PM Maandhan: ಗುಡ್ ನ್ಯೂಸ್; ರೈತರ ಖಾತೆಗೆ ಬರಲಿದೆ ವರ್ಷಕ್ಕೆ 36,000ರೂ; ನಿಮ್ಮ ಕೆಸರನ್ನು ಇಂದೇ ನೋಂದಾಯಿಸಿಕೊಳ್ಳಿ!

PM Maandhan: ರೈತರಿಗಾಗಿ ಪ್ರಧಾನ ಮಂತ್ರಿಗಳಾಗಿರುವಂತಹ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿವೆ. ಅವುಗಳಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ಹೊಸದಾಗಿ ರೈತರಿಗೆ ಜಾರಿಗೆ ತಂದಿರುವಂತಹ ಮನ್ ಧನ್ ಯೋಜನೆಯ ಬಗ್ಗೆ ತಿಳಿಸಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಮನ್ ಧನ್ ಯೋಜನೆ

ರೈತರು ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಅಡಿಯಲ್ಲಿ ರೈತರು ಹಣವನ್ನು ಹೂಡಿಕೆ ಮಾಡಿದಲ್ಲಿ ಅವರ ವಯಸ್ಸಾದ ಸಂದರ್ಭದಲ್ಲಿ ಆ ಹಣವನ್ನು ಅವರು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ನೀವು ಲಾಭವನ್ನು ಪಡೆದುಕೊಳ್ಳಲು ಮೊದಲಿಗೆ ಯೋಜನೆಯಡಿಯಲ್ಲಿ ನಿಮ್ಮನ್ನು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕಾಗಿರುತ್ತದೆ. ಇನ್ನು ನಿಮ್ಮ ಹೂಡಿಕೆಯ ಹಣದ ಮೊತ್ತ ನಿಮ್ಮ ವಯಸ್ಸಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ.

ಮನ್ ಧನ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ರೈತರ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕು. 18ನೇ ವಯಸ್ಸಿನಲ್ಲಿ ನೀವು ಹೂಡಿಕೆಯನ್ನು ಪ್ರಾರಂಭ ಮಾಡಿದರೆ ಪ್ರತಿ ತಿಂಗಳಿಗೆ ನೀವು 55 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. 30ನೇ ವಯಸ್ಸಿಗೆ ಹೂಡಿಕೆ ಪ್ರಾರಂಭ ಮಾಡಲು ನಿಮಗೆ ಪ್ರತಿ ತಿಂಗಳು 110ಗಳನ್ನು ಕಟ್ಟಬೇಕಾಗುತ್ತದೆ. 40ನೇ ವಯಸ್ಸಿನಲ್ಲಿ ನೀವು ಒಂದು ವೇಳೆ ಹಣವನ್ನು ಹೂಡಿಕೆ ಮಾಡಲು ಪ್ರಾರಂಭ ಮಾಡಿದರೆ ಪ್ರತಿ ತಿಂಗಳು 220 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಮನ್ ಧನ್ ಯೋಜನೆ ಅಡಿಯಲ್ಲಿ ನೀವು ಹಣವನ್ನು ಪಿಂಚಣಿ ರೂಪದಲ್ಲಿ ಪಡೆದುಕೊಳ್ಳುವುದಕ್ಕೆ ಪ್ರಾರಂಭ ಆಗಬೇಕು ಅಂದ್ರೆ ನಿಮಗೆ 60 ವರ್ಷ ಆಗಿರಬೇಕು. 60 ವರ್ಷದ ನಂತರ ನಿಮಗೆ ನೀವು ಕಟ್ಟಿರುವಂತಹ ಹಣಕ್ಕೆ ಸರಿಯಾಗಿ ಪೆನ್ಷನ್ ಹಣ ಸಿಗುತ್ತಾ ಹೋಗುತ್ತದೆ.

ರೈತರ ಅಕೌಂಟ್ಗೆ ಎಷ್ಟು ಹಣ ಬರುತ್ತೆ ಗೊತ್ತಾ?

ಮನ್ ಧನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು 3000 ರೂಪಾಯಿ ಗಳಂತೆ ವರ್ಷಕ್ಕೆ 36,000ಗಳ ಪೆನ್ಷನ್ ಹಣವನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ವರ್ಷಕ್ಕೆ 660ಗಳಿಂದ ಪ್ರಾರಂಭಿಸಿ 2400 ವರೆಗೂ ಕೂಡ ಹಣವನ್ನು ಯೋಜನೆಗೆ ಹೂಡಿಕೆ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ. ನಿಮ್ಮ 60ನೇ ವಯಸ್ಸಿನವರೆಗೂ ಕೂಡ ನಿಮ್ಮ ಖಾತೆಯಿಂದ ಪ್ರತಿ ತಿಂಗಳು ಹಣವನ್ನು ಕಡಿತಗೊಳಿಸಲಾಗುತ್ತದೆ ನಂತರ ಹಣವನ್ನು ಕಡಿತಗೊಳಿಸುವುದನ್ನು ನಿಲ್ಲಿಸಲಾಗುತ್ತದೆ ಹಾಗೂ ನಿಮ್ಮ ಖಾತೆಗೆ ಪಿಂಚಣಿ ಹಣವನ್ನು ವರ್ಗಾಯಿಸುವುದಕ್ಕೆ ಪ್ರಾರಂಭಿಸಲಾಗುತ್ತದೆ. ವೃದ್ಧಾಪ್ಯದ ಸಂದರ್ಭದಲ್ಲಿ ರೈತರು ಆರ್ಥಿಕ ಸಹಾಯಕ್ಕಾಗಿ ಬೇರೆಯವರಿಗೆ ಅವಲಂಬಿತರಾಗಿರುವುದನ್ನು ತಪ್ಪಿಸುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಮಾಸಿಕವಾಗಿ ಬರುವಂತಹ ಈ ಪಿಂಚಣಿ ವ್ಯವಸ್ಥೆಯಿಂದ ಅವರು ತಮ್ಮ ಆರ್ಥಿಕ ಅಗತ್ಯತೆಗಳನ್ನು ತೀರಿಸಿಕೊಳ್ಳಬಹುದಾಗಿದೆ.

Comments are closed.