SBI Personal Mudra Loan: ಕೇವಲ 5 ನಿಮಿಷಗಳಲ್ಲಿ 50,000 ರೂ. ಸಾಲ ಬೇಕಾ? SBI ನೀಡುತ್ತೆ ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೇ ಸಾಲ,  ನೀವು ಬ್ಯಾಂಕಿಗೆ ಹೋಗುವ ಅವಶ್ಯಕತೆಯೂ ಇಲ್ಲ.

SBI Personal Mudra Loan: ನೀವು ಸಣ್ಣ ಉದ್ಯೋಗಗಳನ್ನು (Business) ಪ್ರಾರಂಭಿಸಲು ಬಯಸುತ್ತಿದೆ ಆದರೆ ಅಥವಾ ಈಗಾಗಲೇ ನೀವು ಸಣ್ಣ ಉದ್ಯೋಗಗಳನ್ನು ನಡೆಸಿ ಅದನ್ನು ಬೆಳೆಸಬೇಕು ಅಂತ ಇಚ್ಛೆಪಟ್ಟಿದ್ದರೆ ಅದಕ್ಕಾಗಿ ಹಣಕಾಸಿನ ಸಹಾಯ ಬೇಕಾಗುತ್ತದೆ. ಈ ಹಣಕಾಸಿನ ವ್ಯವಸ್ಥೆಗಾಗಿ ಈಗ ನೀವು ಏನು ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ದಾಖಲೆಯ ಕಾಗದಪತ್ರಗಳನ್ನು ಹಿಡಿದುಕೊಂಡು ಬ್ಯಾಂಕಿನಿಂದ ಬ್ಯಾಂಕಿಗೆ ಅಲೆಯಬೇಕಾಗಿಲ್ಲ. ಹಣಕಾಸಿನ ಅವಶ್ಯಕತೆಗೆ ಬೇಕಾದಷ್ಟು ಹಣವನ್ನು ಹೊಂದಿಸಿಕೊಳ್ಳಲು ಆಗುತ್ತದೆಯೇ ಇಲ್ಲವೇ ಎಂಬ ಚಿಂತೆಯಿಂದ ನೀವು ವಿಚಲಿತರಾಗ ಬೇಕಿಲ್ಲ. ಏಕೆಂದರೆ ಇಂತಹ ಸಣ್ಣ ವ್ಯವಹಾರಗಳನ್ನು ನಡೆಸುತ್ತಿರುವ ಜನರಿಗೆ ಸಹಾಯವಾಗಬೇಕು ಅನ್ನುವ ಕಾರಣಕ್ಕೆ ಕೇಂದ್ರ ಸರಕಾರವು ಪ್ರಧಾನಮಂತ್ರಿ ಈ ಮುದ್ರಾ ಲೋನ್ (PM Mudra Loan) ಇದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಮೂಲಕ ಕೊಡ ಮಾಡುತ್ತದೆ.

How to Get SBI Personal Mudra Loan here are the Details.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಾ ಲೋನ್ ಬಗ್ಗೆ ಮಾಹಿತಿ Information about  SBI Personal Mudra Loan

