Kisan Vikas Patra: ಹತ್ತು ಲಕ್ಷ ಇಪ್ಪತ್ತು ಲಕ್ಷ ಆಗ್ಬೇಕಾ? ಹಾಗಾದ್ರೆ ರೈತರಿಗಾಗಿ ಸರ್ಕಾರದ ಗ್ಯಾರಂಟಿ ಯೊಜನೆ ಇಲ್ಲಿದೆ!

Kisan Vikas Patra: ನಮ್ಮ ಭಾರತ ದೇಶದ ಪ್ರತಿಯೊಂದು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಕೂಡ ಪ್ರಮುಖವಾಗಿ ರೈತರ ದೃಷ್ಟಿಕೋನದಲ್ಲಿ ಪ್ರತಿಯೊಂದು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ಹೇಳುವುದಕ್ಕೆ ಹೊರಟಿರೋದು ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವಂತಹ ಹೊಸ ಪೋಸ್ಟ್ ಆಫೀಸ್ ಹೂಡಿಕೆ ಯೋಜನೆ ಬಗ್ಗೆ. ಹಾಗಿದ್ರೆ ಆ ಯೋಜನೆ ಯಾವುದು ಹಾಗೂ ರೈತರಿಗೆ ಅದರಿಂದ ಯಾವ ರೀತಿಯಲ್ಲಿ ಲಾಭ ಸಿಗುತ್ತದೆ ಅನ್ನೋದನ್ನ ತಿಳಿಯೋಣ ಬನ್ನಿ.

ಕಿಸಾನ್ ವಿಕಾಸ್ ಪತ್ರ ಯೋಜನೆ!

ಇದೊಂದು ದೀರ್ಘಕಾಲಿಕ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯಾಗಿದೆ. 9 ವರ್ಷ 5 ತಿಂಗಳುಗಳ ಕಾಲ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ಹಾಕಿರುವ ಹಣ ಡಬಲ್ ಆಗಿ ಮೆಚ್ಯುರಿಟಿ ಸಂದರ್ಭದಲ್ಲೇ ಸಿಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಲಾಭದಾಯಕ 7.5 ಪರ್ಸೆಂಟ್ ಬಡ್ಡಿ ರಿಟರ್ನ್ ಸಿಗುತ್ತದೆ. ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ರೈತರಿಗೆ ಇದು ಸಾಕಷ್ಟು ಲಾಭದಾಯಕ ಹಾಗೂ ಅತ್ಯಂತ ಸುರಕ್ಷಿತ ಹೂಡಿಕೆಯಾಗಿದೆ. ರೈತರು ಇದರ ಯಾವುದೇ ಪೋಸ್ಟ್ ಆಫೀಸ್ನಲ್ಲಿ ಹಾಗೂ ಈ ಹೂಡಿಕೆ ಯೋಜನೆ ಇರುವಂತಹ ಬ್ಯಾಂಕುಗಳಲ್ಲಿ ಸುಲಭವಾಗಿ ಅಪ್ಲೈ ಮಾಡಬಹುದಾಗಿದೆ. ಇನ್ನು ಇದಕ್ಕೆ ಸಿಗುವಂತಹ ಬಡ್ಡಿಯ ಮೇಲೆ ಯಾವುದೇ ರೀತಿಯ ಟ್ಯಾಕ್ಸ್ ಅನ್ನು ಕಟ್ಟಬೇಕಾಗಿರೋದಿಲ್ಲ. ಇನ್ನು ಈ ಯೋಜನೆ ಮೇಲೆ ಪಡೆದುಕೊಳ್ಳುವಂತಹ ಡಬಲ್ ಹಣದ ಬೆಲೆ ಕೂಡ ನಿಮಗೆ ಸರ್ಕಾರದಿಂದ ಟ್ಯಾಕ್ಸ್ ರಿಯಾಯಿತಿ ಸಿಗುತ್ತದೆ.

ಕಿಸಾನ್ ವಿಕಾಸ್ಪತ್ರೆ ಯೋಜನೆ ಅಡಿಯಲ್ಲಿ ಅಪ್ಲೈ ಮಾಡೋದಕ್ಕೆ ಇರಬೇಕಾಗಿರುವ ಅರ್ಹತೆಗಳು!

