Government Loan: ಯಾವುದೇ ಅಡಮಾನ ಬೇಡ ಸುಲಭವಾಗಿ ಸಿಗುತ್ತೆ 2 ಲಕ್ಷ ರೂಪಾಯಿಗಳವರೆಗೆ ಲೋನ್ ; ಇದು ಪಕ್ಕಾ ಗ್ಯಾರಂಟಿ ಯೋಜನೆ!

Government Loan: ಸ್ನೇಹಿತರೆ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಡವರಿಗೆ ಹಾಗೂ ಮಾಧ್ಯಮ ವರ್ಗದ ಜನರಿಗೆ ಮತ್ತು ರೈತರಿಗೆ ನೆರವಾಗುವ ರೀತಿಯಲ್ಲಿ ಜಾರಿಗೆ ತಂದಿದೆ. ಇನ್ನು ಈಗ ದೇಶದ ಕುಶಲಕರ್ಮಿಗಳಿಗೆ ನೆರವಾಗುವ ಕಾರಣಕ್ಕಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಬಜೆಟ್ ನಲ್ಲಿ ಈ ಯೋಜನೆಗಾಗಿ 13000 ಕೋಟಿ ರೂಪಾಯಿ ಹಣವನ್ನು ಮೀಸಲಿರಿಸಲಾಗಿದೆ. ಈ ಯೋಜನೆಯಲ್ಲಿ ಕರಕುಶಲಕರ್ಮಿಗಳಿಗೆ ಹೆಚ್ಚಿನ ಗ್ಯಾರೆಂಟಿ ಇಲ್ಲದೆ 2 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶ ನೀಡಲಾಗುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸರ್ಕಾರದ ಈ ಯೋಜನೆಯಲ್ಲಿ ಕಮ್ಮಾರ ಅಕ್ಕಸಾಲಿಗ ಹೀಗೆ ಕರಕುಶಲ ವೃತ್ತಿಯನ್ನು ಮಾಡುವಂತಹ ವರ್ಗದ ಜನರು ಸಾಲವನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಮೊದಲನೇ ಹಂತದಲ್ಲಿ ಒಂದು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡಲಾಗುತ್ತದೆ ಹಾಗೂ ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳು

  1. ಪ್ರಮುಖವಾಗಿ ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಅದರ ಜೊತೆಗೆ ವೋಟರ್ ಐಡಿ ನಂತಹ ಗುರುತಿನ ಚೀಟಿ ಬೇಕು.
  2. ಆಕ್ಟಿವ್ ಆಗಿರುವಂತಹ ಮೊಬೈಲ್ ನಂಬರ್ ಇರಬೇಕು ಅದರ ಜೊತೆಗೆ ಪಾನ್ ಕಾರ್ಡ್ ಕೂಡ ಇರಬೇಕು.
  3. ಜಾತಿ ಹಾಗೂ ಆದಾಯ ಸರ್ಟಿಫಿಕೇಟ್ ಜೊತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅನ್ನು ಕೂಡ ನೀಡಬೇಕಾಗಿರುತ್ತದೆ.

ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಜಾರಿಗೆ ಬಂದಿರುವಂತಹ ವಿಶ್ವಕರ್ಮ ಯೋಜನೆಯಲ್ಲಿ ನೀವು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತುಂಬಿಸಬೇಕಾಗಿರುತ್ತದೆ. ಹಾಗೂ ಈಗಾಗಲೇ ಮೇಲಿನ ಹೇಳಿರುವಂತಹ ಡಾಕ್ಯುಮೆಂಟ್ ಗಳನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ. ಈ ಮೂಲಕ ನೀವು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

ಹತ್ತಿರದಲ್ಲೇ ಇರುವಂತಹ CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಲ್ಲಿ ನೀಡುವಂತಹ ಸಲಹೆಗಳ ಆಧಾರದ ಮೇಲೆ ಕೂಡ ನೀವು ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ನಾವು ಈ ಮೇಲೆ ಹೇಳಿರುವಂತೆ ಕುಶಲಕರ್ಮಿಗಳ ಸಮುದಾಯಕ್ಕೆ ನೀವು ಸೇರಿದವರಾಗಿರಬೇಕು ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ. ಈ ಸಾಲವನ್ನು ಪಡೆದುಕೊಳ್ಳುವುದರ ಮೂಲಕ ನೀವು ನಿಮ್ಮ ಕುಶಲಕರ್ಮಿ ಕೆಲಸವನ್ನು ಇನ್ನಷ್ಟು ಹೆಚ್ಚಿನ ಸ್ಕೇಲ್ ನಲ್ಲಿ ಮಾಡಬಹುದಾಗಿದೆ.

ಇಂತಹ ಕುಶಲಕರ್ಮಿಗಳ ಆದಾಯವನ್ನು ಹೆಚ್ಚಿಸುವುದಕ್ಕಾಗಿಯೇ ಕೇಂದ್ರ ಸರ್ಕಾರ ಈ ರೀತಿಯ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಇದರ ಉಪಯೋಗವನ್ನು ಪ್ರತಿಯೊಬ್ಬ ಕುಶಲಕರ್ಮಿಗಳು ಕೂಡ ಪಡೆದುಕೊಳ್ಳುವ ಮೂಲಕ ದೇಶವನ್ನು ಉತ್ತಮ ಆರ್ಥಿಕತೆಗೆ ಕೊಂಡೊಯ್ಯುವಂತಹ ದೇಶದ ಪ್ರಧಾನ ಮಂತ್ರಿಗಳ ಪ್ರಯತ್ನಕ್ಕೆ ನೀವು ಕೂಡ ಒಂದು ಹೆಜ್ಜೆಯನ್ನು ಇಡುವಂತಹ ಪ್ರಯತ್ನವನ್ನು ಮಾಡಿ.

Comments are closed.