Government Scheme: ಮಹಿಳೆಯರಿಗೆ 3 ಲಕ್ಷ ರೂಪಾಯಿ ಕೊಡೋದಕ್ಕೆ ಸಿದ್ಧವಾದ ಕೇಂದ್ರ ಸರ್ಕಾರ; ಇಂದೇ ಅಪ್ಲೈ ಮಾಡಿ!

Government Scheme: ಎಂಪ್ಲಾಯಿ ಸ್ಕೀಮ್ ಅಡಿಯಲ್ಲಿ ಕೇಂದ್ರ ಸರ್ಕಾರ ಮಹಿಳಾ ವ್ಯಾಪಾರಿಗಳಿಗೆ ಮೂರು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಪ್ರಾರಂಭಿಸಿದೆ. ನೀವು ಒಂದು ಟೀ ಸ್ಟಾಲ್ ಹಾಕಿಕೊಂಡು ಕೂಡ ಇಲ್ಲಿ ಸಾಲವನ್ನ ಒಂದು ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಪಡೆದುಕೊಳ್ಳಬಹುದಾಗಿದೆ.

ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ರೂಪಾಯಿಗಳವರೆಗೆ ಸಾಲ!

ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸಿಗುತ್ತದೆ ಹಾಗೂ ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ 50 ಪರ್ಸೆಂಟ್ ರಿಯಾಯಿತಿ ದರದಲ್ಲಿ ಈ ಸಾಲ ದೊರಕಲಿದೆ. ಅಂದ್ರೆ ಈ ಮಹಿಳೆಯರು 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಂಡರೆ ಕೇವಲ 1.5 ಲಕ್ಷ ಕಟ್ಟಿದ್ರೆ ಸಾಕು. ಇನ್ನು ಈ ಯೋಜನೆಯ ಶರತ್ತುಗಳನ್ನು ತಿಳಿದುಕೊಳ್ಳೋಣ ಬನ್ನಿ.

ಈ ಸಲ ಯೋಜನೆಯ ಶರತ್ತುಗಳು!

ಪಟ್ಟಣದಲ್ಲಿ ವಾಸಿಸುವಂತಹ ಮಹಿಳೆಯರಿಗಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿರುವಂತಹ ಮಹಿಳೆಯರಿಗೆ ಈ ಸಾಲ ಯೋಜನೆ ಅಡಿಯಲ್ಲಿ ಹಣವನ್ನು ನೀಡುವುದಕ್ಕೆ ಸರ್ಕಾರ ಹೆಚ್ಚಾಗಿ ಆಸಕ್ತಿಯನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರು ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ತಮ್ಮ ವ್ಯಾಪಾರಕ್ಕೆ ಇದನ್ನು ಬಳಸಿಕೊಂಡ ನಂತರ ನಿಗದಿತ ಅವಧಿಯ ಒಳಗೆ ಮರುಪಾವತಿ ಮಾಡಿದ್ರೆ ಆಯ್ತು.

ಈ ಯೋಜನೆಯ ಮೂಲಕ ಕೇವಲ ಗ್ರಾಮೀಣ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಹಿಳೆಯರು ಬಡ್ಡಿ ರಹಿತ ಸಾಲವನ್ನು ತಮ್ಮ ಉದ್ಯಮಗಳಿಗಾಗಿ ಬಳಸಿಕೊಳ್ಳುವುದು ಮಾತ್ರವಲ್ಲದೆ ಅದರ ಬಗ್ಗೆ ತರಬೇತಿಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಸಾಲಕ್ಕೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲಾಗುವುದಿಲ್ಲ ಹಾಗೂ ಗ್ಯಾರಂಟಿಯನ್ನು ಕೂಡ ನೀಡಬೇಕಾದ ಅಗತ್ಯ ಇರುವುದಿಲ್ಲ.

ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು!

ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಆಗಿರಬೇಕು. ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಹಾಗೂ ಅಂಗವಿಕಲರಾಗಿರುವ ಮಹಿಳೆಯರಿಗೆ ಈ ಮಿತಿಯ ನಿಯಮ ಇರೋದಿಲ್ಲ. 18 ರಿಂದ 55 ವರ್ಷಗಳ ನಡುವಿನ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಪ್ರಮುಖ ಆದ್ಯತೆಯನ್ನು ನೀಡಲಾಗುತ್ತದೆ. ಸಾಲವನ್ನು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳುವಂತಹ ಮಹಿಳೆಯರು ಸರಿಯಾದ ಸಮಯದಲ್ಲಿ ಹಣವನ್ನು ಮರುಪಾವತಿ ಮಾಡಬೇಕಾಗಿರುತ್ತದೆ.

ಸಾಲ ಪಡೆಯಲು ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು!

ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ಮಹಿಳೆಯರಿಗೆ ಪಾಸ್ಪೋರ್ಟ್ ಸಹಿಸ್ ಫೋಟೋ ಹಾಗೂ ಆಧಾರ್ ಕಾರ್ಡ್ ಬೇಕಾಗಿರುತ್ತದೆ.
ಇನ್ಕಮ್ ಸರ್ಟಿಫಿಕೇಟ್ ಜನ್ಮ ಪ್ರಮಾಣ ಪತ್ರ ಹಾಗೂ ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಬೇಕಾಗಿರುತ್ತದೆ. ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಡಿಟೈಲ್ಸ್ ಜೊತೆಗೆ ಬ್ಯಾಂಕಿನವರು ಸಾಲಕ್ಕಾಗಿ ಕೇಳುವಂತಹ ಕೆಲವೊಂದು ಪ್ರಮುಖ ದಾಖಲೆಗಳನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಬೇಕಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ.

ಹತ್ತಿರದ ಬ್ಯಾಂಕಿಗೆ ಹೋಗಿ ಈ ಯೋಜನೆ ಅಡಿಯಲ್ಲಿ ಸಾಲ ಬೇಕು ಎನ್ನುವುದಾಗಿ ಅಲ್ಲಿನ ಲೋನ್ ಅಧಿಕಾರಿಗಳ ಬಳಿ ಕೇಳಬೇಕು. ಅವರು ನಿಮಗೆ ಈ ಯೋಜನೆಗೆ ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ತರಲು ಹೇಳುತ್ತಾರೆ. ಫಾರ್ಮ್ ಅನ್ನು ತುಂಬಿ ಅಲ್ಲಿ ಕೇಳಿದಾಗುವಂತಹ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ನಮೂದಿಸಬೇಕು. ನಿಮ್ಮ ಎಲ್ಲಾ ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ಚೆಕ್ ಮಾಡಿ ನಂತರ ಈ ಯೋಜನೆ ಅಡಿಯಲ್ಲಿ ನಿಮಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ ಹಾಗೂ ಹಣವನ್ನು ನಿಮ್ಮ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

Comments are closed.