Bigg Boss 10: ಕಡೆಗೂ “ನನ್ನ ಸಂಗೀತ ಫ್ರೆಂಡ್ ಶಿಫ್ ಹಾಳಾಗಿದ್ಯಾಕೆ” ರಿವೀಲ್ ಮಾಡಿದ ಬಿಗ್ ಬಾಸ್ ವಿನ್ನರ್; ಸಂಗೀತಾ ಸ್ನೇಹಕ್ಕಾಗಿ ಈಗಲೂ ಹಂಬಲಿಸ್ತಿದ್ದಾರಾ ಕಾರ್ತಿಕ್?  

Bigg Boss 10: ಸ್ನೇಹಿತರೆ, ಈಗಾಗಲೇ ಬಿಗ್ ಬಾಸ್ ನ ಹತ್ತನೇ ಅವತರಣಿಕೆ (Bigg Boss 10) ಕೂಡ ಮುಗಿದಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ವಿನ್ನರ್ (Bigg Boss 10 Winner)  ಆಗಿ ಕಾರ್ತಿಕ್ ಮಹೇಶ್ (karthik Mahesh) ರವರು ಹೊರಹೊಮ್ಮಿದ್ದಾರೆ ಹಾಗೂ ಎರಡನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ (Drone Pratap) ರವರು ಕಾಣಿಸಿಕೊಂಡಿದ್ದಾರೆ. ಹಿಂದಿನ ಬಿಗ್ ಬಾಸ್ ಅವತಾರಣಿಕೆಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಕಾಂಟ್ರ-ವರ್ಷಿಯಲ್ ಆಗಿತ್ತು.

Bigg Boss 10 winner karthik explained about his and sangeeta’s Friendship

ಕೆಲವು ಸ್ಪರ್ಧಿಗಳು ಮನೆಯ ಒಳಗೆ ಉತ್ತಮವಾದ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿ ಹೊರಬಂದ ನಂತರ ಜನಪ್ರಿಯತೆ ಕಡಿಮೆಯಾದವರು ಕೂಡ ಇದ್ದಾರೆ. ಇನ್ನು ಕೆಲವರು ಮನೆಯ ಹೊರಗೆ ಬಂದ ನಂತರವೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದವರು ಕೂಡ ಇದ್ದಾರೆ. ಕೆಲವು ಪ್ರೇಕ್ಷಕರಿಗೆ ಈ ಬಾರಿಯ ವಿನ್ನರ್ ಆಯ್ಕೆ ಮಾಡಿರುವುದು ಅಸಮಂಜಸ ಎಂದನಿಸಿದರೆ, ಇನ್ನು ಕೆಲವರಿಗೆ ಬಿಗ್ ಬಾಸ್ (Bigg Boss 10)  ವಿನ್ನರ್ ಸರಿಯಾಗಿದ್ದಾರೆ ಅನ್ನೋ ಅಭಿಪ್ರಾಯ ಕೂಡ ಇದೆ.

ಅಬ್ಬಾ.. ಇದು ನಿಜನಾ? 30 ನಿಮಿಷಗಳಲ್ಲಿ ಹಣ ನಿಮ್ಮ ಅಕೌಂಟ್ ಗೆ – ರಾಪಿಡ್  ರುಪಿ ಆಪ್ ಅನ್ನು ಇನ್ ಸ್ಟಾಲ್ ಮಾಡಿ ಅಪ್ಲೈ ಮಾಡಿ

ಬಿಗ್ ಬಾಸ್ ಮನೆಯ (Bigg Boss 10)  ಒಳಗೆ ಬಂದ ಸಂದರ್ಭದಲ್ಲಿ ಕಾರ್ತಿಕ್ ಮಹೇಶ್ ರವರಿಗೆ ಅತ್ಯಂತ ಕ್ಲೋಸ್ ಆಗಿದ್ದವರು ಸಂಗೀತ ಶೃಂಗೇರಿ (Sangeeta Shringeri) ಅನ್ನೋದನ್ನ ಕೂಡ ನಾವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಇವರ ನಡುವೆ ಇದ್ದ ಗಾಢ ಪ್ರೀತಿ ನಂತರ ಇಬ್ಬರು ಫ್ರೆಂಡ್ಸ್ ಆಗಿರೋಣ ಎನ್ನುವಂತಹ ಮಾತು ಕೇಳೋದಕ್ಕೆ ಪ್ರಾರಂಭವಾಯಿತು. ಅಷ್ಟೊಂದು ಕ್ಲೋಸ್ ಆಗಿದ್ದ ಇವರಿಬ್ಬರೂ ನಂತರ ಹಾವು ಮುಂಗುಸಿ ರೀತಿಯಲ್ಲಿ ವೈರಿಗಳಾಗಿದ್ದು ವಿಪರ್ಯಾಸ ಎಂದು ಹೇಳಬಹುದು.