ಭಾರತ ಸರಕಾರದಿಂದ ಆರಂಭವಾದ ಈ ಸಾಲ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯೋಗಗಳನ್ನು ವ್ಯವಹಾರವನ್ನು ಮಾಡುವ ಆಸಕ್ತರಿಗೆ ಒಳ್ಳೆಯ ಅವಕಾಶವನ್ನು ಮಾಡಿಕೊಡುತ್ತದೆ. ಸಣ್ಣ ಮತ್ತು ಮಧ್ಯಮ ಉದ್ಯೋಗಗಳನ್ನು ಮಾಡುವವರಿಗೆ ಎಂ ಎಂ ಎಸ್ ಬ್ಯಾಂಕ್ ಅಂದರೆ ಮ್ಯಾಂಡೇಡ್ ಸಿಸ್ಟಮ್ ಮ್ಯಾನೇಜ್ಮೆಂಟ್ ವ್ಯವಸ್ಥೆ (Mandated Management System) ಇರುವ ಬ್ಯಾಂಕುಗಳಿಂದ ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಮೂಲಕ ಸರಕಾರವು 10 ಲಕ್ಷ ರೂಪಾಯಿವರೆಗೆ ಅವರ ಉದ್ದಿಮೆ ಅಥವಾ ವ್ಯವಹಾರದ ಸೈಜ್ ನೋಡಿ ನಿರ್ಣಯ ತೆಗೆದುಕೊಳ್ಳುತ್ತದೆ. ನೀವೇನಾದರೂ ಸಣ್ಣ ಅಥವಾ ಮಧ್ಯಮ ವರ್ಗದ ಉದ್ಯಮವನ್ನು ಪ್ರಾರಂಭಿಸಬೇಕು ಎಂದು ಆಸೆಪಟ್ಟಿದರೆ ಈ ಲೇಖನವು ನಿಮಗೆ ಪ್ರಯೋಜನವಾಗುವುದರಲ್ಲಿ ಸಂದೇಹವೇ ಇಲ್ಲ.

ಇದನ್ನೂ ಓದಿ: ಮದುವೆ, ಮುಂಜಿ ಏನೇ ಇರಲಿ Loan ಬೇಕು ಅಂದ್ರೆ ಈ ಬ್ಯಾಂಕ್ ಇದ್ದೇ ಇದ್ಯಲ್ಲಾ; ಸಿಗುತ್ತೆ ಅತೀ ಕಡಿಮೆ ಬಡ್ದಿದರಕ್ಕೆ ನೀವು ಕೇಳಿದಷ್ಟು ಸಾಲ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಮುದ್ರಾ ಲೋನ್ ಅಡಿಯಲ್ಲಿ ಸಿಗುವ ಸಾಲಗಳು  Types of SBI Personal Mudra Loan

ಶಿಶು ಲೋನ್ Shishu Loan.

ಏನಪ್ಪಾ ಈ ಶಿಶು ಲೋನ್ ಅಂದ್ರೆ. ನೀವು ಈಗಾಗಲೇ ಒಂದು ಉದ್ಯಮವನ್ನು ಪ್ರಾರಂಭಿಸಿ ಅದಕ್ಕೆ ಅದರ ಬೆಳವಣಿಗೆಗೆ ನಿಮಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಸಾಲವನ್ನು ಕೊಡಲಾಗುತ್ತದೆ. ಈ ಸಲ ನಿಮಗೆ ಹತ್ತು ಸಾವಿರದಿಂದ 50,000ದವರೆಗೆ ನಿಮ್ಮ ಅವಶ್ಯಕತೆ ಮತ್ತು ವ್ಯವಹಾರದ ವಿಸ್ತಾರವನ್ನು ಅವಲಂಬಿಸಿ ಸಿಗುತ್ತದೆ. ಈ ಸಾಲವನ್ನು ನೀವು ಆರು ತಿಂಗಳಿಂದ 12 ತಿಂಗಳೊಳಗೆ ಮರುಪಾವತಿಸಿದರೆ ಆಯ್ತು.

