Business Loan: ಅತೀ ಕಡಿಮೆ ಸಮಯದಲ್ಲಿ ದೊಡ್ದ ಮೊತ್ತದ ಬ್ಯುಸನೆಸ್ ಲೋನ್ ಬೇಕಾ; ಇದೊಂದು ಕೆಲಸ ಮಾಡಿದ್ರೆ ಸಾಕು, ಸಾಲ ಪಡೆದು ಕನಸಿನ ಉದ್ಯೋಗ ಆರಂಭಿಸಬಹುದು!

How to Get Business Loan: ವ್ಯಾಪಾರ (Business) ಮಾಡಬೇಕು, ಹಣ ಗಳಿಸಬೇಕು, ಶ್ರೀಮಂತರಾಗಬೇಕು ಎಂಬ ಆಸೆ ಸಾಧಾರಣವಾಗಿ ಎಲ್ಲರಲ್ಲಿ ಇರೋದು ಸಹಜ. ಯಾಕಂದರೆ ಎಲ್ಲಾದರೂ ನೌಕರಿಗೆ ಸೇರಿಕೊಂಡರೆ ತಿಂಗಳಿಗೆ ಇಂತಿಷ್ಟೇ ವೇತನ ಅಂತ ನಿಗದಿಯಾಗಿರುತ್ತದೆ. ಹಾಗಾಗಿ ಅನ್ಲಿಮಿಟೆಡ್ ಆದಾಯ ಬರಬೇಕು ಅಂದರೆ ವ್ಯಾಪಾರ ಮಾಡಬೇಕು ಎಂದು ನಮ್ಮ ಸುತ್ತಮುತ್ತಲಿನ ವ್ಯಾಪಾರಸ್ಥರನ್ನು ನೋಡಿ ನಾವು ಸಹ ವ್ಯಾಪಾರವನ್ನು ಮಾಡಬೇಕು ಎಂದು ಒಂದು ನಿರ್ಧಾರಕ್ಕೆ ಹಲವರು ಬರುತ್ತಾರೆ. ಹಾಗೆಯೇ ಯಾವ ವ್ಯಾಪಾರ ಮಾಡಿದರೆ ಒಳ್ಳೆಯದಾಗಬಹುದು ಎಂದು ನಿಶ್ಚಯಿಸಿರುತ್ತಾರೆ. ಆದರೆ ವ್ಯಾಪಾರವನ್ನು Business Loan ಪ್ರಾರಂಭಿಸಲು ಅತಿ ಮುಖ್ಯವಾಗಿ ಬೇಕಾಗಿರುವ ಹಣಕಾಸಿನ ವ್ಯವಸ್ಥೆ ಎಲ್ಲಿಂದ ಎಂಬ ಕಗ್ಗಂಟು ಬಿಡಿಸಲಾಗದೆ ಸಮಸ್ಯೊಳಗೆ ಸಿಕ್ಕಿಹಾಕಿಕೊಳ್ಳುತ್ತಾರೆ.

How to Get Business Loan with low interest, here are the details.

ಇನ್ನೊಂದು ವರ್ಗ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ ಮತ್ತು ವ್ಯವಹಾರ ತಕ್ಕಮಟ್ಟಿಗೆ ಚೆನ್ನಾಗಿಯೇ ನಡೆಯುತ್ತದೆ ಆದರೆ ಇನ್ನೂ ವ್ಯವಹಾರ ಬೆಳೆಸಬೇಕು ಈಗ ದಿನನಿತ್ಯದ ಜೀವನ ಸಾಗಿಸಲು ವ್ಯಾಪಾರದಲ್ಲಿ ಆಗುವ ಲಾಭ ಸಾಕಾಗುತ್ತದೆ ಇನ್ನೂ ಸ್ವಲ್ಪ ಹಣಕಾಸು ಇದ್ದರೆ ವ್ಯಾಪಾರವನ್ನು ದೊಡ್ಡದಾಗಿ ಬೆಳೆಸಬಹುದು ಎಂದು ಯೋಚಿಸುತ್ತಾರೆ.