ಸ್ನೇಹಕ್ಕಗಿ ನಾನು ಸದಾ ಕೈಚಾಚುತ್ತೇನೆ” – ಬಿಗ್ ಬಾಸ್ ವಿನ್ನರ್ (Bigg Boss 10)  ಕಾರ್ತಿಕ್!

ಇತ್ತೀಚಿನ ಸಂದರ್ಶನದಲ್ಲಿ ನಿರೂಪಕಿ ಕೂಡ ಕಾರ್ತಿಕ್ ಮಹೇಶ್ ರವರಿಗೆ ಇದೆ ವಿಚಾರದಲ್ಲಿ ಪ್ರಶ್ನೆ ಕೇಳಿ, ಒಂದು ಸಮಯದಲ್ಲಿ ನಿಮ್ಮ ನಡುವೆ ಉತ್ತಮ ಬಾಂಡಿಂಗ್ ಇತ್ತು ಏಕಾಏಕಿ ದೂರವಾಗಿದ್ದು ಏಕೆ ಎನ್ನುವುದಾಗಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಾರ್ತಿಕ್ ಮಹೇಶ್ ರವರು ಕೆಲವೊಂದು ಪರಿಸ್ಥಿತಿಗೆ ತಕ್ಕಂತೆ ಆ ರೀತಿ ನಡೆಯಿತು ನಮ್ಮಿಬ್ಬರ ನಡುವೆ ಸ್ನೇಹ ಚೆನ್ನಾಗಿಯೇ ಇದೆ ಎಂಬುದಾಗಿ ಹೇಳಿದ್ದಾರೆ. ಬಿಗ್ ಬಾಸ್ (Bigg Boss 10) ಮನೆಯಿಂದ ಹೊರ ಬಂದ ನಂತರವೂ ಕೂಡ ನಿಮ್ಮಿಬ್ಬರ ನಡುವೆ ಸ್ನೇಹ ಉಳಿದುಕೊಂಡಿದೆಯಾ ಎನ್ನುವ ಪ್ರಶ್ನೆಗೆ ಕೂಡ, ಫ್ರೆಂಡ್ಶಿಪ್ (Friendship) ನಿಂದ ದೂರ ಇರುತ್ತೇನೆ ಎನ್ನುವುದಾಗಿ ಅಲ್ಲ ಆದರೆ ಫ್ರೆಂಡ್ಶಿಪ್ ಚೆನ್ನಾಗಿರಬೇಕು ಎಂಬುದಾಗಿ ಬಯಸುತ್ತೇನೆ ಎನ್ನುವುದಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಕಾರ್ತಿಕ್ ಮಹೇಶ್ ಉತ್ತರ ನೀಡಿರುವುದು ಈಗ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗುತ್ತಿದೆ.

ನನ್ನ ಜೀವನದಲ್ಲಿ ಈಗ ನಾನು ಕಷ್ಟಪಟ್ಟಿದ್ದಕ್ಕೆ ಬಿಗ್ ಬಾಸ್ (Bigg Boss 10)  ಮೂಲಕ ನಾನು ಅಂದುಕೊಂಡಿದ್ದು ಎಲ್ಲದು ಸಿಗುತ್ತಿದೆ ಎಂಬುದಾಗಿ ಹೇಳಿಕೊಂಡಿರುವಂತಹ ಕಾರ್ತಿಕ್ ಮಹೇಶ್ ರವರು, ಬಿಗ್ ಬಾಸ್ ಅನ್ನು ಒಪ್ಪಿಕೊಂಡಿರುವುದು ನನ್ನ ಜೀವನದ ದೊಡ್ಡ ಸಾಧನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ಕೊನೆ ಸಮಯದಲ್ಲಿ ನಾನು ಬಿಗ್ ಬಾಸ್ ಅನ್ನು ಒಪ್ಪಿಕೊಂಡು ಒಳ್ಳೆಯ ಕೆಲಸ ಮಾಡಿದ್ದೇನೆ ಅನ್ನೋದಾಗಿ ಕಾರ್ತಿಕ್ ಮಹೇಶ್, ಈ ಸಂದರ್ಭದಲ್ಲಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ಕಾರ್ತಿಕ್ ಮಹೇಶ್ ರವರಿಗೆ ಉತ್ತಮವಾದ ಜನ ಬೆಂಬಲ ಸಿಗುತ್ತಿದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ.

ನೀವು ಬಿಗ್ ಬಾಸ್ 10 (Bigg Boss 10) ವೀಕ್ಷಿಸಿದ್ದರೆ, ಸಂಗೀತಾ ಹಾಗೂ ಕಾರ್ತಿಕ್ ಅವರ ಸ್ನೆಹದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ.

Comments are closed.