Kubera Yoga: ಕುಬೇರ ಯೋಗ; ಈ ಮೂರು ರಾಶಿಯವರಿಗೆ ತರಲಿದೆ ಅವಶ್ಯಕತೆಗೂ ಮೀರಿದ ಅದೃಷ್ಟ!

Kubera Yoga: ದೇವಗುರು ಆಗಿರುವಂತಹ ಬೃಹಸ್ಪತಿ ಆಗಾಗ ಸಮಯಕ್ಕೆ ಸರಿಯಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಕಾಲಿಡುತ್ತಾನೆ. ಇನ್ನು ಈಗ ಮೇ ತಿಂಗಳಿನಲ್ಲಿ ಮೇಷ ರಾಶಿಯಿಂದ ವೃಷಭ ರಾಶಿಗೆ ಕಾಲಿಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ಅತ್ಯಂತ ಅದೃಷ್ಟಕರ ಎನಿಸುವಂತಹ ಕುಬೇರ ರಾಜಯೋಗ ಕೂಡ ನಿರ್ಮಾಣವಾಗಿದೆ. ಇದು 12 ರಾಶಿಯವರ ಮೇಲೆ ಕೂಡ ಬೇರೆ ಬೇರೆಯ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಆದರೆ ವಿಶೇಷವಾಗಿ ಈ ಮೂರು ರಾಶಿಯವರಿಗೆ ಅಗತ್ಯಕ್ಕೂ ಮೀರಿದ ಅದೃಷ್ಟದ ಪರಿಣಾಮವನ್ನು ಬೀರುತ್ತಿದೆ. ಇದರಿಂದಾಗಿ ಸಾಕಷ್ಟು ಅದೃಷ್ಟವನ್ನು ಸಂಪಾದನೆ ಮಾಡಲಿರುವ ಆ ಮೂರು ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ(Taurus)

ವೃಷಭ ರಾಶಿಯವರು ತಾವು ಕೆಲಸ ಮಾಡುತ್ತಿರುವಂತಹ ಕಚೇರಿ ಅಥವಾ ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳವನ್ನು ಪಡೆದುಕೊಳ್ಳಲಿದ್ದಾರೆ. ಈ ಸಮಯದಲ್ಲಿ ಭೌತಿಕ ಸಂತೋಷಗಳನ್ನು ವೃಷಭ ರಾಶಿಯವರು ತಮ್ಮ ಜೀವನದಲ್ಲಿ ಹೆಚ್ಚಾಗಿ ಆನಂದಿಸಲಿದ್ದಾರೆ. ಸಿಗುವಂತಹ ಕೆಲಸ ಹಾಗೂ ವ್ಯಾಪಾರದಲ್ಲಿ ಕಂಡುಬರುವಂತಹ ಲಾಭದ ಹೆಚ್ಚಳದಿಂದಾಗಿ ವೃಷಭ ರಾಶಿಯವರು ತಮ್ಮ ಜೀವನದಲ್ಲಿ ಆರ್ಥಿಕ ಸಂಪತ್ತಿನ ಹೆಚ್ಚಳವನ್ನು ಗಣನೀಯವಾಗಿ ಕಾಣಲಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕೆಲವೊಂದು ಚಿಂತೆಗಳನ್ನು ವೃಷಭ ರಾಶಿಯವರು ಈ ಸಂದರ್ಭದಲ್ಲಿ ದೂರ ಮಾಡಿಕೊಂಡು ಪರಿಹಾರವನ್ನು ಕಾಣಲಿದ್ದಾರೆ. ಈ ಸಮಯದಲ್ಲಿ ನೀವು ಇಷ್ಟ ಪಟ್ಟಂತಹ ಜೀವನವನ್ನು ನಡೆಸುವುದಕ್ಕೆ ನಿಮ್ಮಿಂದ ಸಾಧ್ಯವಾಗಲಿದೆ.

ಕರ್ಕ ರಾಶಿ(Cancer)

ಮಕ್ಕಳಿಗಾಗಿ ಕರ್ಕ ರಾಶಿಯವರ ಜೀವನದಲ್ಲಿ ಸಂತೋಷ ಹೆಚ್ಚಾಗಿದ್ದ ಹಾಗೂ ಸಾಕಷ್ಟು ಗುಡ್ ನ್ಯೂಸ್ ಗಳನ್ನು ತಮ್ಮ ಜೀವನದಲ್ಲಿ ಕರ್ಕ ರಾಶಿಯವರು ಈ ಸಂದರ್ಭದಲ್ಲಿ ಕೇಳುವ ಸಾಧ್ಯತೆ ಹೆಚ್ಚಾಗಿದೆ. ಕುಬೇರ ಎನ್ನುವುದು ಕೇವಲ ಕರ್ಕರಾಶಿಯವರ ಜೀವನದ ಆರ್ಥಿಕ ಸಂತೋಷವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀವನದಲ್ಲಿ ಸಮೃದ್ಧಿಯನ್ನು ಕೂಡ ಇದು ಹೆಚ್ಚಿಸುತ್ತದೆ. ಲವ್ ಲೈಫ್ ಕೊನೆಗೂ ಕೂಡ ನಿಮ್ಮ ಮನೆಯವರಿಂದ ಒಪ್ಪಿಗೆ ಪಡೆದು ಮದುವೆಯಾಗುವ ಅವಕಾಶ ಕೂಡ ಒದಗಿ ಬರಲಿದೆ. ನೀವು ಮಾಡುವಂತಹ ಕೆಲಸಗಳಿಂದ ನಿಮ್ಮ ಮೇಲಾಧಿಕಾರಿಗಳು ನಿಮಗೆ ಮೆಚ್ಚುಗೆಯನ್ನು ಸೂಚಿಸಲಿದ್ದಾರೆ ಹಾಗೂ ಹೆಚ್ಚಿನ ಜವಾಬ್ದಾರಿಗಳನ್ನು ಕೂಡ ನಿಮಗೆ ನೀಡುವಂತಹ ಸಾಧ್ಯತೆ ಇರುತ್ತದೆ.

ಕನ್ಯಾ ರಾಶಿ(Virgo)

ಅನಿರೀಕ್ಷಿತವಾಗಿ ಧನಾಗಮನಾಗುವ ಸಾಧ್ಯತೆ ಕನ್ಯ ರಾಶಿಯವರ ಜೀವನದಲ್ಲಿ ಈ ಸಂದರ್ಭದಲ್ಲಿ ಇರಲಿದೆ. ಕಠಿಣ ಪರಿಶ್ರಮದ ಕಾರಣದಿಂದಾಗಿ ಕನ್ಯಾ ರಾಶಿಯವರು ತಾವು ಅಂದುಕೊಂಡಂತೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲಿದ್ದಾರೆ. ನೀವು ಮಾಡುವಂತಹ ಒಳ್ಳೆಯ ಕೆಲಸಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ ಹಾಗೂ ಕೆಲಸಗಳ ಕಾರಣದಿಂದಾಗಿ ವಿದೇಶ ಪ್ರಯಾಣ ಮಾಡುವಂತಹ ಸಾಧ್ಯತೆ ಕೂಡ ಈ ಸಂದರ್ಭದಲ್ಲಿ ಇರುತ್ತದೆ. ಆರ್ಥಿಕವಾಗಿ ನೀವು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಪ್ರತಿಯೊಂದು ಅವಕಾಶಗಳು ನೀವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಅಷ್ಟೇ.

Comments are closed.