Ugadi 2024: ವರ್ಷ ಇಡೀ ಮನೆಯಲ್ಲಿ ಸಂತೋಷ ಇರಬೇಕಾ? ಯುಗಾದಿ ದಿನ ಈ ರೀತಿ ಮಾಡಿ.

Ugadi 2024: ನಮಸ್ಕಾರ ಹಿಂದೂ ಧರ್ಮ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಈ ಬಾರಿಯ ಯುಗಾದಿ ಹಬ್ಬ ಏಪ್ರಿಲ್ 9 ನೇ ತಾರೀಖಿನಂದು ಬಂದಿದೆ. ಈ ಸಂದರ್ಭದಲ್ಲಿ ಸಾಕಷ್ಟು ಆಚರಣೆಗಳನ್ನು ನಾವು ಆಚರಿಸಲಿದ್ದು ಇದು ವೈಜ್ಞಾನಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕೂಡ ನ್ಯಾಯ ಸಮತವಾಗಿದ್ದು ಇದನ್ನು ಆಚರಿಸುವುದರ ಮೂಲಕ ನಮ್ಮ ಜೀವನದಲ್ಲಿ ಸಾಕಷ್ಟು ಸಮೃದ್ಧಿ ಹಾಗೂ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಈ ದಿನದಂದು ನೀವು ಕೆಲವೊಂದು ಕ್ರಮಗಳನ್ನು ಕೈ ತೆಗೆದುಕೊಂಡರೆ ಅದು ನಿಮ್ಮ ಜೀವನದಲ್ಲಿ ಸಕಾರಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಯುಗಾದಿ ಹಬ್ಬದ ದಿನ ಶುಭ ಭಾಗ್ಯಕ್ಕಾಗಿ ಈ ರೀತಿ ಮಾಡಿ

  1. ಹಿಂದೂ ವರ್ಷದ ಮೊದಲನೇ ದಿನ ಆಗಿರುವಂತಹ ಯುಗಾದಿ ಹಬ್ಬದ ದಿನದಂದು ನೀವು ನಿಮ್ಮ ಮನೆಯ ಮುಖ್ಯದ್ವಾರಕ್ಕೆ ತಳಿರು ತೋರಣವನ್ನು ಕಟ್ಟುವುದರಿಂದಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ ಹಾಗೂ ಮನೆಯಲ್ಲಿ ಹೊಸತನ ಮೂಡಿಬರುತ್ತದೆ.
  2. ಯುಗಾದಿ ಹಬ್ಬದ ದಿನದಂದೆ ನವರಾತ್ರಿಯ ಮೊದಲ ದಿನ ಕೂಡ ಪ್ರಾರಂಭ ಆಗುವುದರಿಂದ ಘನ ಸಂಪತ್ತು ಹಾಗೂ ಸಮೃದ್ಧಿಯ ದೇವತೆ ಆಗಿರುವಂತಹ ಲಕ್ಷ್ಮಿ ಮಾತೆಯನ್ನು ಬೆಳಗ್ಗೆ ಎದ್ದು ಶುಚಿಯಾಗಿ ಬಂದು ಸರಿಯಾದ ಕ್ರಮಬದ್ಧ ರೀತಿಯಲ್ಲಿ ಪೂಜೆ ಮಾಡಿ. ಈ ರೀತಿ ಮಾಡುವುದರಿಂದಾಗಿ ನಿಮ್ಮ ಮನೆಯಲ್ಲಿ ದನ ಕನಕ ಹಾಗೂ ಸಮೃದ್ಧಿ ಶಾಂತಿ ನೆಮ್ಮದಿ ಅನ್ನುವುದು ಲಕ್ಷ್ಮಿ ಮಾತೆಯ ಕೃಪಾಕಟಾಕ್ಷ ದಿಂದಾಗಿ ಸಮೃದ್ಧವಾಗಿ ನೆಲೆಸಿರುತ್ತದೆ.
  3. ಯುಗಾದಿ ಹಬ್ಬದ ದಿನದಂದು ತುಳಸಿ ಮಾತೆಯ ಪೂಜೆಯನ್ನು ಮಾಡುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ತುಳಸಿ ಮಾತೆಯ ತುಳಸಿ ಕಟ್ಟೆಗೆ ತುಪ್ಪದ ದೀಪವನ್ನು ಹಚ್ಚಿ ಹಾಗೂ ತುಳಸಿ ಮಂತ್ರವನ್ನು ಪಠಿಸಿ ಮೂರು ಪ್ರದಕ್ಷಿಣೆ ಹಾಕಿದ ನಂತರ ಆಕೆಗೆ ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ. ಆಕೆಯ ಆಶೀರ್ವಾದದಿಂದಾಗಿ ಮನೆಯಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳು ನಿವಾರಣೆ ಆಗುತ್ತದೆ. ತುಳಸಿ ಮಾತೆಯ ಎಲೆಗಳಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎನ್ನುವಂತ ಪ್ರತಿತಿ ಕೂಡ ಇದೆ.
  4. ಯುಗಾದಿ ಹಬ್ಬದ ಸಂದರ್ಭದಲ್ಲಿ ಸೂರ್ಯ ಮುಳುಗಿದ ನಂತರ ಮನೆಯ ಮುಖ್ಯದ್ವಾರದ ಇಬ್ಬದಿಗಳಲ್ಲಿ, ದೇವಸ್ಥಾನದ ಕೋಣೆಯಲ್ಲಿ, ಪೂಜೆ ಮಾಡುವಂತಹ ಸ್ಥಳದಲ್ಲಿ ಹಾಗೂ ಬಾವಿಯ ಬಳಿ, ಮೆಟ್ಟಿಲುಗಳ ಮೇಲೆ ನೀವು ಶ್ರದ್ಧಾಭಕ್ತಿಯಿಂದ ದೀಪವನ್ನು ಹಚ್ಚ ಬೇಕಾಗಿರುತ್ತದೆ. ಇದರಿಂದಲೂ ಕೂಡ ನೀವು ಮುಕ್ಕೋಟಿ ದೇವರುಗಳ ಆಶೀರ್ವಾದವನ್ನು ಪಡೆದುಕೊಳ್ಳಲು ಸಾಧ್ಯವಿದೆ.
  5. ಹಬ್ಬದ ದಿನ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ವಿಶೇಷವಾಗಿ ಸನಾತನ ಹಿಂದೂ ಸಂಸ್ಕೃತಿಯನ್ನು ಪಾಲಿಸುವಂತಹ ಪ್ರತಿಯೊಬ್ಬರಿಗೂ ಕೂಡ ವಿಶೇಷ ದಿನವಾಗಿರುತ್ತದೆ. ಹೀಗಾಗಿ ನಿಮ್ಮ ಬಳಿ ಕೊಡುವ ಶಕ್ತಿ ಇದ್ರೆ ಬಡವರು ಹಾಗೂ ಆಶಕ್ತನಿಗೆ ಯುಗಾದಿ ಹಬ್ಬದ ದಿನದಂದು ಒಳ್ಳೆಯ ಬಟ್ಟೆ ಆಹಾರ ಹಾಗೂ ಆಹಾರ ಧಾನ್ಯಗಳನ್ನು ವಿತರಣೆ ಮಾಡುವಂತಹ ಕೆಲಸ ಮಾಡಿ. ಖಂಡಿತವಾಗಿ ಅದರ ಪುಣ್ಯ ಬಲ ಎನ್ನುವುದು ನಿಮಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.