ಕಿಶೋರ್ ಲೋನ್ Kishor Loan

ಮಧ್ಯಮ ಗಾತ್ರದ ವ್ಯಾಪಾರವನ್ನು ನೀವು ಈಗಾಗಲೇ ಪ್ರಾರಂಭಿಸಿದ್ದು ಅದರ ಮುಂದಿನ ಬೆಳವಣಿಗೆಗೆ ನಿಮಗೆ ಆರ್ಥಿಕ ಹೊಂದಾಣಿಕೆಯ ಅವಶ್ಯಕತೆ ಉಂಟಾದಲ್ಲಿ 50,000 ದಿಂದ 5 ಲಕ್ಷದವರೆಗೆ ಈ ಸಾಲವನ್ನು ಕೊಡಲಾಗುತ್ತದೆ. ಇಲ್ಲರ ಮರುಪಾವತಿ ಅವಧಿಯು 12 ತಿಂಗಳಿಂದ 36 ತಿಂಗಳವರೆಗೆ ಇರುತ್ತದೆ. ಈವರೆಗೆ ಹೇಳಿದ ಸಾಲಗಳಿಗೆ ಯಾವುದೇ ಪ್ರೋಸೆಸಿಂಗ್ ಫೀಸ್ (Processing fee) ಇರುವುದಿಲ್ಲ ಆದರೆ ಈ ಸಾಲಕ್ಕೆ ಶೇಕಡ 10 ಮಾರ್ಜಿನ್ ಮನಿ ಕೊಡಬೇಕಾಗುತ್ತದೆ ಅಂದರೆ ನೀವು ಒಂದು ಲಕ್ಷ ಸಾಲವನ್ನು ಬಯಸಿದರೆ ಹತ್ತು ಸಾವಿರ ಮಾರ್ಜಿನ್ ಮನಿ ಬ್ಯಾಂಕಿಗೆ ಕೊಡಬೇಕಾಗುತ್ತದೆ. ಈ ಯೋಜನೆಯ ಹೆಸರು ಈ ಮುದ್ರಾ ಕಿಶೋರ್ ಲೋನ್.

ತರುಣ್ ಲೋನ್ Tarun Loan:

ನೀವು ಈಗಾಗಲೇ ಒಂದು ಉದ್ದಿಮೆಯನ್ನು ಪ್ರಾರಂಭಿಸಿ ಅದು ವ್ಯಾಪಕವಾಗಿ ಚೆನ್ನಾಗಿ ನಡೆಯುತ್ತಿರುವ ಉದ್ಯಮವಾದರೆ ಅದನ್ನು ಮುಂದಕ್ಕೆ ಬೆಳೆಸುವ ನಿಟ್ಟಿನಲ್ಲಿ ನೀವು ಯೋಚಿಸುತ್ತಿದ್ದರೆ ಇಂತಹ ಅವಶ್ಯಕತೆಗಾಗಿ ತರುಣ್ ಲೋನ್ ಎಂಬ ಒಂದು ಯೋಜನೆ ಇದೆ. ಈ ಮುದ್ರಾ ಯೋಜನೆ ಒಂದು ಭಾಗವೇ ಈ ತರುಣ್ ಯೋಜನೆ ಆಗಿದೆ ಇಲ್ಲಿ ನೀವು ರೂಪಾಯಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಈ ಸಾಲಕ್ಕೆ ಪ್ರೋಸೆಸಿಂಗ್ ಫೀಸ್ ಅಂತ ನೀವು ಪಡೆದುಕೊಂಡ ಸಾಲದ ಮೇಲೆ 0.5% ಚಾರ್ಜ್ ಮಾಡಲಾಗುತ್ತದೆ ಹಾಗೂ ಮಾರ್ಜಿನ್ ಮನೆಯಿಂದ 10% ಕೊಡಬೇಕಾಗುತ್ತದೆ. ಈ ಸಲದ ಮರುಪಾವತಿ ಅವಧಿಯು 12 ತಿಂಗಳುಗಳಿಂದ 60 ತಿಂಗಳಗಳ ವರೆಗೆ ಸಿಗುತ್ತದೆ.

ಎಸ್ ಬಿ ಐ ಮುದ್ರಾ ಲೋನ್ ಅಡಿಯಲ್ಲಿ ಯಾರಿಗೆ ಸಿಗುತ್ತೆ ಸಾಲ Who can get  SBI Personal Mudra Loan

