State Politics: ಕರ್ನಾಟಕ ಸರ್ಕಾರಕ್ಕೆ ಬಾರಿ ಮುಖಭಂಗ- ರಾಹುಲ್ ಮಾತು ಕೇಳಿ ಪರಿಹಾರ ಕೊಟ್ಟಿದ್ದ ಸಿದ್ದು ಸರ್ಕಾರಕ್ಕೆ ಕುಟುಂಬ ಮಾಡಿದ್ದೇನು ಗೊತ್ತೇ?

State Politics: ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಕರ್ನಾಟಕದ ಕಾಡಾನೆ ದಾಳಿಗೆ ಕೇರಳದ ವ್ಯಕ್ತಿ ಒಬ್ಬ ಬ-ಲಿಯಾಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇನ್ನು ಇದೇ ಸಂದರ್ಭದಲ್ಲಿ ಆ ಮೃತ ಹೊಂದಿರುವಂತಹ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಬರೋಬ್ಬರಿ 15 ಲಕ್ಷ ರೂಪಾಯಿಗಳ ಪರಿಹಾರ ಹಣವನ್ನು ನೀಡಿತ್ತು. ಕೇರಳದವರಿಗೆ ಯಾಕೆ ಹಣವನ್ನು ನೀಡುತ್ತೀರಿ ಎಂಬುದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ಆದರೆ ಈಗ ಈ ಸುದ್ದಿಯಲ್ಲಿ ಮತ್ತೊಂದು ಟ್ವಿಸ್ಟ್ ಹೊರ ಬಂದಿರುವುದು ತಿಳಿದುಬಂದಿದೆ.

ಇನ್ನು ಈಗ ಆ ಕುಟುಂಬಕ್ಕೆ ಹದಿನೈದು ಲಕ್ಷ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ಕರ್ನಾಟಕ ಸರ್ಕಾರ ನೀಡಿದ್ದನ್ನು, ಕುಟುಂಬ ಸಂಪೂರ್ಣವಾಗಿ ತಿರಸ್ಕರಿಸಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಮಾನವೀಯ ದೃಷ್ಟಿಯಲ್ಲಿ ಈ ಹಣವನ್ನು ಕರ್ನಾಟಕ ಸರ್ಕಾರ ನೀಡಿದೆ ಆದರೆ ಈ ಪರಿಹಾರ ಹಣವನ್ನು ಈಗ ಕುಟುಂಬ ತಿರಸ್ಕರಿಸಿದೆ ಎನ್ನುವುದಾಗಿ ಕರ್ನಾಟಕದ ಅರಣ್ಯ ಸಚಿವ ಆಗಿರುವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ. ಇನ್ನು ಕುಟುಂಬ ತಿರಸ್ಕಾರ ಮಾಡಿದ್ದಕ್ಕೆ ಬಿಜೆಪಿಯನ್ನು ಸಚಿವರು ಹೊಣೆಗಾರರನ್ನಾಗಿ ಮಾಡಿದ್ದಾರೆ. ನಾವು ಮಾನವೀಯ ದೃಷ್ಟಿಯಲ್ಲಿ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡಿದ್ದನ್ನು ಬಿಜೆಪಿ ಪಕ್ಷ ದೊಡ್ಡ ಮಟ್ಟದಲ್ಲಿ ವಿರೋಧ ಮಾಡಿತ್ತು ಇದೇ ಕಾರಣಕ್ಕಾಗಿ ಕುಟುಂಬ ಪರಿಹಾರ ಹಣ ಬೇಡ ಎಂಬುದಾಗಿ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಇನ್ನು ಕೆಲವು ಕಡೆಗಳಲ್ಲಿ ಇದು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರದ ಘಟನೆಯಾಗಿರುವ ಕಾರಣದಿಂದಾಗಿ ಅವರನ್ನು ಮೆಚ್ಚಿಸುವ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಕೇರಳದ ವ್ಯಕ್ತಿಗೆ ತನ್ನ ಖಜನೆಯಿಂದ ಹಣದ ಪರಿಹಾರವನ್ನು ನೀಡುತ್ತಿದೆ ಎಂಬುದಾಗಿ ಬಿಜೆಪಿ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕಾಗಿ ಈಗ ಕುಟುಂಬ ಪರಿಹಾರವನ್ನು ಪಡೆಯುವುದರಿಂದ ನಿರಾಕರಿಸಿದೆ ಎನ್ನುವುದಾಗಿ ಕಾಂಗ್ರೆಸ್ ಪಕ್ಷ ಹಾಗೂ ಸಚಿವ ಈಶ್ವರ್ ಖಂಡ್ರೆ ಹೇಳುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ರಾಜ್ಯದಲ್ಲಿ ಕೂಡ ಹೆಚ್ಚಾಗಿದ್ದು ಸಾಕಷ್ಟು ಕಡೆಗಳಲ್ಲಿ ತೋಟಗಳಲ್ಲಿ ಹಾವಳಿ ಇಡುತ್ತಿರುವಂತಹ ಒಂಟಿ ಸಲಗಗಳನ್ನು ಕೂಡ ಗುರುತಿಸಲಾಗಿದೆ. ಕೆಲವೊಂದು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹರಿದಾಡಿರುವುದನ್ನು ನೀವು ನೋಡಿರಬಹುದಾಗಿದೆ. ಇದೇ ರೀತಿಯಲ್ಲಿ ಆನೆಯ ದಾಳಿಗೆ ಕೇರಳದ ವ್ಯಕ್ತಿ ಮೃತಪಟ್ಟಿದ್ದ. ಆ ಸಂದರ್ಭದಲ್ಲಿ ಕೂಡಲೇ ಕರ್ನಾಟಕ ಸರ್ಕಾರ ಆತನ ಕುಟುಂಬಕ್ಕೆ ಪರಿಹಾರ ಹಣವನ್ನು ಘೋಷಣೆ ಮಾಡಿತ್ತು.

ಕೇರಳ ರಾಜ್ಯದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಹಣವನ್ನು ಕೊಡುವಂತಹ ಅಗತ್ಯ ಏನಿತ್ತು ಎನ್ನುವುದಾಗಿ ವಿರೋಧ ಪಕ್ಷಗಳು ವಿರೋಧ ಮಾಡಿದ್ದವು. ಆದರೆ ಈಗ ಕೊಟ್ಟಿರುವಂತಹ ಪರಿಹಾರದ ಹಣವನ್ನೇ ಕುಟುಂಬ ತಿರಸ್ಕರಿಸಿರುವುದು ಮತ್ತೊಂದು ಆಶ್ಚರ್ಯಕ್ಕೆ ಕಾರಣವಾಗಿದೆ ಎನ್ನಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಪರಿಹಾರ ಹಣವನ್ನು ನೀಡುವುದಕ್ಕೆ ಸುದ್ದಿಯಾಗಿದ್ದು ಕೂಡ ಅದು ರಾಹುಲ್ ಗಾಂಧಿ ಅವರ ಲೋಕಸಭಾ ಚುನಾವಣೆ ಕ್ಷೇತ್ರ ಆಗಿರುವಂತಹ ವೈನಾಡ್ ಎನ್ನುವ ಕಾರಣಕ್ಕಾಗಿ.

Comments are closed.