Lakshmi Nivasa: ಲಕ್ಷ್ಮಿ ನಿವಾಸ ನಟಿ ಲಕ್ಷ್ಮಿ ನಿಜವಾದ ಹೆಸ್ರು ಏನು ಗೊತ್ತಾ? ಎಷ್ಟು ಫೇಮಸ್ ಸಿನಿಮಾದಲ್ಲಿ ನಟಿಸಿದ್ದಾರೆ ಅಂತ ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಿ!

Lakshmi Nivasa: ಇಂದಿನ ದಿನಗಳಲ್ಲಿ ಕೇವಲ ಸಿನಿಮಾ ನಟ ನಟಿಯರು ಮಾತ್ರವಲ್ಲದೆ ಧಾರವಾಹಿಯ ನಟ ನಟಿಯರು ಕೂಡ ಸಾಕಷ್ಟು ಜನಪ್ರಿಯವಾಗಿದ್ದಾರೆ. ಅದರಲ್ಲಿ ಇವತ್ತಿನ ಈ ಲೇಖನದ ಮೂಲಕ ಹೇಳೋದಿಕ್ಕೆ ಹೊರಟಿರೋದು ಜನಪ್ರಿಯ ಲಕ್ಷ್ಮಿ ನಿವಾಸ ಧಾರವಾಹಿಯ ಶ್ವೇತಾ ಅವರ ಬಗ್ಗೆ. ಜೀ ಕನ್ನಡದಲ್ಲಿ ಪ್ರಸಾರ ಕಾಣುವಂತಹ ಲಕ್ಷ್ಮಿ ನಿವಾಸ ಧಾರವಾಹಿ ಸಾಕಷ್ಟ್ ದೊಡ್ಡ ಮಟ್ಟದ ವೀಕ್ಷಕ ಬಳಗವನ್ನು ಹೊಂದಿದೆ. ಅದರಲ್ಲಿ ಹಿರಿಯ ನಟಿ ಆಗಿರುವಂತಹ ಶ್ವೇತಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ನಿಜ ಹೆಸರು ಲಕ್ಷ್ಮಿ ಆಗಿದ್ದರೂ ಕೂಡ ಸಿನಿಮಾ ರಂಗಕ್ಕೆ ಬಂದ ನಂತರ ಅವರು ಶ್ವೇತ ಎನ್ನುವುದಾಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಕನ್ನಡ ಚಿತ್ರರಂಗದ ಶ್ವೇತ ಆಗಿರುವ ಇವರು ತಮಿಳು ಚಿತ್ರರಂಗದಲ್ಲಿ ವಿನೋದಿನಿ ಎನ್ನುವಂತಹ ಹೆಸರಿನ ಮೂಲಕ ಜನಪ್ರಿಯರಾಗಿದ್ದಾರೆ. ಮನೆಯಲ್ಲಿ ಎಲ್ಲರೂ ಇವರನ್ನು ಪ್ರೀತಿಯಿಂದ ಮಿಂಟಾ ಎಂಬುದಾಗಿ ಕೂಡ ಕರೆಯುತ್ತಾರೆ ವಿಚಾರ ತಿಳಿದು ಬಂದಿದೆ. ತಮಿಳು ಚಿತ್ರರಂಗದಲ್ಲಿ ಬಾಲ ನಟಿಯಾಗಿ ಇವರು ಕಾಣಿಸಿಕೊಳ್ಳುತ್ತಾರೆ ನಂತರ ಇವರು ಕಾಣಿಸಿಕೊಂಡಿದ್ದೆ ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ. ಈ ಸಿನಿಮಾದ ಮೂಲಕ ಶ್ವೇತಾ ಆಗಿ ಎಸ್ ನಾರಾಯಣ್ ಅವರಿಂದ ಹೆಸರನ್ನು ಪಡೆದುಕೊಂಡು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಮೆಚ್ಚಿನ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿರೋದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳು ಆಗಿರುವ ಕೋಟಿಗೊಬ್ಬ, ಗಡಿಬಿಡಿ ಅಳಿಯ, ಲಕ್ಷ್ಮಿ ಮಹಾಲಕ್ಷ್ಮಿ ಮುಂತಾದ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಷ್ಣುವರ್ಧನ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಕೋಟಿಗೊಬ್ಬ ಸಿನಿಮಾದಲ್ಲಿ ಕೂಡ ಇವರು ಲಕ್ಕಿ ಆಗಿದ್ದ ಕಾರಣದಿಂದಾಗಿ ನಿರ್ಮಾಪಕ ಸೂರಪ್ಪ ಬಾಬು ನೀವೇ ಸಿನಿಮಾಗೆ ಕ್ಲಾಪ್ ಮಾಡಿ ಅಂದಿದ್ರಂತೆ. ಶ್ವೇತಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ 2009ರಲ್ಲಿ ತಮ್ಮ 31ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ತಮ್ಮ ಕೈಯಲ್ಲಿ ತಯಾರಿಸಿರುವಂತಹ ಹ್ಯಾಂಡ್ ಮೇಡ್ ಪ್ರಾಡಕ್ಟ್ ಗಳನ್ನ ನಿರ್ಮಾಣ ಮಾಡಬೇಕು ಅನ್ನೋದು ಶ್ವೇತಾ ಅವರ ಬಹುದಿನಗಳ ಕನಸಾಗಿದ್ದು ಸದ್ಯಕ್ಕೆ ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಕೂಡ ಒಂದು ಕಾಲದಲ್ಲಿ ಲಕ್ಕಿ ಹೀರೋಯಿನ್ ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಶ್ವೇತಾ ಅವರು ಇವತ್ತು ಪೋಷಕ ಪಾತ್ರದಲ್ಲಿ ಧಾರವಾಹಿಯಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನವನ್ನ ಗೆಲ್ಲುವುದಕ್ಕೆ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಇನ್ನಷ್ಟು ಹೆಚ್ಚಿನ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಶ್ವೇತಾ ಅವರು ನಟಿಸಲಿ ಎಂಬುದಾಗಿ ಹಾರೈಸೋಣ.

Comments are closed.