Diesel Cars: ಇಷ್ಟು ಕಡಿಮೆ ಬೆಲೆಯಲ್ಲಿ ಸಿಗಲಿವೆ ಒಳ್ಳೆಯ ಮೈಲೇಜ್ ಕೊಡುವ ಈ ಡೀಸೆಲ್ ಕಾರುಗಳು!

Diesel Cars: ಸದ್ಯದ ಮಟ್ಟಿಗೆ ಭಾರತ ದೇಶದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕಣ್ಣಿಗೆ ಕಾಣುತ್ತಿರುವ ಹಾಗೆ ಡೀಸೆಲ್ ಕಾರುಗಳು ಕ್ರಮೇಣವಾಗಿ ಕಣ್ಮರೆ ಆಗುವಂತಹ ಸನ್ನಿವೇಶ ಎದುರಾಗಿದೆ. ಹೇಗಿದ್ರು ಕೂಡ ಕೆಲವೊಂದು ಪ್ರತಿಷ್ಠಿತ ಸಂಸ್ಥೆಗಳ ಡೀಸೆಲ್ ಕಾರುಗಳನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿತ್ತು ಇವುಗಳ ಮೈಲೇಜ್ ಕೂಡ ಸಖತ್ ಆಗಿದೆ.

ಕಡಿಮೆ ಬೆಲೆಯಲ್ಲಿ ಸಿಗುವಂತಹ ಡೀಸೆಲ್ ಕಾರುಗಳು ಇವುಗಳ ನೋಡಿ!

  • ಈ ಲಿಸ್ಟಿನಲ್ಲಿ ಮೊದಲಿಗೆ ಕಾಣಿಸಿಕೊಳ್ಳುವುದು ಕಿಯಾ ಸಂಸ್ಥೆಯ ಸೋನೆಟ್ ಕಾರು. ಇದರಲ್ಲಿ 1.4 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಇಂಜಿನ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಆರು ಸ್ಪೀಡ್ ಮ್ಯಾನ್ ಒನ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಪಡೆದುಕೊಳ್ಳಬಹುದು. ಮೈಲೇಜ್ ವಿಚಾರಕ್ಕೆ ಬಂದ್ರೆ 18 ರಿಂದ 22 km ಪ್ರತಿ ಲೀಟರ್ ಮೈಲೇಜ್ ಸಿಗುತ್ತದೆ. ಬೆಳೆಯ ಬಗ್ಗೆ ಮಾತನಾಡುವುದಾದರೆ 9.8 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ.
  • ಎರಡನೇದಾಗಿ ಮಹೇಂದ್ರ ಬೋಲೇರೋ ಹಾಗೂ ಮಹೇಂದ್ರ ಬೋಲೇರೋ ನಿಯೋ ಬೆಸ್ಟ್ ಆಪ್ಷನ್ ಎಂದು ಹೇಳಬಹುದಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.5 ಲೀಟರ್ ಮೂರು ಸಿಲಿಂಡರ್ ಟರ್ಬೋ ಡೀಸೆಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. 16 ಕಿಲೋಮೀಟರ್ಗಳ ವರೆಗೆ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು ಇದರ ಬೆಲೆ 9.90 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಆಗಿದೆ.
  • ಮಹಿಂದ್ರ xuv3xo 1.5 ಲೀಟರ್ 3 ಸಿಲಿಂಡರ್ ಟರ್ಬೋಡಿಸೇಲ್ ಎಂಜಿನ್ ಹೊಂದಿದೆ. 117ps ಪವರ್ ಹಾಗೂ 300 Nm ಟಾರ್ಕ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. 20.6- 21.2 ಕಿಲೋ ಮೀಟರ್ವರೆಗೆ ಮೈಲೇಜ್ ಅನ್ನು ಕೂಡ ಗ್ರಾಹಕರಿಗೆ ಇದು ನೀಡುತ್ತದೆ. 9.99 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ ಕ್ರೂಸ್ ಕಂಟ್ರೋಲ್ ಇನ್ ಫೋಟೋ ಸ್ಕ್ರೀನ್ ಸಿಸ್ಟಮ್ ಅಲೆಕ್ಸಾ ಕನೆಕ್ಟಿವಿಟಿ ಫೋನ್ ಚಾರ್ಜರ್ ಸುರಕ್ಷತೆ ದೃಷ್ಟಿಯಲ್ಲಿ 6 ಏರ್ ಬ್ಯಾಗ್ ಗಳು ಹಾಗೂ ADAS ನಂತಹ ಅಡ್ವಾನ್ಸ್ ಆಗಿರುವಂತಹ ಸುರಕ್ಷತಾ ಕ್ರಮಗಳನ್ನು ಕೂಡ ನೀವು ಕಾಣಬಹುದಾಗಿದೆ.
  • ಹುಂಡೈ ಸಂಸ್ಥೆಯ ವೆನ್ಯು ನಿಮಗೆ ಡೀಸೆಲ್ ವೆರಿಯಂಟ್ ನಲ್ಲಿ ಕೂಡ ಸಿಕ್ತಾ ಇದೆ. ನಿಮ್ಮ 1.5 ಲೀಟರ್ 4 ಸಿಲಿಂಡರ್ ಟರ್ಬೋ ಡೀಸೆಲ್ ಇಂಜಿನ್ ಅನ್ನು ಇದು ಹೊಂದಿದ್ದು 115 ಪಿ ಎಸ್ ಪವರ್ ಅನ್ನು ಉತ್ಪಾದನೆ ಮಾಡುವಂತಹ ಸಾಮರ್ಥ್ಯವನ್ನು ಕೂಡ ಈ ಕಾರು ಹೊಂದಿದೆ. 23.4 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಜ್ ಅನ್ನು ಕೂಡ ನೀವು ಈ ಕಾರಿನ ಮೂಲಕ ಪಡೆದುಕೊಳ್ಳಬಹುದಾಗಿದೆ. 10.71 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದಾಗಿದೆ.
  • ಮಹಿಂದ್ರಾ ಥಾರ್ ಆರ್ ಡಬ್ಲ್ಯೂ ಡಿ ಕಾರನ್ನು ಕೂಡ ನೀವು 1.5 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋ ಚಾರ್ಜ್ ಆಗಿರುವಂತಹ ಡೀಸೆಲ್ ಇಂಜಿನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಥಾರ್ ಅಂದ್ಮೇಲೆ ಪವರ್ ಫುಲ್ ಪರ್ಫಾರ್ಮೆನ್ಸ್ ಖಂಡಿತವಾಗಿ ಇದ್ದೇ ಇರುತ್ತೆ. 12 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದಾಗಿದೆ.

Comments are closed.