SBI Personal Loans: SBI ಬ್ಯಾಂಕ್ ನಿಂದ ಬಂಪತ್ ಆಫರ್; ಅಡಮಾನವಿಲ್ಲದೇ ಸಿಗುತ್ತೆ ಸಾಲ, ಕಡಿಮೆ ಬಡ್ಡಿ ಹೆಚ್ಚು ಬೆನಿಫಿಟ್!

SBI Personal Loans: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Personal Loans) ಇಡೀ ಭಾರತದಲ್ಲಿ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಎನ್ನುವಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ಯಾಂಕ್. ಹೀಗಾಗಿ ಈ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಳ್ಳುವುದು ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಕಠಿಣ ಎಂದು ಹೇಳಬಹುದು. ಇನ್ನು ಸರ್ಕಾರದಿಂದಲೇ ಚಲಾವಣೆಗೊಳ್ಳುವಂತಹ ಈ ಬ್ಯಾಂಕಿನಲ್ಲಿ ಸರ್ಕಾರದ ಪ್ರತಿಯೊಂದು ಲೋನ್ ಯೋಜನೆಗಳನ್ನು ಕೂಡ ನೀವು ಕಾಣಬಹುದಾಗಿದೆ. ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಬ್ಯಾಂಕ್ ಎಂಬುದಾಗಿ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ವನ್ನು ಕರೆಯಬಹುದಾಗಿದೆ.

How to get SBI Personal Loans with less Interest, Here are the Details.

SBI ಬ್ಯಾಂಕಿನಲ್ಲಿ ಲೋನ್ (SBI Personal Loans) ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಎರಡು ವಿಚಾರಗಳನ್ನು ಪ್ರಮುಖವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಮೊದಲನೇದಾಗಿ ಯಾವ ಉದ್ದೇಶಕ್ಕಾಗಿ ನೀವು ಲೋನ್ ಪಡೆದುಕೊಳ್ಳಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎರಡನೇದಾಗಿ ಆ ಉದ್ದೇಶಕ್ಕಾಗಿ ಎಷ್ಟು ಮೊತ್ತವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

ಈ ಬ್ಯಾಂಕ್ ನಲ್ಲಿ ಎಷ್ಟು ಬಡ್ದಿದರಕ್ಕೆ ವಯಕ್ತಿಕ ಸಾಲ ಸಿಗುತ್ತೆ ಗೊತ್ತಾ? ಅಪ್ಲೈ ಮಾಡುವುದಕ್ಕೂ ಮೊದಲು ಬಡ್ಡಿದರ ತಿಳಿದುಕೊಳ್ಳಿ!

ಎರಡು ವಿಚಾರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೋನ್ (SBI Personal Loans) ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಖಾತ್ರಿಪಡಿಸಿಕೊಳ್ಳಬೇಕಾಗಿರುತ್ತದೆ. ಉದಾಹರಣೆಗೆ ನೋಡುವುದಾದರೆ ಒಂದು ವೇಳೆ ನಿಮಗೆ ಹೊಸ ಅಂಗಡಿಯನ್ನು ಓಪನ್ ಮಾಡಬೇಕು ಎನ್ನುವ ಕಾರಣಕ್ಕಾಗಿ ಎರಡು ಲಕ್ಷ ರೂಪಾಯಿಗಳ ಲೋನ್ ಹಣದ ಅಗತ್ಯತೆ ಇದೆ ಅಂದ್ರೆ ಆ ಸಂದರ್ಭದಲ್ಲಿ ನೀವು ಮುದ್ರಾ ಲೋನ್ ಯೋಜನೆಯ(Mudra Loan Scheme) ಮೂಲಕ ಹಣವನ್ನು ಪಡೆದುಕೊಳ್ಳಬಹುದು.

 ಲೋನ್ಗಾಗಿ ಅವಶ್ಯಕ ಡಾಕ್ಯೂಮೆಂಟ್ ಗಳ ತಯಾರಿ (Needed Documents to get SBI Personal Loans)

ಇನ್ನು ಒಂದು ವೇಳೆ ನೀವು ಡಿಜಿಟಲ್ ಮಾಧ್ಯಮದ ಮೂಲಕ ಲೋನ್ ಪಡೆದುಕೊಳ್ಳುವಂತಹ ಪ್ರಯತ್ನವನ್ನು ಮಾಡುತ್ತಿದ್ದರೆ ಆ ಸಂದರ್ಭದಲ್ಲಿ ಆ ಸಾಲಕ್ಕೆ ಬೇಕಾಗಿರುವಂತಹ ಡಾಕ್ಯೂಮೆಂಟ್ ಗಳನ್ನು ನೀವು ಡಿಜಿಟಲ್ ರೂಪದಲ್ಲಿ ಪ್ರಸ್ತುತಪಡಿಸಬೇಕಾಗಿರುತ್ತದೆ. ಒಂದು ವೇಳೆ ನಿಮಗೆ ಆಫ್ ಲೈನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕು ಎನ್ನುವುದಿದ್ದರೆ ಪ್ರತಿಯೊಂದು ಡಾಕ್ಯುಮೆಂಟ್ಗಳ ಜೆರಾಕ್ಸ್ ಪ್ರತಿಯನ್ನು ನೀಡಬೇಕಾಗಿರುತ್ತದೆ.

 ಆಫ್ಲೈನ್ ವಿಧಾನ (SBI Personal Loans get it in Offline)

1. ಮೊದಲಿಗೆ ಹತ್ತಿರದಲ್ಲಿರುವಂತಹ ಬ್ಯಾಂಕಿಗೆ ಹೋಗಿ ಲೋನ್ ಅಧಿಕಾರಿಗಳ ಬಳಿ ಹೋಗಿ ನಿಮಗೆ ಬೇಕಾಗಿರುವಂತಹ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗಿರುತ್ತದೆ.

