Goddess lakshmi: ಮನೆಯಲ್ಲಿ ದೇವರಿಗೆ ಈ ಸಮಯದಲ್ಲಿ ದೀಪ ಹಚ್ಚಿದ್ರೆ ಲಕ್ಷ್ಮಿ ಎಲ್ಲಿದ್ರೂ ಓಡ್ಕೊಂಡು ನಿಮ್ಮ ಮನೆಗೆ ಬರ್ತಾಳೆ; ಅದೄಷ್ಟ ತರ್ಯಾಳೆ!

Goddess lakshmi: ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸ್ಥಳದ ಸಾಕಷ್ಟು ವರ್ಷಗಳಿಂದಲೂ ಕೂಡ ದೀಪ ಹೆಚ್ಚು ವಂತಹ ಪವಿತ್ರ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಯಾವ ಸಂದರ್ಭದಲ್ಲಿ ದೀಪ ಹಚ್ಚಬೇಕು ಎನ್ನುವಂತಹ ವಿಚಾರ ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಹಿಂದುಗಳು ಬೆಳಗ್ಗೆ ಹಾಗೂ ಸಂಜೆಯ ಸಂದರ್ಭದಲ್ಲಿ ದೇವರಿಗೆ ದೀಪವನ್ನು ಹಚ್ಚುತ್ತಾರೆ. ದೇವರಿಗೆ ಈ ರೀತಿ ದೀಪ ಹಚ್ಚುವುದರ ಮೂಲಕ ನಮ್ಮ ಜೀವನದಲ್ಲಿ ಬರುವಂತಹ ಅಂಧಕಾರವನ್ನು ದೇವರು ದೂರ ಮಾಡದೆಯಲಿ ಎನ್ನುವುದೇ ಅವರ ಆಸೆ ಆಗಿರುತ್ತದೆ. ಆದರೆ ಈ ರೀತಿ ದೀಪ ಹಚ್ಚುವ ಸಂದರ್ಭದಲ್ಲಿ ಯಾವಾಗ ದೀಪ ಹಚ್ಚಿದರೆ ಒಳ್ಳೆಯದು ಅನ್ನುವ ವಿಚಾರದ ಬಗ್ಗೆ ಕೂಡ ಪ್ರತಿಯೊಬ್ಬರೂ ಜ್ಞಾನವನ್ನು ಹೊಂದಿರುವುದು ಅವಶ್ಯಕ.

ದೇವರಿಗೆ ದೀಪ ಹಚ್ಚಲು ಸರಿಯಾದ ಸಮಯ

  1. ಸಾಮಾನ್ಯವಾಗಿ ಜನರು ಸಂಜೆ ಅಂದ್ರೆ ಕತ್ತಲಾಗಿರುವ ಸಂದರ್ಭದಲ್ಲಿ ದೀಪವನ್ನು ಹಚ್ಚುವುದನ್ನು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಅಂದುಕೊಂಡ ಹಾಗೆ ಕತ್ತಲೆ ಅಂದಮೇಲೆ ರಾತ್ರಿ ಕೂಡ ದೀಪ ಹಚ್ಚಿದರೆ ಒಳ್ಳೆಯದು ಎಂಬುದಾಗಿ ಭಾವಿಸಿರುತ್ತಾರೆ ಆದರೆ ನಿಜಕ್ಕೂ ಹೇಳೋದಾದರೆ ರಾತ್ರಿಗಿಂತ ಹೆಚ್ಚಾಗಿ ಮುಸ್ಸಂಜೆ ಅಂದ್ರೆ ಸೂರ್ಯ ಮುಳುಗುತ್ತಿರುವ ಸಮಯದಲ್ಲಿ ದೀಪವನ್ನು ಹಚ್ಚೋದು ಒಳ್ಳೆಯದೇ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸೂರ್ಯ ಮುಳುಗಿರಬಾರದು ಬದಲಾಗಿ ಸೂರ್ಯ ಮುಳುಗುವ ಸ್ಥಳದಲ್ಲಿ ಇರಬೇಕು.
  2. ಪೂಜೆಯಲ್ಲಿ ಸಾತ್ವಿಕ ಪೂಜೆ ಹಾಗೂ ತಾಂತ್ರಿಕ ಪೂಜೆ ಎನ್ನುವಂತಹ ಎರಡು ವಿಧಾನಗಳಿರುತ್ತವೆ. ಸಾತ್ವಿಕ ಪೂಜೆಯನ್ನು ಸಾಮಾನ್ಯ ಜನರು ಮಾಡಬಹುದಾಗಿದೆ ಹಾಗೂ ತಂತ್ರ ಹಾಗೂ ಮಂತ್ರಗಳನ್ನು ಉಪಯೋಗಿಸಿಕೊಂಡು ಮಾಡುವಂತಹ ಪೂಜೆ ತಾಂತ್ರಿಕ ಪೂಜೆ ಆಗಿರುತ್ತದೆ. ಸಾತ್ವಿಕ ಪೂಜೆಯನ್ನು ಬೆಳಗಿನ ಸಮಯದಲ್ಲಿ ಅಂದ್ರೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕಾಗಿರುತ್ತದೆ ಹಾಗೂ ತಾಂತ್ರಿಕ ಪೂಜೆಯನ್ನು ಸಂಜೆಯ ಸಂದರ್ಭದಲ್ಲಿ ಮಾಡಬೇಕಾಗಿರುತ್ತದೆ‌.
  3. ಬೆಳಗಿನ ಸಂದರ್ಭದಲ್ಲಿ ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಿ ಇಡಬೇಕು ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಅಂದರೆ ಸಂಜೆ ದೇವರಿಗೆ ಆರತಿಯನ್ನು ಬೆಳಗಿದ ನಂತರ ದೀಪವನ್ನು ಹಚ್ಚಬೇಕು. ಯಾವತ್ತೂ ರಾತ್ರಿ ದೀಪವನ್ನು ಬೆಳಗಿಸಬಾರದು. ಈ ಸಮಯದಲ್ಲಿ ದೀಪ ಹಚ್ಬಾರ್ದು

ಸೂರ್ಯಾಸ್ತದ ನಂತರ ಅಂದರೆ ರಾತ್ರಿಯ ಸಂದರ್ಭದಲ್ಲಿ ದೇವರಿಗೆ ದೀಪ ಹಚ್ಚೋದು ಉತ್ತಮ ಫಲವನ್ನು ನಿಮಗೆ ತಂದು ಕೊಡೋದಿಲ್ಲ. ಇದರ ಜೊತೆಗೆ ಸ್ನಾನ ಮಾಡಿದ ದೀಪವನ್ನು ಹಚ್ಚಬಾರದು ಹಾಗೂ ಸೂತಕದ ಮನೆಯಲ್ಲಿ ಕೂಡ ದೀಪವನ್ನು ಹಚ್ಚೋದು ಅಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಸರಿಯಾದ ದಿಕ್ಕಿನಲ್ಲಿ ದೇವರಿಗೆ ದೀಪ ಹಚ್ಚಿದರೆ ಮಾತ್ರ ಅದರ ಪುಣ್ಯಫಲವನ್ನು ನೀವು ಪಡೆದುಕೊಳ್ಳಬಹುದು. ಹೀಗಾಗಿ ನೀವು ಈ ಎಲ್ಲಾ ಕ್ರಮಗಳನ್ನು ದೀಪ ಹಚ್ಚುವ ಸಂದರ್ಭದಲ್ಲಿ ಪಾಲಿಸಿದ್ರೆ ಮಾತ್ರ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದಾಗಿದೆ.

Comments are closed.