Labour Card: ರದ್ದಾಗಲಿದೆ ಈ ಕಾರ್ಡ್; ಸರ್ಕಾರದ ಬಹುದೊಡ್ದ ನಿರ್ಧಾರ? ಯಾರಿಗೆ ಆಗಲಿದೆ ನಷ್ಟ?

Labour Card: ಯಾವುದೇ ಸರ್ಕಾರವಾಗಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕು ಎನ್ನುವ ಕಾರಣಕ್ಕೆ ಯೋಜನೆ ರೂಪಿಸುತ್ತದೆ. ಬಡವರಿಗಾಗಿ, ಹಿಂದುಳಿದ ವರ್ಗದವರಿಗಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಪ್ರತಿ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಕಾರ್ಮಿಕರಿಗಾಗಿಯೂ ಹಲವು ಯೋಜನೆಗಳು ಜಾರಿಯಲ್ಲಿವೆ. ಈಗಾಗಲೇ ಕಾರ್ಮಿಕರಿಗೆ ಗುರುತಿನ ಚೀಟಿಯಾಗಿ ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ಇದರ ಅಡಿಯಲ್ಲಿಯೇ ಕಾರ್ಮಿಕರಿಗೆ ವಿವಿಧ ಸೌಲಭ್ಯ ವಿತರಿಸಲಾಗುತ್ತಿದೆ. ಆದರೆ ಇದರಲ್ಲಿಯೂ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸರ್ಕಾರವು ತನಿಖೆಗೆ ಮುಂದಾಗಿದೆ. ಇದನ್ನೂ ಓದಿ: Hotel Business: ಹೊಟೆಲ್ ಆರಂಭಿಸುವುದು ಇನ್ನೂ ಸುಲಭ; ಸರ್ಕಾರದಿಂದ ಸಿಗುತ್ತೆ ಸಹಾಯಧನ; ಕೂಡಲೇ ಅರ್ಜಿ ಸಲ್ಲಿಸಿ!

ಸರ್ಕಾರಿ ಸೌಲಭ್ಯ ಪಡೆಯಬೇಕು ಎನ್ನುವ ಸಲುವಾಗಿ ಅನರ್ಹರು ಸಹ ನಕಲಿ ಕಾರ್ಮಿಕ ಕಾರ್ಡ್ಗಳನ್ನು ಮಾಡಿಸಿಕೊಂಡಿದ್ದಾರೆ. ಅಲ್ಲದೆ ಇಲ್ಲಿಯವರೆಗೂ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈಗ ಈ ನಕಲಿ ಕಾರ್ಮಿಕ ಕಾರ್ಡ್ ಹಾವಳಿ ವಿಚಾರ ಬಯಲಾಗಿದೆ.ವಿವಿಧ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಪರಿಶೀಲನೆ ನಡೆಸಿ ನಕಲಿ ಕಾರ್ಡ್ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೇ ಆಸಕ್ತಿ ವಹಿಸಿದ್ದು, ನಕಲಿ ಕಾರ್ಡ್ ರದ್ದುಗೊಳಿಸಲು ಸೂಚಿಸಿದ್ದಾರೆ.

ಕಟ್ಟಡ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳದ ಕಾರ್ಮಿಕರು ಸಹ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇವುಗಳೆಲ್ಲ ಡುಬ್ಲಿಕೇಟ್ ಕಾರ್ಡ್ಗಳಾಗಿವೆ. ಈ ಕಾರ್ಡ್ ಮಾಡಿಸಿಕೊಂಡು ಇಲಾಖೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ತಂದಿದ್ದಾರೆ. ಸಚಿವರು ಕೂಡಲೇ ಇಂತಹವರ ನೋಂದಣಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಕಚೇರಿ ಸ್ಥಾಪಿಸಿ:

ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ನಿಜವಾದ ಫಲಾನುವಭವಿಗಳು ಕಾರ್ಮಿಕ ಕಾರ್ಡ್ ಹಾಗೂ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ವಿವಿಧ ಕಚೇರಿಗಳನ್ನು ಅಲೆದಾಡುವಂತಾಗಿದೆ. ಒಂದು ಸೌಲಭ್ಯ ಪಡೆಯಲು ಹತ್ತಾರು ಬಾರಿ ಕೆಲಸ ಕಾರ್ಯ ಬಿಟ್ಟು ಓಡಾಡಬೇಕಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲೇ ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟ ಕಚೇರಿ ಆರಂಭಿಸುವುದರಿಂದ ಈ ಓಡಾಟ ತಪ್ಪುತ್ತದೆ. ಅಲ್ಲದೆ ನಿಶ್ಚಿಂತೆಯಿಂದ ಒಂದೆರಡು ತಿರುಗಾಟದಲ್ಲಿ ಕೆಲಸವು ಮುಗಿಯಲಿದೆ. ಅದಕ್ಕಾಗಿ ಕಾರ್ಮಿಕರು ಸ್ಥಳೀಯ ಮಟ್ಟದಲ್ಲಿ ಕಚೇರಿ ಆರಂಭಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: Business Idea: 10 ಸಾವಿರ ನಿಮ್ಮ ಬಳಿ ಇದ್ರೆ ಸಾಕು, ಲಕ್ಷ ಲಕ್ಷ ಹಣ ಗಳಿಸಬಹುದು; ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್!  

Comments are closed.