 • ಸಣ್ಣ ಉದ್ಯೋಗವನ್ನು ಮಾಡುವವರು
 • ಕುಶಲಕರ್ಮಿಗಳಿಗೆ
 • ಹಣ್ಣು ಮತ್ತು ತರಕಾರಿ ಮಾರಾಟ ಮಾಡುವವರಿಗೆ
 • ಸಣ್ಣ ಅಂಗಡಿಯನ್ನು ಹೊಂದಿದವರಿಗೆ
 • ಯಾವುದಾದರೂ ಸಮುದಾಯ ಅಥವಾ ಸಮಾಜಕ್ಕೆ ಸೇವೆಗಳನ್ನು ನೀಡುವ ವ್ಯಾಪಾರಗಳು
 • ಟೇಲರ್ ಅಂಗಡಿಗೆ, ಬ್ಯೂಟಿ ಪಾರ್ಲರ್ ಗಳಿಗೆ, ಮೆಡಿಕಲ್ ಸ್ಟೋರ್ಗಳಿಗೆ, ಕೋರಿಯರ್ ಏಜೆನ್ಸಿ ಗಳಿಗೆ, ವಾಹನ ರಿಪೇರಿಗಳನ್ನು ನಡೆಸುತ್ತಿರುವ ಅಂಗಡಿಗಳಿಗೆ ಈ ಸಾಲದ ಲಭ್ಯತೆ ಇರುತ್ತದೆ

ಶಿಶು ಲೋನ್ ಗಿ ಕೆಳಗಿನ ದಾಖಲೆಗಳನ್ನು ನೀಡಬೇಕು (Documents to Get Shishu Loan)

 1. ನೀವು ನಡೆಸುತ್ತಿರುವ ವ್ಯವಹಾರದ ಜಿಎಸ್‌ಟಿ (GST) ನೋಂದಣಿ ಪತ್ರ
 2. ಅಂಗಡಿಗೆ ಪಡೆದುಕೊಂಡ ಲೈಸನ್ಸ್ ಬಗ್ಗೆ ಮಾಹಿತಿ
 3. ಆಧಾರ ಕಾರ್ಡು
 4. ಪ್ಯಾನ್ ಕಾರ್ಡ್
 5. ಬ್ಯಾಂಕಿನ ಖಾತೆ ವಿವರಗಳು
 6. ವಿಸ್ತರಿಸಬೇಕಾದ ಅಥವಾ ಪ್ರಾರಂಭಿಸಬೇಕಾದ ವ್ಯಾಪಾರದ ವಿವರಗಳು
 7. ನಿಮಗೆ ಮಾಲನ್ನು ಪೂರೈಕೆ ಮಾಡುವವರ ವಿವರಗಳು ಅಂದರೆ ಕೊಟೇಶನ್
 8. ನಿಮ್ಮಲ್ಲಿರುವ ಸ್ಟಾಕ್ ಬಗ್ಗೆ ಮಾಹಿತಿ.

ಕಿಶೋರ್ ಅಥವಾ ತರುಣ್ ಸಾಲ ಪಡೆಯಲು ಬೇಕಾಗುವ ದಾಖಲೆಗಳು (Documents to Get Kishor / Tarun  Loan)

 1. ಗುರುತಿನ ಪುರಾವೆ – ಆಧಾರ್ ಕಾರ್ಡ್ ಪಾಸ್ವರ್ಡ್ ಅಥವಾ ವೋಟರ್ ಐಡಿ ಯಾವುದಾದರೂ ಒಂದು
 2. ವಿಳಾಸದ ಪುರಾವೆಗಾಗಿ ಆಸ್ತಿ ತೆರಿಗೆ ರಸೀದಿ ಅಥವಾ ಫೋನ್ ಬಿಲ್ ಅಥವಾ ವಾಟರ್ ಬಿಲ್ ಇಲ್ಲದಿದ್ರೆ ಕರೆಂಟ್ ಬಿಲ್
 3. ಬ್ಯಾಂಕ್ ಖಾತೆಯ ಸ್ಟೇಟ್ಮೆಂಟು ಕಳೆದ ಆರು ತಿಂಗಳಿಂದು
 4. ಕಳೆದ ಎರಡು ವರ್ಷಗಳ ಪೀ ಅಂಡ್ ಎಲ್ ಸ್ಟೇಟ್ಮೆಂಟ್ ಅಂದರೆ ಲಾಭ ನಷ್ಟಗಳ ಮಾಹಿತಿ
 5. ಪಾಸ್ ಪೋರ್ಟ್ ಸೈಜ್ ಫೋಟೋ
 6. ಆಧಾರ್ ಕಾರ್ಡ್
 7. ಪಾನ್ ಕಾರ್ಡ್
 8. ವ್ಯಾಪಾರ ಸ್ಥಾಪನೆಯಾದ ಪುರಾವೆ ಅಂದರೆ ಲೈಸೆನ್ಸ್

