Surya Rahu Conjunction: ಸೂರ್ಯ ಹಾಗೂ ರಾಹುವಿನ ಸಂಯೋಗದಿಂದಾಗಿ ಈ ಮೂರು ರಾಶಿಯವರ ಜೀವನದಲ್ಲಿ ದುಡ್ದಿನ ಮಳೆ ಆಗಲಿದೆ!

Surya Rahu Conjunction: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಸೂರ್ಯ ಹಾಗೂ ರಾಹುವಿನ ಸಂಯೋಗ ಉಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ. ಪ್ರತಿ ಬಾರಿ ಗ್ರಹಗಳ ನಡುವೆ ಸಂಯೋಗ ಉಂಟಾದಾಗ ಅದು ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇವತ್ತಿನ ಈ ಲೇಖನದಲ್ಲಿ ನಾವು ಈ ಸಂಯೋಗದಿಂದಾಗಿ ಅದೃಷ್ಟವನ್ನು ಸಂಪಾದನೆ ಮಾಡಲಿರುವಂತಹ ಆ ಮೂರು ಅದೃಷ್ಟವಂತ ರಾಶಿ ಅವರು ಯಾರು ಎನ್ನುವುದನ್ನು ನಿಮಗೆ ತಿಳಿಸುವುದಕ್ಕೆ ಹೊರಟಿದ್ದೇವೆ.

ಮೀನ ರಾಶಿ(Pisces)

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯವರಿಗೆ ಈ ಸಂದರ್ಭದಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಹಾಗೂ ಕಳೆದುಕೊಂಡಿರುವಂತಹ ಸಂಬಂಧಗಳು ಕೂಡ ಮತ್ತೆ ಮರಿಕಳಿಸಿ ಬರಲಿವೆ. ಆತ್ಮವಿಶ್ವಾಸ ಹೆಚ್ಚಾಗುವ ಕಾರಣದಿಂದಾಗಿ ಮೀನ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಗೆಲುವನ್ನು ಸಾಧಿಸಲಿದ್ದಾರೆ. ಉದ್ಯೋಗದಲ್ಲಿ ಸಿಗುವಂತಹ ಹೊಸ ಹೊಸ ಜವಾಬ್ದಾರಿಗಳಿಂದ ಇನ್ನಷ್ಟು ಉನ್ನತ ಸ್ಥಾನವನ್ನು ಸಂಪಾದನೆ ಮಾಡಬಹುದು. ಮದುವೆಯಾಗದೇ ಇರುವಂತಹ ಜನರಿಗೆ ಕಂಕಣ ಭಾಗ್ಯ ಕೂಡಿ ಬರುವಂತಹ ಸಾಧ್ಯತೆ ಹೆಚ್ಚಾಗಿದ್ದು ಈಗಾಗಲೇ ಮದುವೆ ಆಗಿರುವ ತಮ್ಮ ದಾಂಪತ್ಯ ಜೀವನದಲ್ಲಿ ಸುಖವನ್ನು ಅನುಭವಿಸಲಿದ್ದಾರೆ. ಕೆಲಸ ಹಾಗೂ ವ್ಯಾಪಾರದಲ್ಲಿ ಯಾವುದೇ ರೀತಿಯ ಅಡೆ-ತಡೆಗಳು ಉಂಟಾದರೂ ಕೂಡ ಮೀನ ರಾಶಿಯವರು ಅದನ್ನು ಮೀರಿ ಗೆಲುವನ್ನು ಸಂಪಾದನೆ ಮಾಡಲಿದ್ದಾರೆ.

ಕರ್ಕ ರಾಶಿ(Cancer)

ಕರ್ಕ ರಾಶಿಯವರು ಯಾವುದೇ ಕೆಲಸ ಮಾಡಲಿ ಅವರಿಗೆ ಅದೃಷ್ಟದ ಸಾತ್ ಸಿಗಲಿದೆ. ಸಾಕಷ್ಟು ಸಮಯಗಳ ನಂತರ ಕಾಕರಾಶಿಯವರ ಮನೆಯಲ್ಲಿ ಧಾರ್ಮಿಕ ಕೆಲಸಗಳು ನಡೆಯಲಿದ್ದು ಅದರಲ್ಲಿ ಅವರು ಕೂಡ ಭಾಗಿಯಾಗಲಿದ್ದಾರೆ. ಇನ್ನು ತಮ್ಮ ಕೆಲಸಗಳಲ್ಲಿ ಸಿಗುವಂತಹ ಗೆಲುವಿನಿಂದಾಗಿ ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಕರ್ಕ ರಾಶಿಯವರಿಗೆ ಪ್ರೇರೇಪಣೆ ಸಿಗಲಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಯಾಗುವಂತಹ ಕರ್ಕ ರಾಶಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲಿದ್ದಾರೆ. ದೇಶ ವಿದೇಶಗಳಿಂದ ಸಾಕಷ್ಟು ಅವಕಾಶಗಳು ಕರ್ಕ ರಾಶಿಯವರಿಗೆ ಜೀವನದಲ್ಲಿ ಇನ್ನಷ್ಟು ಉನ್ನತ ಹಂತಕ್ಕೆ ಹೋಗುವುದಕ್ಕೆ ಸಿಗಲಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಫಲವನ್ನು ಪಡೆದುಕೊಳ್ಳುವಂತಹ ಪ್ರಯತ್ನ ಪಡಬೇಕಾಗಿರೋದು ಮಾತ್ರ ಖುದ್ದಾಗಿ ಕರ್ಕ ರಾಶಿಯವರೇ.

ಮಿಥುನ ರಾಶಿ(Gemini)

ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಮಿಥುನ ರಾಶಿಯವರಿಗೆ ನಿರೀಕ್ಷಿತ ಫಲ ಸಿಗಲಿದೆ. ಕೆಲಸಕ್ಕಾಗಿ ಯಾರಾದರೂ ಹುಡುಕ್ತಾ ಇದ್ರೆ ಅವರು ಮನಸ್ಸಿಗೆ ಇಷ್ಟ ಆಗುವಂತಹ ಹಾಗೂ ಕೈತುಂಬ ಸಂಬಳ ಸಿಗುವಂತಹ ಕೆಲಸ ಸಿಗಲಿದೆ. ವ್ಯಾಪಾರ ಸೇರಿದಂತೆ ಬೇರೆ ಬೇರೆ ಆದಾಯದ ಮೂಲಗಳಿಂದ ಹಣ ಹರಿದು ಬರುವುದರಿಂದಾಗಿ ಆರ್ಥಿಕ ವಿಚಾರದ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಪ್ರತಿಯೊಂದು ವಿಚಾರದಲ್ಲಿ ಕೂಡ ನೀವು ಶಾಂತಿ ಹಾಗೂ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಅಗತ್ಯ ವಸ್ತುಗಳು ದೊರಕುತ್ತವೆ.

Comments are closed.