Government Scheme: ಈ ಲಿಸ್ಟಿನಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಂದೇ ಸಲ 4000 ಸಿಕ್ಕಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!

Government Scheme: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಯಜಮಾನಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರೂ.2000 ಮಾಸಾಶನ ನೀಡುವ ಮೂಲಕ ಅವರಿಗೆ ಹಾರ್ದಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಜಾರಿಗೆ ತಂದು ಈಗಾಗಲೇ ಕಳೆದು ಸಾಕಷ್ಟು ತಿಂಗಳುಗಳಿಂದ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಆದರೆ ಈ ಯೋಜನೆ ಪ್ರಾರಂಭ ಆದಾಗಿನಿಂದಲೂ ಕೂಡ ಕೆಲವೊಂದು ಮಹಿಳೆಯರಿಗೆ ಮಾತ್ರ ಹಣ ಸಿಕ್ಕಿದರೆ ಇನ್ನೂ ಕೆಲವು ಮಹಿಳೆಯರಿಗೆ ಇನ್ನೂ ಕೂಡ ನಮಗೆ ತಲುಪ ಬೇಕಾಗಿರುವಂತಹ ಹಣ ಸಿಕ್ಕಿಲ್ಲ ಎಂಬುದಾಗಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಪ್ರತಿ ಬಾರಿ ಹಣ ಸಿಗದೇ ಒದ್ದಾಡುತ್ತಿದ್ದಂತಹ ಮಹಿಳೆಯರು ಈ ಬಾರಿ ಮೇ ತಿಂಗಳು ಪ್ರಾರಂಭ ಆಗೋದಕ್ಕಿಂತ ಮುಂಚೇನೆ ಮೇ ತಿಂಗಳ ಹಣವನ್ನು ಕೂಡ ಪಡೆದುಕೊಂಡಿದ್ದಾರೆ ಎನ್ನುವಂತಹ ಮಾಹಿತಿಗಳು ಕೇಳಿ ಬರುತ್ತಿವೆ. 2023ನೇ ಆಗಸ್ಟ್ 30ನೇ ತಾರೀಕಿನಂದು ಹಣ ಮೊದಲ ಬಾರಿಗೆ ಈ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ನಂತರ ಪ್ರತಿ ತಿಂಗಳ 20ನೇ ತಾರೀಖಿನ ಒಳಗೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ಹಣವನ್ನು ಬಿಡುಗಡೆ ಮಾಡುವಂತಹ ನಿರ್ಧಾರವನ್ನು ಮಾಡಲಾಗಿತ್ತು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಈ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿರುವಂತಹ 1.20 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಮೀಸಲಾಗಿರಿಸಿದೆ.

ಈ ಯೋಜನೆ ಅಡಿಯಲ್ಲಿ ಇರುವಂತಹ ಕುಂದುಕೊರತೆಗಳನ್ನು ಈಗಾಗಲೇ ಡಿಸೆಂಬರ್ ನಲ್ಲಿ ನಡೆದಿರುವಂತಹ ಮೀಟಿಂಗ್ ಮೂಲಕ ಮುಖ್ಯಮಂತ್ರಿಗಳು ಬಗೆಹರಿಸುವಂತಹ ಪ್ರಯತ್ನವನ್ನು ಮಾಡಿದ್ದು ಗ್ರಾಮ ಪಂಚಾಯತ್ ಲೆವೆಲ್ ನಲ್ಲಿ ಕ್ಯಾಂಪ್ ಮೂಲಕ ಕೂಡ ಇದನ್ನು ತೀರ್ಮಾನಿಸುವಂತಹ ಕೆಲಸ ನಡೆದಿದೆ. ಇಲ್ಲಿ ಯಾವ ರೀತಿಯಲ್ಲಿ ಹಣ ಬರೋದಕ್ಕೆ ಸಮಸ್ಯೆ ಆದರೆ ಏನು ಮಾಡಬೇಕು ಅನ್ನೋದರ ಬಗ್ಗೆ ಮಹಿಳೆಯರಿಗೆ ಸರಿಯಾದ ಮಾಹಿತಿಯನ್ನು ನೀಡಲಾಗಿದೆ.

ಈ ಬಾರಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಬದಲಿಗೆ 4000 ಸಿಕ್ಕಿದೆ

ಏಪ್ರಿಲ್ ಮೊದಲ ವಾರದಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಎಲ್ಲರ ಖಾತೆಗೆ ವರ್ಗಾವಣೆ ಆಗಿತ್ತು ಆದರೆ ಈಗ ಮತ್ತೊಮ್ಮೆ ಏಪ್ರಿಲ್ 24ರಂದು 20000 ರೂಪಾಯಿ ಹಣ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ವರ್ಗಾವಣೆ ಆಗಿದೆ. ಇದು ಸಾಕಷ್ಟು ಜನರಿಗೆ ಗೊಂದಲದಲ್ಲಿ ಬೀಳುವಂತೆ ಮಾಡಿದೆ. ಮೇ ತಿಂಗಳಲ್ಲಿ ಜನರ ಖಾತೆಗೆ ಬರಬೇಕಾಗಿದ್ದ ಹಣ ಏಪ್ರಿಲ್ ಕೊನೆಯ ವಾರದಲ್ಲಿಯೇ ಅವರ ಖಾತೆಗೆ ಹೋಗಿರುವುದು ಸಾಕಷ್ಟು ಜನರಿಗೆ ಆಶ್ಚರ್ಯ ತಂದಿದೆ.

ಒಂದು ವೇಳೆ ನಿಮ್ಮ ಖಾತೆಗೆ ಕೂಡ ಹಣ ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿಯುವ ಆಸಕ್ತಿ ಇದ್ದರೆ ಮಾಹಿತಿ ಕಣಜ ಎನ್ನುವಂತಹ ವೆಬ್ಸೈಟ್ಗೆ ಅಧಿಕೃತವಾಗಿ ಭೇಟಿ ನೀಡುವ ಮೂಲಕ ನೀವು ಕೂಡ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.