Chanakya Niti: ಬೆಳಗ್ಗೆ ಎದ್ದು ಈ ಕೆಲ್ಸ ಮಾಡಿದ್ರೆ ಜೀವನದಲ್ಲಿ ಎಂಥಾ ಬದಲಾವಣೆ ಆಗತ್ತೆ ಗೊತ್ತಾ?

Chanakya Niti: ಈ ಕಾಲದಲ್ಲಿ ಯಶಸ್ಸು ಅನ್ನೋದು ಎಷ್ಟರಮಟ್ಟಿಗೆ ಪ್ರಮುಖವಾಗಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ ಯಾಕೆಂದರೆ ಜನರ ನಡುವೆ ಸ್ಪರ್ಧೆ ಅನ್ನೋದು ಹೆಚ್ಚಿದೆ. ಅದರ ನಡುವೆ ಕೂಡ ಒಬ್ಬರನ್ನ ನೋಡಿದ್ರೆ ಇನ್ನೊಬ್ಬರಿಗೆ ಆಗದೇ ಇರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಎಲ್ಲದರ ನಡುವೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ಸನ್ನು ಹೊಂದಬೇಕು ಎನ್ನುವಂತಹ ಕನಸಿನಲ್ಲಿ ಕಷ್ಟ ಪಡುತ್ತಾರೆ. ಅಂತಹ ಕಷ್ಟ ಪಡುವಂತಹ ಜನರಿಗೆ ಇವತ್ತಿನ ಲೇಖನದ ಮೂಲಕ ಯಶಸ್ಸಿನ ನಿಜಗುಟ್ಟನ್ನು ಹೇಳಲು ಹೊರಟಿದ್ದೇವೆ. ನಮ್ಮ ಭಾರತ ದೇಶ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ಹಾಗೂ ಬುದ್ದಿವಂತ ಜೀವಿಗಳಲ್ಲಿ ಒಬ್ಬರಾಗಿರುವಂತಹ ಆಚಾರ್ಯ ಚಾಣಕ್ಯರು ತಮ್ಮ ಗ್ರಂಥಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಈ ಐದು ಕೆಲಸಗಳನ್ನು ಮಾಡುವ ಮೂಲಕ ಯಶಸ್ಸನ್ನ ಹೊಂದೋದಕ್ಕೆ ನೀವು ತೇರ್ಗಡೆ ಆಗಬಹುದು ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ವಿಚಾರಗಳು ಯಾವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಬೆಳಗ್ಗೆ ಎದ್ದ ತಕ್ಷಣ ಈ ಐದು ಕೆಲಸಗಳನ್ನು ಮಾಡಿ!

  • ಬೆಳಗ್ಗೆ ಎದ್ದ ತಕ್ಷಣ ಆ ದಿನ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವುದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ಈ ನಿರ್ಧಾರವನ್ನು ತೆಗೆದುಕೊಂಡರೆ ಖಂಡಿತವಾಗಿ ಆ ದಿನ ಏನು ಮಾಡಬೇಕು ಅನ್ನೋದನ್ನ ತಿಳಿದುಕೊಂಡಿರುವುದರಿಂದಾಗಿ ಆ ದಿನವನ್ನು ಉತ್ತಮವಾಗಿ ಕಳೆಯ ಬಹುದಾಗಿದೆ.
  • ಎರಡನೇದಾಗಿ ಪ್ರತಿದಿನ ಸೇವನೆ ಮಾಡುವಂತಹ ಆಹಾರ ಕ್ರಮದ ಬಗ್ಗೆ ಸರಿಯಾದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಿ ಯಾಕೆಂದರೆ ಆರೋಗ್ಯವೇ ಮಹಾಭಾಗ್ಯ ಹೀಗಾಗಿ ಸರಿಯಾದ ರೀತಿಯಲ್ಲಿ ಆಹಾರ ಕ್ರಮ ಹಾಗೂ ದೈನಂದಿನ ಜೀವನದಲ್ಲಿ ಫಿಟ್ ಆಗಿ ಕಾಣಿಸಿಕೊಳ್ಳಲು ವ್ಯಾಯಾಮ ಕೂಡ ಅಗತ್ಯವಾಗಿರುತ್ತದೆ.
  • ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಅಂತ ಅಂದ್ರೆ ಚಾಣಕ್ಯರು ಹೇಳುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ಎಷ್ಟೇ ಕಷ್ಟ ಇದ್ರು ಕೂಡ ಕೆಲಸವನ್ನು ಮಾಡೋದಕ್ಕೆ ಹಿಂಜರಿಯಬೇಡಿ. ಯಾವತ್ತು ಸಮಯ ನೋಡಿ ಕೆಲಸ ಮಾಡೋದಕ್ಕೆ ಹೋಗ್ಬೇಡಿ. ಸಮಯ ಮೀರಿ ಕಷ್ಟಪಟ್ಟು ದುಡಿಯಲ್ಲಿ ಖಂಡಿತವಾಗಿ ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸುತ್ತಿದೆ ಎಂಬುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಕಠಿಣ ಪರಿಶ್ರಮ ಎನ್ನುವುದು ನಿಮ್ಮಲ್ಲಿ ಇರುವಂತಹ ನಕಾರಾತ್ಮಕ ತೆಯನ್ನು ದೂರ ಮಾಡುತ್ತದೆ
  • ಬೆಳಗ್ಗೆ ಎದ್ದ ತಕ್ಷಣ ಧಾರ್ಮಿಕವಾಗಿ ಮಾಡುವ ಕೆಲಸ ಅಂದ್ರೆ ‘ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೆ ಸರಸ್ವತಿ| ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಪ್ರಭಾತೇ ಕರದರ್ಶನಂ||’ಈ ಮಂತ್ರವನ್ನು ಜಪ ಮಾಡುವುದು. ಈ ಮಂತ್ರದ ಜಪದಿಂದಾಗಿ ಆ ವ್ಯಕ್ತಿಯ ದಿನ ಎನ್ನುವುದು ಉತ್ತಮವಾಗಿ ಪ್ರಾರಂಭವಾಗಲಿದೆ ಹಾಗೂ ದೈವಿಕ ಆಶೀರ್ವಾದ ಕೂಡ ಆತನ ಮೇಲೆ ಇರುತ್ತದೆ. ಆ ದಿನ ಕಾಣಿಸಿಕೊಳ್ಳುವಂತಹ ಸಮಸ್ಯೆಯನ್ನು ಕೂಡ ಆತ ಆತ್ಮವಿಶ್ವಾಸದಿಂದ ಎದುರಿಸಬಹುದಾಗಿದೆ.

Comments are closed.