ATM Money: ATM ಮಷಿನ್ ನಿಂದ ಹಣ ಹಿಂಪಡೆಯುವವರಿಗೆ ಗುಡ್ ನ್ಯೂಸ್ ಕೊಟ್ಟ ರಿಸರ್ವ್ ಬ್ಯಾಂಕ್; ನಿಮಗೂ ಅಪ್ಲೈ ಆಗತ್ತೆ ನೋಡಿ!

ATM Money: ನಮ್ಮ ಊರುಗಳಲ್ಲಿ ನೀವು ನೋಡಿರಬಹುದು ಹಣ ತೆಗೆಯೋದಕ್ಕೆ ಮೀಟಿಯ ಮಿಷನ್ ಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿವೆ. ಇದರಿಂದಾಗಿ ಜನರು ಹಣ ತೆಗೆದುಕೊಳ್ಳುವುದಕ್ಕೆ ಬ್ಯಾಂಕಿಗೆ ಹೋಗಿ ಪರದಾಡಬೇಕಾದಂತಹ ಪರಿಸ್ಥಿತಿ ಕೂಡ ಕಡಿಮೆಯಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಕೆಲವೊಮ್ಮೆ ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುವಾಗ ಅಲ್ಲಿ ಹರಿದು ನೋಟುಗಳು ಬಂದ್ರೆ ಆ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋದಾಗಿ ಸಾಕಷ್ಟು ಜನರಿಗೆ ಗೊಂದಲ ಇರುತ್ತದೆ ಹಾಗೂ ಬೇಸರ ಕೂಡ ಇರುತ್ತದೆ. ಯಾಕೆಂದ್ರೆ ಹರಿದು ನೋಟುಗಳನ್ನು ಅಂಗಡಿಯವರು ತೆಗೆದುಕೊಳ್ಳುವುದಕ್ಕೆ ಹೋಗೋದಿಲ್ಲ ಹಾಗೂ ಸಾಕಷ್ಟು ಸಮಯಗಳಲ್ಲಿ ಬ್ಯಾಂಕಿನವರು ಕೂಡ ತೆಗೆದುಕೊಳ್ಳುವುದಕ್ಕೆ ಹೋಗೋದಿಲ್ಲ ಅನ್ನೋ ಅಳುಕು ಇರುತ್ತದೆ. ಇನ್ಮುಂದೆ ಆ ರೀತಿ ಹಿಂಜರಿಯಬೇಕಾದ ಅಗತ್ಯವಿಲ್ಲ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಿಚಾರದ ಬಗ್ಗೆ ಒಂದು ನಿಯಮವನ್ನ ಜಾರಿಗೆ ತಂದಿದೆ.

ಎಟಿಎಂನಿಂದ ಹರಿದ ನೋಟುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತಂದಿದೆ ನೋಡಿ ಹೊಸ ನಿಯಮ!

ಇನ್ಮುಂದೆ ನೀವು ಹರಿದ ನೋಟುಗಳನ್ನು ಎಟಿಎಂನಿಂದ ಪಡೆದುಕೊಂಡರೆ ಅದನ್ನ ಬದಲಾಯಿಸುವುದು ಹೆಚ್ಚು ಕಷ್ಟಕರವಾಗಿಲ್ಲ ಹಾಗೂ ಸುಲಭವಾಗಿದ್ದು ಹೆಚ್ಚು ಸಮಯವನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಹತ್ತಿರದ ಬ್ಯಾಂಕಿಗೆ ಹೋಗಿ ಫಾರ್ಮ್ ಅನ್ನು ತುಂಬಿ ಅಲ್ಲಿ ಯಾವಾಗ ಹಾಗೂ ಎಲ್ಲಿ ಇದನ್ನ ಟ್ರಾನ್ಸಾಕ್ಷನ್ ಮಾಡಿದ್ರಿ ಅನ್ನೋದನ್ನ ವಿವರ ನೀಡಬೇಕಾಗಿರುತ್ತದೆ. ಇದಾದ ನಂತರ ಎಟಿಎಂನಿಂದ ಟ್ರಾನ್ಸಾಕ್ಷನ್ ಮಾಡಿರುವಂತಹ ರಿಸಿಟ್ ಅನ್ನು ಕೂಡ ನೀಡಬೇಕಾಗಿರುತ್ತೆ. ಒಂದು ವೇಳೆ ಅದು ಇಲ್ಲದೆ ಹೋದಲ್ಲಿ ಮೊಬೈಲ್ ನಲ್ಲಿ ಬಂದಿರುವ ನೋಟಿಫಿಕೇಶನ್ ಮೆಸೇಜ್ ಅನ್ನು ತೋರಿಸಬೇಕು. ಇದನ್ನು ಖುದ್ದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾಹೀರಾತುಗಳ ಮೂಲಕ ಕೂಡ ಎಲ್ಲಾ ಕಡೆ ಹರಡುತ್ತಿದೆ.

