Govt. Loan Subsidy Scheme: ಈಗಲೇ ಅರ್ಜಿ ಸಲ್ಲಿಸಿ; ಸ್ವಯಂ ಉದ್ಯೋಗ ಮಾಡುವವರಿಗೆ ಸಿಗುತ್ತೆ 1 ಲಕ್ಷ ರೂಪಾಯಿಗಳ ಧನ ಸಹಾಯ!

Govt. Loan Subsidy Scheme: ಸಾಕಷ್ಟು ಜನರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತಹ ಇಷ್ಟ ಇರೋದಿಲ್ಲ ಇದೇ ಕಾರಣಕ್ಕಾಗಿ ಅವರು ತಮ್ಮದೇ ಆದಂತಹ ಸ್ವಂತ ಉದ್ಯೋಗ (Own Business) ವನ್ನು ಪ್ರಾರಂಭ ಮಾಡಬೇಕು ಎಂಬುದಾಗಿ ಆಸೆಯನ್ನು ಹೊಂದಿರುತ್ತಾರೆ ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಹಣದ ವ್ಯವಸ್ಥೆ ಅವರ ಬಳಿ ಇರುವುದಿಲ್ಲ ಕಾರಣಕ್ಕಾಗಿ ಅವರು ಹಿಂಜರಿಯುತ್ತಾರೆ. ಆದರೆ ಇನ್ನು ಮುಂದೆ ಆ ರೀತಿ ಮಾಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಹಣದ ಸಹಾಯವನ್ನು ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಲಿದೆ.

ಸಣ್ಣ ಪ್ರಮಾಣದ ವ್ಯಾಪಾರ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲಿರುವಂತಹ ಜನರಿಗೆ ಈ ಯೋಜನೆಯ ಮೂಲಕ ಸಹಾಯಧನವನ್ನು ನೀಡಲು ಯೋಜನೆ ಹಾಕಲಾಗಿದ್ದು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಯೋಜನೆಯನ್ನು ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಜಾರಿಗೆ ತರಲಾಗಿದೆ.

 ಈ ಸಮುದಾಯಕ್ಕೆ ಅಂದರೆ ಜೈನ, ಮುಸ್ಲಿಂ, ಸಿಖ್, ಕ್ರಿಸ್ತ ಹೀಗೆ ಅಲ್ಪಸಂಖ್ಯಾತ ಸಮುದಾಯದವರು ಯೋಜನೆಯ ಲಾಭವನ್ನು ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ಕನಿಷ್ಠ 18ರಿಂದ 55 ವರ್ಷದ ವಯಸ್ಸಿನ ನಡುವೆ ಇರುವಂತಹ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನೂ ನೀವು ಪಡೆದುಕೊಳ್ಳುವಂತಹ ಸಾಲದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಅಂದರೆ ಶೇಕಡ 33 ಪ್ರತಿಶತ ರಿಯಾಯಿತಿಯನ್ನು ಪಡೆದುಕೊಳ್ಳಲಿದ್ದಾರೆ.

 ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು

1. ವಯಸ್ಸು 18 ರಿಂದ 55 ವರ್ಷ ಆಗಿರಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ಜನರಾಗಿರಬೇಕು.

2. ಆ ಕುಟುಂಬ ಗ್ರಾಮೀಣ ಭಾಗದಲ್ಲಿ ಇದ್ರೆ ಅವರ ವಾರ್ಷಿಕ ಆದ 81,000 ಗಿಂತ ಕಡಿಮೆ ಇರಬೇಕು. ನಗರ ಭಾಗದಲ್ಲಿರುವಂತಹ ಅರ್ಜಿದಾರರು ವಾರ್ಷಿಕವಾಗಿ 1.03 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರಬೇಕು.

3. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸುಸ್ತಿದಾರರಾಗಿರಬಾರ್ದು ಹಾಗೂ ಅವರ ಕುಟುಂಬ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರು ಆಗಿರಬಾರದು.

 ಲೋನ್ ಪಡೆಯಲು ಸಲ್ಲಿಸಬೇಕಾಗಿರುವ ದಾಖಲೆಗಳು

  1. ಪ್ರಾಧಿಕಾರದಿಂದ ಸರಿಯಾದ ರೀತಿಯಲ್ಲಿ ಅಲ್ಪಸಂಖ್ಯಾತರ ಸರ್ಟಿಫಿಕೇಟ್ ಅನ್ನು ಹೊಂದಿರಬೇಕಾಗಿರುತ್ತದೆ.
  • ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಸಲ್ಲಿಸಬೇಕು. ಯಾವ ಉದ್ಯೋಗವನ್ನು ಪ್ರಾರಂಭಿಸಲಿದ್ದಾರೋ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಬೇಕು.

ಯೋಜನೆಯ ಅಧಿಕೃತವಾದ ವೆಬ್ಸೈಟ್ಗೆ (https://kmdconline.karnataka.gov.in/Portal/login) ಹೋಗಿ ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಒಂದು ವೇಳೆ ನೀವು ಕೂಡ ಅರ್ಹರಾಗಿದ್ದರೆ ಅರ್ಜಿಯನ್ನು ಸಲ್ಲಿಸಿ ಸಾಲವನ್ನು ರಿಯಾಯಿತಿಯ ಜೊತೆಗೆ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಅಲ್ಪಸಂಖ್ಯಾತ ಸಮುದಾಯದ ಜನರು ವಿನಾಯಿತಿಯ ಜೊತೆಗೆ ಸಾಲ ಸೌಲಭ್ಯವನ್ನು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡುವುದಕ್ಕೆ ಪಡೆದುಕೊಳ್ಳಬಹುದಾಗಿದೆ.

Comments are closed.