 ಸಾಲ ಪಡೆಯಬೇಕು ಎಂದು ಯೋಚಿಸಿ ಖಾಸಗಿ ಲೇವಾದೇವಿದಾರರೊಂದಿಗೆ ವ್ಯವಹಾರ ಮಾಡಿದರೆ ತುಂಬಾ ಜಾಸ್ತಿ ಬಡ್ಡಿ (Interest)  ಕೊಡಬೇಕಾಗುತ್ತದೆ ಹಾಗಾಗಿ ಯಾವಾಗಲೂ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಹೊಸ ಬಿಸಿನೆಸ್ ಪ್ರಾರಂಭ ಮಾಡುವವರಿಗೆ ಸ್ಟಾರ್ಟಪ್ (Startup)  ಗಳಿಗೆ ಸರಕಾರದಿಂದ ಸಾಲದ ಯೋಜನೆಗಳು ಇವೆ. ನೀವು ಬ್ಯಾಂಕ್ ಶಾಖೆಗೆ ತೆರಳಿ ನಿಮ್ಮ ಯೋಜನೆಗಳನ್ನು ಅವರ ಮುಂದೆ ಇಟ್ಟಾಗ ಅವರು ನಿಮಗೆ ಸರಿಹೊಂದುವ ಯೋಜನೆಯನ್ನು ಸೂಚಿಸುತ್ತಾರೆ.

ಬ್ಯುಸನೆಸ್ ಲೋನ್ ಪಡೆಯುವುದು ಹೇಗೆ? How to Get Business Loan

ಮೊದಲಿಗೆ ನೀವೊಂದು ಪ್ರಾಜೆಕ್ಟ್ ರಿಪೋರ್ಟ್ (Project Report)  ತಯಾರಿಸಬೇಕು ಅಂದರೆ ನೀವು ಯಾವ ವ್ಯಾಪಾರವನ್ನು ಆರಂಭಿಸಲು ಬಯಸುತ್ತೀರಿ ಮತ್ತು ವ್ಯಾಪಾರ ಎಷ್ಟಾಗಬಹುದು ಆ ವ್ಯಾಪಾರದಲ್ಲಿ ನಿಮ್ಮ ಲಾಭ ಎಷ್ಟಾಗಬಹುದು ಮತ್ತು ಆ ಲಾಭದಿಂದ ನಿಮ್ಮ ದೈನಂದಿನ ಖರ್ಚು ವೆಚ್ಚಗಳನ್ನು ಕಳೆದು ಬ್ಯಾಂಕಿಗೆ ಎಷ್ಟು ಸಾಲವನ್ನು ಪ್ರತಿ ತಿಂಗಳು ಹಿಂದಿರುಗಿಸಬಹುದು ಎಂಬ ಬಗ್ಗೆ ಒಂದು ರಿಪೋರ್ಟ್ನ್ ತಯಾರಿಸಿ ಬ್ಯಾಂಕಿಗೆ ಕೊಡಬೇಕಾಗುತ್ತದೆ.

ಇದನ್ನೂ ಓದಿ: ಕೇವಲ 5 ನಿಮಿಷಗಳಲ್ಲಿ 50,000 ರೂ. Loan ಬೇಕಾ? SBI ನೀಡುತ್ತೆ ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೇ ಸಾಲ,  ನೀವು ಬ್ಯಾಂಕಿಗೆ ಹೋಗುವ ಅವಶ್ಯಕತೆಯೂ ಇಲ್ಲ.

ಈ ರಿಪೋರ್ಟ್ ತಯಾರಿಸುವುದು ನಿಮಗೆ ಗೊತ್ತಿಲ್ಲದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಸಹಾಯದಿಂದ ಇದನ್ನು ತಯಾರಿಸಿ ಬ್ಯಾಂಕಿಗೆ ಕೊಟ್ಟಾಗ ನೀವು ಕೊಟ್ಟ ರಿಪೋರ್ಟ್ ಸರಿಯಾಗಿದೆಯೇ ಇಷ್ಟು ಲಾಭಗಳಿಸಲು ಸಾಧ್ಯವೇ ಮತ್ತು ತಾವು ಕೊಟ್ಟ ಸಾಲವನ್ನು ಈತ ಮರುಪಾವತಿಸಬಹುದೇ ಎಂಬ ವಿಚಾರವಾಗಿ ಯೋಚಿಸಿ ಬ್ಯಾಂಕು ಸಕಾರಾತ್ಮಕವಾಗಿ ಒಂದು ನಿರ್ಧಾರಕ್ಕೆ ಬಂದರೆ ನಿಮಗೆ ಸಾಲ ಸಿಗುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ.

