉದ್ಯೋಗ ಮಾಡಬೇಕು. ಯಾವುದಾದರೂ ಕಂಪನಿಗೆ ಕೆಲಸಕ್ಕೆ ಸೇರಬೇಕಾ? ಸ್ವಂತ ಉದ್ಯಮ ಪ್ರಾರಂಭಿಸಬೇಕಾ ಎನ್ನುವ ಗೊಂದಲ ಇರುತ್ತದೆ. ಯಾಕೆಂದರೆ ಸ್ವಂತ ಉದ್ಯಮ ಮಾಡಲು ಬಂಡವಾಳದ ಅವಶ್ಯಕತೆ ಇರುತ್ತದೆ. ಸರ್ಕಾರ ಇಂತಹ ಆರ್ಥಿಕವಾಗಿ ಹಿಂದುಳಿದವರ ನೆರವಿಗೆ ಇದ್ದು, ನೀವು ಹೊಟೇಲ್ ಉದ್ಯಮ ಸ್ಥಾಪಿಸುವುದಾದರೆ ಸರ್ಕಾರ ಸಹಾಯ ಧನ ನೀಡುತ್ತಿದೆ.

ಹೌದು, ಹಾಕಿದ ಬಂಡವಾಳಕ್ಕೆ ಮೋಸವಿಲ್ಲದ ಉದ್ಯಮವೆಂದರೆ ಅದು ಹೋಟೆಲ್ ಉದ್ಯಮ. ನೀವು ಅತ್ಯಂತ ರುಚಿಕಟ್ಟಾಗಿ, ಕಡಿಮೆ ದರದಲ್ಲಿ ನೀಡಿದಲ್ಲಿ ನೀವು ವರ್ಷದೊಳಗೆ ಲಾಭ ಗಳಿಸಲು ಆರಂಭಿಸಬಹುದು. ನಿಮ್ಮ ಶ್ರದ್ದೆ, ಪ್ರಾಮಾಣಿಕತೆ, ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ ಇಲ್ಲಿ ಮುಖ್ಯವಾಗಿರುತ್ತದೆ.

ರಾಜ್ಯ ಸರ್ಕಾರವು ವಿವಿಧ ನಿಗಮಗಳ ಅಡಿಯಲ್ಲಿ ಸ್ಥಾಪಿಸಿರುವ ಹೋಟೆಲ್ ಯೋಜನೆ ಇಂತಹ ಆರ್ಥಿಕವಾಗಿ ಸಮಸ್ಯೆ ಇರುವವರಿಗೆ ಸಹಾಯವಾಗಲಿದೆ. ಈ ಯೋಜನೆಯಡಿ ಸಸ್ಯಹಾರಿ, ಮಾಂಸಹಾರಿ ಎರಡು ರೀತಿಯ ಹೊಟೇಲ್ ಸ್ಥಾಪನೆಗೆ ಸಹಾಯಧನ ಸಿಗಲಿದೆ. 2023-24ರ ಕೇಂದ್ರ ಭೋಜನಾಲಯ ಕೇಂದ್ರ (ಖಾನಾವಳಿ)ಮಿಲ್ಟ್ರಿ ಹೊಟೇಲ್ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

ಹೊಟೇಲ್ ಉದ್ಯಮದಲ್ಲಿ ಈಗಾಗಲೇ ಅನುಭವ ಇರುವವರು ಅಥವಾ ಅಡುಗೆಯಲ್ಲಿ ಪರಿಣಿತಿ ಹೊಂದಿರುವ ವೀರಶೈವ ಲಿಂಗಾಯಿತರು, ಮರಾಠರು ಅರ್ಜಿ ಸಲ್ಲಿಸಬಹುದಾಗಿದೆ. ಈ ಸಮುದಾಯದ ಆಸಕ್ತರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಮರಾಠ ಅಭಿವೃದ್ಧಿ ನಿಗಮ ಸಾಲ ಸೌಲಭ್ಯ ನೀಡಲಿದೆ.

ಈ ಹೊಟೇಲ್ ಉದ್ಯಮ ಸ್ಥಾಪಿಸಲು 5 ಲಕ್ಷ ರೂ.ಗಳ ಸಾಲ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ 4,6೦,೦೦೦ ರೂ. ಸಾಲ ಹಾಗೂ 4೦,೦೦೦ ರೂ. ಪ್ರೋತ್ಸಾಹಧನದ ರೂಪದಲ್ಲಿ ನೀಡಲಾಗುತ್ತದೆ. ಇದಕ್ಕೆ ನೀವು 2೦*3೦ ಅಳತೆಯ ನಿವೇಶನ ಹೊಂದಿರಬೇಕಾಗುತ್ತದೆ.

ಲಿಂಗಾಯತ ಖಾನಾವಳಿ ಯೋಜನೆ ಆರಂಭಿಸಲು ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗಳಿಗೆ ಸೇರಿದವರು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ವತಿಯಿಂದ ಮರಾಠ ಮಿಲ್ಟ್ರಿ ಹೊಟೇಲ್ ಆರಂಭಿಸಲು ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆಯುವ ಫಲಾನುಭವಿಗಳು ಹಿಂದುಳಿದ ವರ್ಗಗಳ ಪ್ರವರ್ಗ 3ಬಿ ಅಡಿಯಲ್ಲಿ 2(ಎ)ನಿಂದ 2(ಎಫ್) ವರೆಗೆ ಸೇರಿದವರಾಗಿರಬೇಕು.

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಗ್ರಾಮೀಣ ಭಾಗದವರಾದರೆ ವಾರ್ಷಿಕ ಉತ್ಪನ್ನ 28,೦೦೦ರೂ. ನಗರ ಪ್ರದೇಶದವರಾದರೆ 1,2೦,೦೦೦ರೂ. ಮೀರಿರಬಾರದು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು.ಅಲ್ಲದೆ ನಮ್ಮ ರಾಜ್ಯದ ಖಾಯಂ ವಿಳಾಸವನ್ನು ಹೊಂದಿರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಅರ್ಜಿದಾರರು ಗಮನಿಸಬೇಕಾದ ಅಂಶವೆಂದರೆ ಒಂದು ಕುಟುಂಭದಲ್ಲಿ ಒಬ್ಬರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆ ಮಾಡಿರಬೇಕು. ಕಳೆದ ಮೂರು ವರ್ಷಗಳಿಂದ ನಿಗಮಗಳಿಂದ ಯಾವುದಾದರೂ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಅರ್ಜಿ ಸಲ್ಲಿಸಲು ಬರುವುದಿಲ್ಲ. ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪತ್ರ ಹೊಂದಿರಬೇಕಾಗುತ್ತದೆ.

ಈ ಎಲ್ಲ ಅರ್ಹತೆಗಳ ಇದ್ದಲ್ಲಿ ಸರ್ಕಾರದ ವೆಬ್ ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಸಲು ಅಕ್ಟೋಬರ್ 3೦ ಕೊನೆಯ ದಿನವಾಗಿದೆ.

Comments are closed.