Vastu Tips: ಗಂಡಸರೇ, ನಿಮ್ಮ ಹೆಂಡತಿಯ ತಾಳಿ ವಿಚಾರದಲ್ಲಿ ಈ ತಪ್ಪು ಮಾಡಿದ್ರೆ ಮನೆಯಲ್ಲಿ ತೊಂದ್ರೆ ಗ್ಯಾರಂಟಿ!

Vastu Tips: ಮಂಗಳಸೂತ್ರ ಅನ್ನೋದು ಮದುವೆ ಆಗಿರುವಂತಹ ಮಹಿಳೆಯರಿಗೆ ಅತ್ಯಂತ ಶುಭ ಸೂಚಕವಾಗಿರುವಂತಹ ವಸ್ತುವಾಗಿದೆ. ಇದನ್ನು ಹಾಕಿಕೊಂಡರೆ ಅವರಿಗೂ ಹಾಗೂ ಅವರ ಗಂಡನಿಗೆ ಇಬ್ಬರಿಗೂ ಕೂಡ ಒಳ್ಳೇದಾಗುತ್ತೆ ಅನ್ನೋದಾಗಿ ಶಾಸ್ತ್ರಗಳು ಹೇಳುತ್ತವೆ. ಅದೇ ರೀತಿಯಲ್ಲಿ ಅದನ್ನ ಕೇವಲ ಗಂಡ ಮರಣ ಹೊಂದಿದಾಗ ಮಾತ್ರ ತೆಗೆಯಲಾಗುತ್ತದೆ ಎಂಬುದಾಗಿ ಶಾಸ್ತ್ರ ಹೇಳುತ್ತೆ. ಮಂಗಳಸೂತ್ರದಲ್ಲಿ ಇರುವಂತಹ ಸಾಕಷ್ಟು ಪ್ರಯೋಜನಗಳ ಕಾರಣದಿಂದಾಗಿ ಅದನ್ನ ಧರಿಸಲಾಗುತ್ತದೆ ಹಾಗೂ ಕೆಲವೊಂದು ತಪ್ಪುಗಳನ್ನು ಮಾಡಿದರೆ ಆ ಪ್ರಯೋಜನಗಳನ್ನು ಪಡೆದುಕೊಳ್ಳಲಾಗುವುದಿಲ್ಲ.

ಮಂಗಳಸೂತ್ರ ಅಂದರೆ ಪವಿತ್ರವಾಗಿರುವ ದಾರ ಎಂಬುದಾಗಿ ಅರ್ಥವಾಗಿದ್ದು ಮದುವೆಯಾದ ಮಹಿಳೆಯರು ಇದನ್ನ ಧರಿಸುವುದರಿಂದಾಗಿ ಶುಭವಾಗುತ್ತದೆ ಎಂಬುದಾಗಿ ಶಾಸ್ತ್ರಗಳ ಪ್ರಕಾರ ಉಲ್ಲೇಖಿಸಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿರುವಂತಹ ಸ್ತ್ರೀಯರು ಇದನ್ನ ಧರಿಸಬೇಕಾಗಿರುತ್ತದೆ ಎಂಬುದು ಅರ್ಥವಾಗಿದೆ. ಇದರ ಧಾರಣೆಯಿಂದಾಗಿ ಮದುವೆ ಆಗಿರುವಂತಹ ಮಹಿಳೆಗೆ ಆಕೆಯ ಪತ್ನಿ ಧರ್ಮದ ನೆನಪು ಮಾಡುವಂತಹ ಕೆಲಸ ಇದರಿಂದ ನಡೆಯುತ್ತದೆ ಎಂಬುದಾಗಿ ತಿಳಿದು ಬರುತ್ತದೆ. ಇನ್ನು ಮದುವೆ ಆಗುವ ಸಮಯದಲ್ಲಿ ಮದುಮಗಳ ಮೇಲೆ ಪ್ರತಿಯೊಬ್ಬರ ಕಣ್ಣು ಇರುತ್ತದೆ ಹೀಗಾಗಿ ಆ ಕೆಟ್ಟ ದೃಷ್ಟಿಯಿಂದ ಆಕೆಯನ್ನು ರಕ್ಷಿಸಲು ಕರಿಮಣಿಯಲ್ಲಿ ಕಪ್ಪು ಮುತ್ತುಗಳನ್ನು ಇರಿಸಲಾಗುತ್ತದೆ. ಇದರಿಂದಾಗಿ ಕೇವಲ ಮದುಮಗಳ ಸಮಸ್ಯೆಗಳನ್ನು ಮಾತ್ರವಲ್ಲದೆ ಆಕೆಯ ಗಂಡನ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಲಾಗುತ್ತದೆ ಎಂಬುದಾಗಿ ನಂಬಿಕೆ ಇದೆ. ಮಂಗಳಸೂತ್ರದಲ್ಲಿ ಇರುವಂತಹ ಚಿನ್ನ ಹಾಗೂ ಕಪ್ಪು ವಸ್ತು ಗುರು ಹಾಗೂ ಶನಿಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಇವುಗಳು ಜೊತೆಗೂಡುವುದರಿಂದಾಗಿ ಮದುವೆಯಲ್ಲಿ ಅಂದರೆ ದಾಂಪತ್ಯ ಜೀವನದಲ್ಲಿ ಸಂತೋಷ ಹಾಗೂ ಸ್ಥಿರತೆ ಉಂಟಾಗುತ್ತದೆ ಎಂಬುದಾಗಿ ಅರ್ಥವಾಗಿದೆ.

