EV – Scooter: ಇ- ಸ್ಕೂಟರ್ ಖರೀದಿ ಮಾಡುವವರಿಗೆ ಸರ್ಕಾರದಿಂದ ಸಿಗುತ್ತೆ 40,000 ರೂ; ಅಪ್ಲೈ ಮಾಡಿ!

EV – Scooter: ಸರ್ಕಾರ ಸದ್ಯದ ಮಟ್ಟಿಗೆ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ನಡೆಸುತ್ತಿದೆ. ಇನ್ನು ಹೆಚ್ಚುತ್ತಿರುವಂತಹ ವಾಯುಮಾಲಿನ್ಯದ ನಿಯಂತ್ರಣಕ್ಕಾಗಿ ಕೂಡ ಸರಕಾರ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ. ಇನ್ನು ಅನಿಲಗಳು ಹೊರಸೂಸುವಿಕೆಯಿಂದಾಗಿ ವಾತಾವರಣ ಕಲುಷಿತಗೊಳ್ಳುತ್ತಿದ್ದು ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಸರ್ಕಾರ ಸಾಕಷ್ಟ ಸುಧಾರಕ ಕ್ರಮಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ವಿಶೇಷವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಜಾರಿಗೆ ತಂದಿರುವಂತಹ ಒಂದು ವಿಶೇಷ ಯೋಜನೆ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಬೇರೆ ಬೇರೆ ರಾಜ್ಯ ಸರ್ಕಾರಗಳಲ್ಲಿ ಜಾರಿಗೆ ಬಂದಿರುವ ರೀತಿಯಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವಂತಹ ಹಾಗೂ ಉತ್ತಮ ವಾತಾವರಣವನ್ನು ಕಾಯ್ದಿರಿಸಿಕೊಳ್ಳುವಲ್ಲಿ ಸಹಾಯ ಮಾಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿಸುವುದಕ್ಕಾಗಿ ಮಧ್ಯಪ್ರದೇಶದ ಸರ್ಕಾರ ಗ್ರಾಹಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಲೆಯ ಮೇಲೆ ರಿಯಾಯಿತಿಯನ್ನು ನೀಡುವಂತಹ ಘೋಷಣೆಯನ್ನು ಮಾಡಿದೆ. ಇನ್ಮುಂದೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡುವಂತಹ ಕಾರ್ಮಿಕರಿಗೆ 40,000ಗಳವರೆಗೆ ಆರ್ಥಿಕ ನೆರವು ನೀಡುವಂತಹ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ಬಗ್ಗೆ ಮಾತನಾಡಿರುವಂತಹ ಸರ್ಕಾರದ ಮುಖ್ಯಮಂತ್ರಿಗಳು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಟಿನಲ್ಲಿ ಈ ರೀತಿಯ ಯೋಜನೆಗಳನ್ನು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಇಂತಹ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎನ್ನುವಂತಹ ಮಾತುಗಳನ್ನು ಹೇಳಿದ್ದಾರೆ.

ಭಾರತ ದೇಶದಲ್ಲಿ ಸಾಕಷ್ಟು ರಾಜ್ಯ ಸರ್ಕಾರಗಳು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ರಿಯಾಯಿತಿ ದರವನ್ನು ನೀಡುವಂತಹ ಕ್ರಮಗಳನ್ನು ಜಾರಿಗೆ ತಂದಿವೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಕಳೆದ ಜನವರಿ ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಅಂದ್ರೆ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡುವವರಿಗೆ ಅವುಗಳ ಮೌಲ್ಯಕ್ಕೆ ಆದರಿಸಿ ಒಂದು ಸಾವಿರ ರೂಪಾಯಿಗಳಿಂದ 40,000ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ವರ್ಷದ ಬಜೆಟ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಳಕೆಯನ್ನು ಉತ್ತೇಜನ ಮಾಡುವ ರೀತಿಯಲ್ಲಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಈ ಬಾಗಿ ಘೋಷಣೆ ಮಾಡಿದ್ರು.

ಕಳೆದ ವರ್ಷದ ಏಪ್ರಿಲ್ ಇಂದ ನವೆಂಬರ್ ತಿಂಗಳ ಒಳಗೆ ಕರ್ನಾಟಕ ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಗಳ ನೋಂದಾವಣೆ ಆಗಿದೆ ಅನ್ನೋದಾಗಿ ಕೂಡ ಸುದ್ದಿ ಇದೆ. ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚು ಮಾಡಿದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗಳಂತಹ ಇಂಧನಗಳ ಬಳಕೆ ಕೂಡ ಹೆಚ್ಚಾಗುವುದಿಲ್ಲ ಹಾಗೂ ವಾಯುಮಾಲಿನ್ಯ ಕೂಡ ಸಂಪೂರ್ಣವಾಗಿ ಹಿಡಿತಕ್ಕೆ ಸಿಗಲಿದೆ. ನಮ್ಮ ಮುಂದಿನ ಪೀಳಿಗೆಗೆ ಒಂದೊಳ್ಳೆ ಆರೋಗ್ಯವಂತ ವಾತಾವರಣವನ್ನು ಬಿಟ್ಟು ಹೋಗುವುದಕ್ಕೆ ನಮ್ಮ ಕೈಗೆ ಅವಕಾಶ ಸಿಕ್ಕಿದ್ದು ಆದಷ್ಟು ಮುಂದಿನ ದಿನಗಳಲ್ಲಿ ಖರೀದಿ ಮಾಡುವಾಗ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡೋಣ.

Comments are closed.