Maha Shivratri 2024: ಮಹಾಶಿವರಾತ್ರಿಯ ನಂತರ ಈ ಐದು ರಾಶಿಯವರ ಬದುಕನ್ನೇ ಬದಲಾಯಿಸಲಿದ್ದಾನೆ ಶಿವ; ನಿಮ್ಮ ರಾಶಿಯೂ ಇದ್ಯಾ ನೋಡಿ!

Maha Shivratri 2024: ಈ ಬಾರಿಯ ಮಹಾಶಿವರಾತ್ರಿ ನಿಮಗಿರರಿಗೂ ತಿಳಿದಿರುವ ಹಾಗೆ ಮಾರ್ಚ್ 8ನೇ ತಾರೀಖಿನಂದು ಬರುತ್ತಿದೆ. ಮಹಾಶಿವರಾತ್ರಿ ಶಿವನ ಭಕ್ತರಿಗೆ ನಿಜಕ್ಕೂ ಕೂಡ ಅತ್ಯಂತ ಪವಿತ್ರವಾದ ದಿನ ಎಂದು ಹೇಳಬಹುದಾಗಿದೆ. ಇಡೀ ದಿನ ಉಪವಾಸವಿದ್ದು ರಾತ್ರಿಯೆಲ್ಲ ನಿದ್ದೆ ಬಿಟ್ಟು ಶಿವನ ಆರಾಧನೆ ಮಾಡುವಂತಹ ಭಕ್ತರನ್ನು ಕೂಡ ನಾವು ನಮ್ಮ ನಿಮ್ಮ ನಡುವೆ ನೋಡಬಹುದಾಗಿದೆ. ಅಷ್ಟರ ಮಟ್ಟಿಗೆ ಶಿವರಾತ್ರಿ ಅತ್ಯಂತ ಪವಿತ್ರವಾದದ್ದು ಎಂಬುದಾಗಿ ನಂಬಲಾಗುತ್ತದೆ. ಇನ್ನು ಇದಕ್ಕಿಂತ ಒಂದು ದಿನ ಮುಂಚೆ ಅಂದ್ರೆ ಮಾರ್ಚ್ 7 ನೇ ತಾರೀಖಿನಂದು ಶನಿ ಇರುವಂತಹ ಕುಂಭ ರಾಶಿಗೆ ಶುಕ್ರ ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ 5 ರಾಶಿಯವರಿಗೆ ಒಳ್ಳೆಯದಾಗಲಿದ್ದು ಬನ್ನಿ ಆ ಐದು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

 ವೃಷಭ ರಾಶಿ (Taurus)

ತಮ್ಮ ಕೆಲಸ ಹಾಗೂ ವ್ಯಾಪಾರದಲ್ಲಿ ವೃಷಭ ರಾಶಿಯವರು ವೇಗವಾಗಿ ಯಶಸ್ಸನ್ನು ಪಡೆಯುತ್ತಾರೆ. ಸಾಕಷ್ಟು ಸಮಯಗಳಿಗೆ ನಿಮಗೆ ಸಿಗಬೇಕಾಗಿರುವಂತಹ ಹಣ ನಿಮ್ಮ ಕೈ ಸೇರಲಿದೆ. ನೀವು ಮಾಡುವಂತ ಕೆಲಸಗಳಿಂದಾಗಿ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಸಾಕಷ್ಟು ಸಮಯಗಳಿಂದ ನೀವು ಸಿಂಗಲ್ ಆಗಿದ್ದು ಮದುವೆಗಾಗಿ ಹುಡುಕುತ್ತಿದ್ರೆ ಅತಿ ಶೀಘ್ರದಲ್ಲಿ ನಿಮ್ಮ ಕಂಕಣ ಭಾಗ್ಯ ಕೂಡಿ ಬರಲಿದೆ. ನಿಮ್ಮ ಕುಟುಂಬದಲ್ಲಿ ಶಾಂತಿ ನೆಮ್ಮದಿ ತುಂಬಿ ತುಳು ಕಾಡಲಿದೆ. ಹಣದ ವಿಚಾರದಲ್ಲಿ ವೃಷಭ ರಾಶಿಯವರಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

 ಸಿಂಹ ರಾಶಿ (Leo)

