Canara Bank:ಕೆನರಾ ಬ್ಯಾಂಕ್ ನಲ್ಲಿ ನಿಮ್ಮ ಖಾತೆ ಇದೆಯಾ. ಹಾಗಿದ್ರೆ ಇನ್ಮುಂದೆ ಆಸ್ಪತ್ರೆ ಬಿಲ್ ಕಟ್ಟೋದಕ್ಕೆ ಕಷ್ಟಪಡಬೇಡಿ!

Canara Bank: ಆರೋಗ್ಯವೇ ಮಹಾ ಭಾಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ಸತ್ಯವಾಗಿದೆ. ಆದರೆ ಒಂದು ವೇಳೆ ಆರೋಗ್ಯಕ್ಕೆ ಇಟ್ಟರೆ ಅದಕ್ಕೆ ಎಷ್ಟೆಲ್ಲಾ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಅನ್ನೋದು ಲೆಕ್ಕಕ್ಕೂ ಮೀರಿದ್ದು. ಇನ್ನು ಕೆನರಾ ಬ್ಯಾಂಕ್(Canara Bank) ನಲ್ಲಿ ಒಂದು ವೇಳೆ ನಿಮ್ಮ ಅಕೌಂಟ್ ಇದ್ದರೆ ಅದರಲ್ಲೂ ವಿಶೇಷವಾಗಿ ನೀವು ಮಹಿಳೆಯರಾಗಿದ್ರೆ ಇನ್ಮುಂದೆ ಆಸ್ಪತ್ರೆ ಬಿಲ್ಗಾಗಿ ತಲೆಕೆಡಿಸಿಕೊಳ್ಳುವುದು ಬೇಡ ಯಾಕೆಂದರೆ ಇಲ್ಲಿ ನಿಮಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಈ ಯೋಜನೆ ಹಾಗೂ ಸಾಲು ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಕೆನರಾ ಹೀಲ್ ಸಾಲ ಸೌಲಭ್ಯ

ಸಾಕಷ್ಟು ಬಾರಿ ಹೆಲ್ತ್ ಇನ್ಸೂರೆನ್ಸ್ ಇದ್ದರೂ ಕೂಡ ಆಸ್ಪತ್ರೆಯಿಂದ ಕಂಡುಬರುವಂತಹ ಬಿಲ್ ಅದಕ್ಕಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಈ ವಿಶೇಷವಾದ ಯೋಜನೆಯನ್ನು ಜಾರಿಗೆ ತರಲಾಗಿದ್ದು ಆಸ್ಪತ್ರೆ ಬಿಲ್ ಹೆಚ್ಚಾಗಿ ಬಂದರೆ ಅದನ್ನು ತೀರಿಸೋದಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ. ಈ ಮೂಲಕ ಯಾವುದೇ ರೀತಿಯಲ್ಲಿ ಚಿಂತೆ ಮಾಡದೆ ನೀವು ಆಸ್ಪತ್ರೆಯ ಬಿಲ್ ಅನ್ನು ಕಟ್ಟಬಹುದಾಗಿದೆ.

ಸಾಲದ ಬಡ್ಡಿ ಎಷ್ಟು?

ನೀವು ಈ ಯೋಜನೆ ಅಡಿಯಲ್ಲಿ ಕೆನರಾ ಬ್ಯಾಂಕ್ ನಿಂದ ಸಾಲವನ್ನು ಪಡೆದುಕೊಂಡರೆ ಅದರ ಮೇಲೆ ವಾರ್ಷಿಕವಾಗಿ ಕೇವಲ 11.55 ರಿಂದ 12.30 ಪ್ರತಿಶತ ಬಡ್ಡಿಯನ್ನು ಕಟ್ಟಿದರೆ ಸಾಕು. ಫಿಕ್ಸೆಡ್ ಬಡ್ಡಿಯಲ್ಲಿ 12.30 ಹಾಗೂ ಫ್ಲೋಟಿಂಗ್ ರೇಟ್ ನಲ್ಲಿ 11.55 ಪ್ರತಿಶತ ಆಗಿರುತ್ತದೆ.

ಕೆನರಾ ಬ್ಯಾಂಕಿನ ಇನ್ನಿತರ ಆಫರ್ ಗಳು

ಕೆನರಾ ಬ್ಯಾಂಕ್ ನಲ್ಲಿ ಒಂದು ವೇಳೆ ಮಹಿಳೆಯರು Angel saving account ಅನ್ನು ತೆರೆದರೆ ಇದರ ಮೇಲೆ ಮಹಿಳೆಯರಿಗೆ Pre Approved ಸಾಲ ಸುಲಭವಾಗಿ ದೊರೆಯುತ್ತದೆ. ಸಾಮಾನ್ಯ ಖಾತೆಯನ್ನು ಹೊಂದಿರುವಂತಹ ಮಹಿಳೆಯರು ಕೂಡ ಈ ಅಕೌಂಟಿಗೆ ಅಪ್ಗ್ರೇಡ್ ಮಾಡಿಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ಟರ್ಮ್ ಡೆಪಾಸಿಟ್ ಹಾಗೂ ಫಿಕ್ಸೆಡ್ ಡೆಪಾಸಿಟ್ ಆಧಾರದ ಮೇಲೆ ಕೂಡ ನೀವು ಕೆನರಾ ಬ್ಯಾಂಕ್ ನಲ್ಲಿ ಆನ್ಲೈನ್ ಮೂಲಕ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ನೀಡಲಾಗಿದೆ.

ಹೀಗಾಗಿ ಕೆನರಾ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುವಂತಹ ಮಹಿಳೆಯರು ಯಾವುದೇ ಕಾರಣಕ್ಕೂ ಕೂಡ ಲೆಕ್ಕಾಚಾರವನ್ನು ಮೀರಿ ಆಸ್ಪತ್ರೆ ಬಿಲ್ ಆಗಿದ್ದರೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಈ ಮೇಲೆ ತಿಳಿಸಿರುವ ಅಂತಹ ಮಾಹಿತಿಗಳ ಮೂಲಕ ನೀವು ಸರಿಯಾದ ಸಂದರ್ಭದಲ್ಲಿ ಕಡಿಮೆ ಬಡ್ಡಿಗೆ ಕೆನರಾ ಬ್ಯಾಂಕ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.