ಬ್ಯುಸನೆಸ್ ಲೋನ್ ಪಡೆಯಲು ಈ ಕೆಲಸ ಮಾಡಿ How to Get Business Loan

ಇನ್ನು ಈಗಾಗಲೇ ನೀವು ವ್ಯಾಪಾರ ವ್ಯವಹಾರ ಮಾಡುತ್ತಿದ್ದು ನಿಮ್ಮ ವ್ಯವಹಾರದ ಬೆಳವಣಿಗೆಗೆ ಸಾಲ ತೆಗೆದುಕೊಳ್ಳಬೇಕು ಅಂತಾದರೆ ಕಳೆದ ಎರಡು ವರ್ಷಗಳ ನಿಮ್ಮ ಪ್ರಾಫಿಟ್ ಅಂಡ್ ಲಾಸ್ ಸ್ಟೇಟ್ಮೆಂಟ್ (Profit and Loss Statement) ತೆಗೆದುಕೊಂಡು ನೀವು ಪ್ರಕೃತ ಎಷ್ಟು ಲಾಭ ಮಾಡುತ್ತೀರಿ ಮತ್ತು ನಿವ್ವಳವಾಗಿ ಎಷ್ಟು ಉಳಿಸುತ್ತೀರಿ ಎಂಬ ಆಧಾರದ ಮೇಲೆ ನಿಮ್ಮ ಸಾಲದ ಬೇಡಿಕೆಯ ಮೊತ್ತ ಸರಿಯಾಗಿದೆಯೇ ಎಂದು ಪರಿಶೀಲಿಸಿ ಬ್ಯಾಂಕು ಸಾಲ ನೀಡುತ್ತದೆ.

ಬ್ಯುಸನೆಸ್ ಲೋನ್ ಪಡೆಯುವಾಗ ಈ ಅಂಶ ನೆನಪಿನಲ್ಲಿರಲಿ (Remebur these things while taking business loan)

ಹೊಸದಾಗಿ ವ್ಯಾಪಾರ ವ್ಯವಹಾರ ಮಾಡುವವರು ಸಣ್ಣಮಟ್ಟದಲ್ಲಿ ಪ್ರಾರಂಭ ಮಾಡಿ ಅದು ಯಶಸ್ವಿಯಾಗಿ ನಡೆಯುತ್ತದೆ ಎಂದು ತಮಗೆ ಮನವರಿಕೆ ಆದಮೇಲೆ ವ್ಯಾಪಾರವನ್ನು ಬೆಳೆಸಲು ಮುಂದೆ ಹೆಚ್ಚಿನ ಸಾಲವನ್ನು ಪಡೆಯುವುದು ಒಳ್ಳೆಯದು. ಸಣ್ಣ ಮಟ್ಟದಲ್ಲಿ ವ್ಯಾಪಾರ ಪ್ರಾರಂಭಿಸುವುದಾದರೆ ಹೂಡಿಕೆಯ ಮೊತ್ತ ಕೂಡ ಕಡಿಮೆ ಸಾಕಾಗುತ್ತದೆ. ಹಾಗಾಗಿ ಬ್ಯಾಂಕಿನವರಿಗೆ ಸಹ ಈ ಮೊತ್ತವನ್ನು ಒದಗಿಸಲು ತುಂಬಾ ವಿಮರ್ಶಿಸುವ ಅವಶ್ಯಕತೆ ಇಲ್ಲದಿರುವುದರಿಂದ ಸುಲಭವಾಗಿ ಸಾಲ ಸಿಗುತ್ತದೆ ಎನ್ನಬಹುದು. ನಿಮಗೆ ವ್ಯವಹಾರ ಮಾಡಲು ಎಷ್ಟು ಹಣ ಬೇಕು, ಅಷ್ಟನ್ನು ಸಹ ಬ್ಯಾಂಕು ಸಾಲವನ್ನು ಕೊಡುವುದಿಲ್ಲ ಸ್ವಲ್ಪ ಪಾಲನ್ನು ಅಂದರೆ ಅಂದಾಜು ಶೇಕಡ 40 ರಿಂದ 50 ಪರ್ಸೆಂಟ್ ಹಣ ನೀವು ಹಾಕ ಬೇಕಾಗಬಹುದು.