ಗಂಡ ಹೆಂಡತಿಯ ಬಾಂಧವ್ಯವನ್ನು ಶಿವ ಪಾರ್ವತಿಯರಿಗೆ ಹೋಲಿಸಲಾಗುತ್ತದೆ ಹೀಗಾಗಿ ಮಂಗಳಸೂತ್ರವನ್ನು ಆಕೆ ಧರಿಸುವುದರಿಂದಾಗಿ ಇಬ್ಬರ ನಡುವಿನ ಸಾಮರಸ್ಯದ ಜೀವನ ಇನ್ನಷ್ಟು ಉತ್ತಮವಾಗಿರುತ್ತದೆ ಎಂಬುದಾಗಿದೆ. ಕರಿಮಣಿಯಲ್ಲಿರುವಂತಹ ಚಿನ್ನ ಪಾರ್ವತಿ ದೇವಿಯನ್ನು ಸಂಕೇತಿಸುತ್ತದೆ ಹಾಗೂ ಕಪ್ಪು ಮಣಿ ಶಿವನನ್ನು ಸಂಕೇತಿಸುತ್ತದೆ. ಕರಿಮಣಿ ಪಂಚಭೂತ ಶಕ್ತಿಗಳ ಅಂಶವನ್ನು ಹೊಂದಿರುತ್ತದೆ ಹಾಗೂ ದಂಪತಿಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಿಷ್ಠಗಳಿಸುವುದಕ್ಕೆ ಸಹಾಯಕವಾಗುತ್ತದೆ ಎಂಬುದಾಗಿ ನಂಬಲಾಗುತ್ತದೆ. ಇನ್ನು ಮಹಿಳೆ ಚಿನ್ನದ ತಾಳಿಯನ್ನು ಬಳಸಿಕೊಳ್ಳುವುದರಿಂದಾಗಿ ಅದು ಹೃದಯದ ಆರೋಗ್ಯವನ್ನು ಇಬ್ಬರಲ್ಲಿ ಕಾಪಾಡುವುದಕ್ಕೆ ಕೂಡ ವೈಜ್ಞಾನಿಕವಾಗಿ ಕೂಡ ಸಹಾಯಕವಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಮಹಿಳೆಯರಲ್ಲಿರುವಂತಹ ರಕ್ತದೊತ್ತಡವನ್ನು ಕಡಿಮೆ ಮಾಡುವುದಕ್ಕೆ ತಾಳಿ ಸಹಾಯಕವಾಗುತ್ತದೆ ಹಾಗೂ ನಮ್ಮ ಸುತ್ತಮುತ್ತ ಇರುವಂತಹ ನೆಗೆಟಿವ್ ಎನರ್ಜಿಗಳನ್ನು ದೂರ ಮಾಡುವುದಕ್ಕೆ ಕಪ್ಪುಮಣಿಗಳು ಸಹಾಯ ಮಾಡುತ್ತವೆ. ಮಹಿಳೆಯರಲ್ಲಿ ಪಾಸಿಟಿವ್ ಎನರ್ಜಿನ ಹೆಚ್ಚು ಮಾಡುವುದಕ್ಕೆ ಇದರ ಧಾರಣೆ ಅತ್ಯಂತ ಪ್ರಮುಖವಾಗಿದೆ. ಈ ರೀತಿಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀವು ಕರಿಮಣಿಯನ್ನು ಧರಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಕರಿಮಣಿಯಲ್ಲಿರುವಂತಹ ಈ ರೀತಿಯ ಸಾಕಷ್ಟು ಉಪಯೋಗಗಳು ಸತಿಪತಿಗಳಾಗಿ ನೀವು ಪಡೆದುಕೊಳ್ಳಬಹುದು. ಇದಕ್ಕೆ ಸಾಕಷ್ಟು ವೈಜ್ಞಾನಿಕ ಕಾರಣಗಳನ್ನು ಕೂಡ ನೀವು ಈ ಮೇಲೆ ಕಾಣಬಹುದಾಗಿದೆ.

Comments are closed.