2. ಸಾಲ ಪಡೆದುಕೊಳ್ಳುವಂತಹ ನಿಮ್ಮ ಕಾರಣಗಳನ್ನು ಕೇಳಿದ ನಂತರ ಬ್ಯಾಂಕಿನ ಲೋನ್ ಅಧಿಕಾರಿಗಳು ನಿಮಗೆ ಫಾರ್ಮ್ ನೀಡುತ್ತಾರೆ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ನೀವು ತುಂಬಬೇಕಾಗಿರುತ್ತದೆ.

3. ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನು ನೀಡಿದ ನಂತರ ಅದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಪಿನ್ ಮಾಡಬೇಕಾಗಿರುತ್ತದೆ ಹಾಗೂ ಅದನ್ನು ನೀವು ಲೋನ್ ಅಧಿಕಾರಿಗಳಿಗೆ ನೀಡಬೇಕಾಗಿರುತ್ತದೆ.

4. ಸ್ವಲ್ಪ ದಿನಗಳ ನಂತರ ನಿಮ್ಮ ಪ್ರತಿಯೊಂದು ಮಾಹಿತಿಗಳನ್ನು ಚೆಕ್ ಮಾಡಿದ ನಂತರ ಬ್ಯಾಂಕ್ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತದೆ.

 ಆನ್ಲೈನ್ ವಿಧಾನ (SBI Personal Loans get it in Online)

1. ಈ ವಿಧಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಅಥವಾ ಅದರ ಆನ್ಲೈನ್ ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ ನೀವು ಮೊದಲಿಗೆ ಹೋಗಬೇಕಾಗಿರುತ್ತದೆ.

2. ಲೋನ್ ಬಟನ್ ಕ್ಲಿಕ್ ಮಾಡಿದ ನಂತರ ಮೊದಲಿಗೆ ಯಾವ ರೀತಿಯ ಲೋನ್ ಬೇಕು ಎನ್ನುವುದನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ.

3. ಒಂದು ವೇಳೆ ನೀವು ಬ್ಯಾಂಕಿನ ಗ್ರಾಹಕರಾಗಿದ್ದರೆ ಹೌದು ಹಾಗೂ ಅಲ್ಲದೆ ಹೋದಲ್ಲಿ ಇಲ್ಲ ಎನ್ನುವಂತಹ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.

4. ಒಂದು ವೇಳೆ ನೀವು ಮೊದಲಿನಿಂದಲೂ ಗ್ರಾಹಕರಾಗಿದ್ದರೆ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ ಮುಂದಿನ ಹಂತಕ್ಕೆ ತೇರ್ಗಡೆಯಾಗಿ ಹಾಗೂ ನಿಮಗೆ ಸರಿಯಾದ ರೀತಿಯ ಲೋನ್ ಆಯ್ಕೆಯನ್ನು ನೀಡಲಾಗುತ್ತದೆ.

5. ಈ ಸಂದರ್ಭದಲ್ಲಿ ಕೇಳಿದಾಗ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡುವ ಮೂಲಕ ಲೋನ್ ಹಂತದ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

6. ಒಂದು ವೇಳೆ ನೀವು ಮೊದಲೇನಿಂದಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Personal Loans)ದ ಗ್ರಾಹಕರು ಅಲ್ಲದೆ ಹೋದಲ್ಲಿ ನಿಮ್ಮ ಬಗ್ಗೆ ಇರುವಂತಹ ಹೆಸರು, ಹುಟ್ಟಿದ ದಿನಾಂಕ, ಯಾವ ರೀತಿಯ ಉದ್ಯೋಗ ಅಥವಾ ಉದ್ಯಮವನ್ನು ಹೊಂದಿದ್ದೀರಿ, ನಿಮ್ಮ ಸ್ಥಳ, ನಿಮ್ಮ ಆದಾಯದ ಪ್ರತಿಯೊಂದು ಮಾಹಿತಿಗಳನ್ನು ಕೂಡ ಅಲ್ಲಿ ಕೇಳಿರುವಂತೆ ತುಂಬಾ ಬೇಕಾಗಿರುತ್ತದೆ.

ನಂತರ ನಿಮ್ಮ ಫೋನ್ ನಂಬರ್ ಇಮೇಲ್ ಐಡಿಗಳಂತಹ ಪ್ರತಿಯೊಂದು ಕಾಂಟಾಕ್ಟ್ ಡೀಟೇಲ್ಸ್ ಗಳನ್ನು ಕೂಡ ಭರ್ತಿ ಮಾಡಿದ ನಂತರ ಕಂಡಿಶನ್ ಅನ್ನು ಕೂಡ ಒಪ್ಪಿಕೊಳ್ಳ ಬೇಕಾಗಿರುತ್ತದೆ. ನಂತರ ಎಷ್ಟು ಹಣ ಬೇಕು ಎನ್ನುವಂತಹ ಆಯ್ಕೆ ನಿಮ್ಮ ಮುಂದೆ ಬರುತ್ತದೆ. ಬೇಕಾಗಿರುವಂತಹ ಡಾಕ್ಯುಮೆಂಟ್ಗಳನ್ನು ಹಾಗೂ ಮಾಹಿತಿಗಳನ್ನು ಅಪ್ಲೋಡ್ ಮಾಡಿದ ನಂತರ ಬ್ಯಾಂಕಿನಿಂದ ನಿಮಗೆ ಸಾಲ ಅಪ್ರೂವ್ ಆಗಿದೆಯೋ ಇಲ್ಲವೋ ಎನ್ನುವಂತಹ ಮಾಹಿತಿ ದೊರಕುತ್ತದೆ.

Comments are closed.