ಬ್ಯುಸನೆಸ್ ಲೋನ್ ಪಡೆಯಲು ಬೇಕಾಗುವ ದಾಖಲೆಗಳು Documents to Get Business Loan

 1. ಒಂದು ವಿಳಾಸದ ಪುರಾವೆ. ನೀವು ಹೇಳಿದಂತಹ ವಿಳಾಸದಲ್ಲಿ ವಾಸವಾಗಿದ್ದೀರಿ ಎಂಬ ಬಗ್ಗೆ ದಾಖಲೆಯಾಗಿ ಆಧಾರ್ ಕಾರ್ಡ್ ಅಥವಾ ಕರೆಂಟ್ ಬಿಲ್ ಅಥವಾ ರೇಷನ್ ಕಾರ್ಡ್ ಇಂತಹ ಯಾವುದಾದರೂ ಒಂದು ದಾಖಲೆಯನ್ನು ನೀಡಬೇಕಾಗುತ್ತದೆ
 2. ಎರಡನೆಯದಾಗಿ ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ ಕಳೆದ ಆರು ತಿಂಗಳ ಸ್ಟೇಟ್ಮೆಂಟ್
 3. ನಾವು ಈಗಾಗಲೇ ಹೇಳಿದಂತೆ ನೀವು ತಯಾರಿಸಿದ ಪ್ರಾಜೆಕ್ಟ್ ರಿಪೋರ್ಟ್ ಅಥವಾ ವ್ಯಾಪಾರದ ಬಗೆಗಿನ ನೀಲಿ ನಕಾಶೆ
 4. ನೀವು ಮಾಡಿಕೊಂಡರೆ ಎಂಬ ವ್ಯವಹಾರದ ಲೈಸನ್ಸ್ ಕಾಪಿ
 5. ನೀವು ಎಲ್ಲಿ ವ್ಯಾಪಾರ ಮಾಡುತ್ತೀರಿ, ಆ ಜಾಗದ ಬಾಡಿಗೆ ಪತ್ರ ಅಂದರೆ ರೆಂಟ್ ಅಗ್ರಿಮೆಂಟ್ ದಾಖಲೆ
 6. ಇನ್ನೂ ಈಗಾಗಲೇ ವ್ಯವಹಾರ ಮಾಡುತ್ತಿರುವವರು ವ್ಯವಹಾರ ಮುಂದುವರಿಗೆ ಬೇಕಾದರೆ
 7. ಕಳೆದ  ಮೂರು ವರ್ಷಗಳ ಐ ಟಿ ರಿಟರ್ನ್ (ITR) ಅಂದರೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್  ಮಾಡಿದ ದಾಖಲೆ.
 8. ಬ್ಯಾಲೆನ್ಸ್ ಶೀಟ್.

ಬ್ಯುಸನೆಸ್ ಲೋನ್ ಗೆ ಬ್ಯಾಂಕ್ ವಿಧಿಸುವ ಬಡ್ದಿದರ Rate of Interest for Business Loan

ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯಲ್ಲಿ ಬಡ್ಡಿ ದರಗಳನ್ನು ವಿಧಿಸುತ್ತವೆ. ಮತ್ತು ಒಂದೊಂದು ಬ್ಯಾಂಕಿನ ಟರ್ಮ್ ಅಂಡ್ ಕಂಡೀಶನ್ ಒಂದೊಂದು ತರ ಇರುತ್ತದೆ ಇದನ್ನು ಪರಿಶೀಲಿಸಿ ನೀವು ಯಾವ ಬ್ಯಾಂಕ್ ಆಗಬಹುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಈ ಕೆಳಗೆ ವಿವರಗಳನ್ನು ಕೊಟ್ಟಿದ್ದೇವೆ.

ಬ್ಯುಸನೆಸ್ ಲೋನ್ ನೀಡುವ ಬ್ಯಾಂಕ್ ಗಳು Banks providing business loans

 • ICICI Bank
 • HDFC Bank
 • Axis Bank
 • SBI
 • Bajaj Finserv
 • Standard Charted Bank
 • RBL Bank
 • Punjab National Bank

ಬ್ಯುಸನೆಸ್ ಲೋನ್ ನೀಡುವ ಬ್ಯಾಂಕ್ ಗಳು ಹಾಗೂ ಬಡ್ದಿದರ Banks providing business loans and Rate of interest

ಬಜಾಜ್ ಫೈನಾನ್ಸ್ – ಬಡ್ಡಿ ದರ 16% – 21% 

ಕ್ಯಾಪಿಟಲ್ ಫಸ್ಟ್ – ಬಡ್ದಿದರ     13% – 20%

HDFC ಬ್ಯಾಂಕ್ – ಬಡ್ಡಿದರ 10.99% to 20.75%         

ICICI ಬ್ಯಾಂಕ್ 12.9% – 16.65% 

ಕೋಟಕ್ ಮಹೀಂದ್ರಾ ಬ್ಯಾಂಕ್ 16.00 % to 19.99%

Comments are closed.