ಸಾಕಷ್ಟು ಸಮಯಗಳಿಂದ ಸಿಂಹ ರಾಶಿಯವರು ಬಯಸಿರುವಂತಹ ಕೆಲಸ ಅವರ ಪಾಲಾಗಲಿದೆ. ಆದಾಯ ಸಿಗುವಂತಹ ಮೂಲಗಳು ಕೂಡ ಹೆಚ್ಚಾಗಿರುವುದರಿಂದಾಗಿ ಹಣದ ಸಂಪಾದನೆ ಕೂಡ ಹಿಂದಿಗಿಂತ ಹೆಚ್ಚಾಗಲಿದೆ. ಒಂದು ವೇಳೆ ನೀವು ಹೊಸದಾಗಿ ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನ ಕೂಡ ಚೆನ್ನಾಗಿರಲಿದೆ. ಸಿಂಹ ರಾಶಿಯವರು ಹಣದ ವಿಚಾರದ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬೇರೆ ಬೇರೆ ಆದಾಯದ ಮೂಲಗಳು ಇರುವ ಕಾರಣದಿಂದಾಗಿ ಸಿಂಹ ರಾಶಿಯವರಿಗೆ ಹಣದ ಸಂಪಾದನೆ, ಸುಲಭದ ವಿಚಾರವಾಗಿರಲಿದೆ.

 ತುಲಾ ರಾಶಿ (Libra)

ಹಣಕಾಸಿನ ವಿಚಾರದಲ್ಲಿ ಕೂಡ ತುಲಾ ರಾಶಿಯವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಕೈ ತುಂಬಾ ಹಣದ ಸಂಪಾದನೆ ಈ ಸಂದರ್ಭದಲ್ಲಿ ನಡೆಯಲಿದೆ. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ತುಲಾ ರಾಶಿಯವರು ಅಂದುಕೊಂಡ ರೀತಿಯಲ್ಲಿ ಲಾಭವನ್ನು ಸಂಪಾದನೆ ಮಾಡಲಿದ್ದೀರಿ. ನಿಮ್ಮಲ್ಲಿರುವಂತಹ ಆತ್ಮವಿಶ್ವಾಸ ನಿಮಗೆ ಯಾವುದೇ ಸಮಯದಲ್ಲಿ ಕೂಡ ಗೆದ್ದು ನಿಲ್ಲುವಂತಹ ಛಲವನ್ನು ನೀಡುತ್ತದೆ. ಕುಟುಂಬದೊಂದಿಗೆ ಸಂಬಂಧವನ್ನು ಕಡಿದು ಕೊಂಡಿದ್ದರೆ ಈ ಸಂದರ್ಭದಲ್ಲಿ ಮತ್ತೆ ಅವರ ಜೊತೆಗೆ ಒಂದಾಗಲಿದ್ದೀರಿ. ಕುಟುಂಬದಲ್ಲಿ ಮತ್ತೆ ಸಂತೋಷ ನೆಲೆಸಲಿದೆ.

 ಮಕರ ರಾಶಿ (Capricorn)

ಈ ವಿಶೇಷವಾದ ಸಂಯೋಗದಿಂದಾಗಿ ಮಕರ ರಾಶಿಯವರು ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ತಂದೆಯ ಜೊತೆಗೆ ಅಥವಾ ನಿಮ್ಮನ್ನು ಸಾಕಿದವರ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿ ರೂಪುಗೊಳ್ಳಲಿದೆ. ನಿಮಗೆ ಇಷ್ಟ ಆಗಿರುವಂತಹ ಕೆಲಸ ನಿಮ್ಮ ಕೈ ಸೇರಲಿದೆ. ಒಂದು ವೇಳೆ ನೀವು ಈಗಾಗಲೇ ಕೆಲಸದಲ್ಲಿ ಇದ್ದರೆ ಪ್ರಮೋಷನ್ ಅಥವಾ ಸಂಬಳದಲ್ಲಿ ಹೆಚ್ಚಾಗುವಂತಹ ಪ್ರಕ್ರಿಯೆ ಕೂಡ ನಡೆಯಲಿದೆ.

 ಕುಂಭ ರಾಶಿ (Aquarius)

ಮಹಾಶಿವರಾತ್ರಿಯ ನಂತರ ಉಂಟಾಗುವಂತಹ ಈ ವಿಶೇಷವಾದ ಸಂದರ್ಭದಲ್ಲಿ ಕುಂಭ ರಾಶಿಯವರು ಸಾಕಷ್ಟು ಸಾಧನೆಯನ್ನು ಮಾಡಲಿದ್ದಾರೆ. ಕಳೆದ ಸಾಕಷ್ಟು ಸಮಯಗಳಿಂದ ನಿಮ್ಮ ಆಸೆ ಆಗಿರುವಂತಹ ಹೊಸ ಮನೆ ಹಾಗೂ ವಾಹನವನ್ನು ಖರೀದಿ ಮಾಡುವಂತಹ ಯೋಜನೆ ಕೂಡ ಸಾಕಾರಗೊಳ್ಳಲಿದೆ. ನೀವು ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದ್ರು ಕೂಡ ಅದೃಷ್ಟ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ.

Comments are closed.