ಎಸ್ ಬಿ ಐ ಮುದ್ರಾ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ How to apply get  SBI Personal Loan

 • ಮೊದಲು ಈ ಸಾಲಕ್ಕಾಗಿ ಎಸ್‌ಬಿಐನ ಪೋರ್ಟಲ್ ಈ ಲಿಂಕ್ ಗೆ ಕ್ಲಿಕ್ ಮಾಡಬೇಕು
 • ಕ್ಲಿಕ್ ಮಾಡಿ ಈ ಪೇಜ್ ಓಪನ್ ಆದ ನಂತರ ಪ್ರೋಸೀಡ್ ಇಲ್ಲಿ ಕ್ಲಿಕ್ ಮಾಡಬೇಕು
 • ಬಹಳಷ್ಟು ವಿಷಯಗಳು ನೋಡಲು ಸಿಗುತ್ತವೆ ಅವುಗಳನ್ನು ತುಂಬಾ ಜಾಗರೂಕತೆಯಿಂದ ಓದಿ ಓಕೆ ಕೊಡಬೇಕು
 • ನಿಮಗೆ ಹೊಸದೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಬ್ಯಾಂಕ್ ಖಾತೆ ಕರೆಂಟ್ ಖಾತೆಯಾದರೆ ಕರೆಂಟ್ ಅಕೌಂಟ್ ನಂಬರ್ ಎಸ್ ಬಿ ಖಾತೆಯಾದರೆ ಎಸ್ ಬಿ ಅಕೌಂಟ್ ನಂಬರ್ ನಿಮಗೆ ಬೇಕಾಗುವ ಸಾಲದ ಮೊತ್ತ ಇತ್ಯಾದಿ ಎಲ್ಲಾ ವಿಷಯಗಳನ್ನು ಭರ್ತಿ ಮಾಡಿ ಪ್ರೋಸಿಡ್ ಗೆ ಕ್ಲಿಕ್ ಮಾಡಿ
 • ಈಗ ಓಪನ್ ಆಗುವ ಪೇಜ್ನಿಂದ ಎಲ್ಲವನ್ನು ಸರಿಯಾಗಿ ತಿಳಿದುಕೊಂಡು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿ
 • ಇದಾದ ನಂತರ ಯುಐಡಿ ಮೂಲಕ ಈಕೆ ವೈ ಸಿ ಗಾಗಿ ಆಧಾರ್ ಕಾರ್ಡ್ ನ ವಿವರಗಳನ್ನು ಕೊಡಬೇಕಾಗುತ್ತದೆ
 • ಈಗ ಈ ಸೈನ್ ಮಾಡುವ ಮೂಲಕ ನಿಮ್ಮ ಸಾಲದ ಪ್ರೋಸೆಸ್ ಪ್ರಾರಂಭವಾಗುತ್ತದೆ. ನಂತರ ನಿಮಗೊಂದು ಓಟಿಪಿ ಬರುತ್ತದೆ ಒಟಿಪಿ ಬಂದ ನಂತರ ವೆರಿಫಿಕೇಶನ್ ಮುಗಿದು ನಿಮ್ಮ ಸಾಲ ಮಂಜೂರಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (Contact if any queries)

ಏನಾದರೂ ಇನ್ನೂ ಸಂಶಯಗಳಿದ್ದರೆ, ಸರಿಯಾಗಿ ತಿಳುವಳಿಕೆ ಸಿಗದಿದ್ದರೆ ನೀವು ಈ ಕೆಳಗಿನ ಈ ಮೇಲ್ ಗೆ ಮೇಲ್ ಮಾಡಬಹುದು ಅಥವಾ 1800 180 11 ಅಥವಾ 180 1 10001 ಇಲ್ಲಿಗೆ ಕರೆ ಮಾಡಬಹುದು

Email ID:  [email protected]

Comments are closed.