ಯಾವ ರೀತಿ ನೋಟುಗಳು ಎಕ್ಸ್ಚೇಂಜ್ ಮಾಡಬಹುದು?

ಸರ್ಕಾರಿ ಹಾಗೂ ಖಾಸಗಿ ಸೆಕ್ಟರ್ ನಲ್ಲಿ ಇರುವಂತಹ ಪ್ರತಿಯೊಂದು ಬ್ಯಾಂಕುಗಳಲ್ಲಿ ಕೂಡ ಈ ರೀತಿಯ ಎಟಿಎಂ ನಿಂದ ಟ್ರಾನ್ಸಾಕ್ಷನ್ ಮಾಡಲಾಗಿರುವಂತಹ ಹಣ ಹರಿದುಹೋದರೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಖುದ್ದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ ಪ್ರಮುಖವಾಗಿ ನೀವು ತಿಳಿದುಕೊಳ್ಳಬೇಕಾಗಿರುವ ವಿಚಾರ ಅಂದ್ರೆ ರೂ.10ಗಳಿಗಿಂತ ಹೆಚ್ಚು ಫೇಸ್ ವ್ಯಾಲ್ಯೂ ಹೊಂದಿರುವಂತಹ ನೋಟುಗಳನ್ನು ಮಾತ್ರ ನೀವು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಒಬ್ಬ ವ್ಯಕ್ತಿ ಹೆಚ್ಚೆಂದರೆ 20 ನೋಟುಗಳು ಅಂದ್ರೆ ಹೆಚ್ಚೆಂದರೆ 5000 ವರೆಗಿನ ಬದಲಾವಣೆಯನ್ನು ಒಂದು ದಿನಕ್ಕೆ ಮಾಡಬಹುದಾಗಿದೆ. ಸಂಪೂರ್ಣವಾಗಿ ಚಿದ್ರವಾಗಿರುವ ಅಥವಾ ಸು-ಟ್ಟು ಹೋಗಿರುವಂತಹ ನೋಟುಗಳನ್ನು ನೀವು ಬ್ಯಾಂಕಿನಲ್ಲಿ ಬದಲಾವಣೆ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ. ಒಂದು ವೇಳೆ ಎಟಿಎಂನಿಂದ ಹಣವನ್ನು ತೆಗೆದು ಅದು ಹರಿದು ಹೋಗಿದ್ದರೆ ಅದನ್ನ ಯಾವುದೇ ಬ್ಯಾಂಕುಗಳು ಬದಲಾವಣೆ ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳದೆ ಹೋದಲ್ಲಿ ಆ ಬ್ಯಾಂಕುಗಳ ವಿರುದ್ಧ ನೇರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ಕಚೇರಿಗೆ ಹೋಗಿ ದೂರನ್ನು ಸಲ್ಲಿಸಬಹುದಾಗಿದೆ.

Comments are closed.