ಪ್ರಮುಖವಾಗಿ ನೀವು ಭಾರತೀಯ ನಾಗರಿಕರಾಗಿರಬೇಕು ಹಾಗೂ ನಿಮ್ಮ ವಯಸ್ಸು 10 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಒಂದು ವೇಳೆ ತಮ್ಮ ಮಕ್ಕಳ ಹೆಸರಿನಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ಕೂಡ ಅವರ ಪೋಷಕರು ಓಪನ್ ಮಾಡಬಹುದಾಗಿದೆ.

ಯೋಜನೆಯ ಉಪಯೋಗಗಳು!

ಇದು ದೀರ್ಘಕಾಲಿಕ ಹೂಡಿಕೆ ಆಗಿರುವುದರಿಂದಾಗಿ ಕನಿಷ್ಠಪಕ್ಷ ಒಂಬತ್ತು ವರ್ಷ ಐದು ತಿಂಗಳುಗಳ ಕಾಲ ನಿಮ್ಮ ಹಣ ಸೇಫ್ ಹಾಗೂ ಸುರಕ್ಷಿತವಾಗಿರುತ್ತದೆ. ಈ ಮಧ್ಯ ಹಣವನ್ನು ತೆಗಿಯೋ ಹಾಗಿಲ್ಲ ಹಾಗೂ ಒಂದು ವೇಳೆ ಚಿಕಿತ್ಸೆ ವಿದ್ಯಾಭ್ಯಾಸ ಅಥವಾ ಇನ್ನಿತರ ಪ್ರಮುಖ ಕೆಲಸಗಳಿಗೆ ಹಣ ಬೇಕು ಅಂತ ಅಂದ್ರೆ ನಿಮ್ಮ ಹಣದಲ್ಲಿ ಇಂತಿಷ್ಟು ಪ್ರತಿಶತ ಕಡಿತಗೊಳಿಸಿ ನಂತರ ಹಣವನ್ನು ನಿಮಗೆ ನೀಡಲಾಗುತ್ತದೆ. ಮ್ಯೂಚುವಲ್ ಫಂಡ್ ಗಳಿಗೆ ಹೋಲಿಸಿದರೆ ಇಲ್ಲಿ ಸಿಗುತ್ತಿರುವಂತಹ ಬಡ್ಡಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರಬಹುದು ಆದರೆ ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಕಾರಣದಿಂದಾಗಿ ಅತ್ಯಂತ ಸುರಕ್ಷಿತ ಹಾಗೂ ಕೈಗೆ ಸಿಗುವಾಗ ಲಾಭದಾಯಕವಾಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಟ್ಯಾಕ್ಸ್ ಲಾಭದ ಬಗ್ಗೆ ಮಾತನಾಡುವುದಾದರೆ ಉದಾಹರಣೆಗೆ 10 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿ ಒಂಬತ್ತು ವರ್ಷ ಐದು ತಿಂಗಳ ನಂತರ ಅದು 20 ಲಕ್ಷ ಹಾಗೂ ಹೆಚ್ಚುವರಿ ಬಡ್ಡಿ ರೂಪದಲ್ಲಿ ಸಿಗುತ್ತಿದ್ದರೆ, ಇನ್ಕಮ್ ಟ್ಯಾಕ್ಸ್ ಆಕ್ಟ್ 80 ಸಿ ಪ್ರಕಾರ ಆ ಬಡ್ಡಿ ದರದ ಮೇಲೆ ಸಂಪೂರ್ಣ ರಿಯಾಯಿತಿ ಸಿಗಲಿದೆ. ಟಿಡಿಎಸ್ ಶುಲ್ಕವನ್ನು ಕೂಡ ಈ ಯೋಜನೆ ಅಡಿಯಲ್ಲಿ ಕಡಿತ ಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಕೂಡ ಲಾಭದಾಯಕವಾಗಿದೆ.

ಹೂಡಿಕ ಮಾಡಿ ಎರಡುವರೆ ವರ್ಷಗಳ ಒಳಗೆ ಹಣವನ್ನು ತೆಗೆದುಕೊಳ್ಳುವುದಕ್ಕೆ ಹೋದರೆ ಕೇವಲ ಅಸಲು ಹಣ ಮಾತ್ರ ಕೈಗೆ ಸಿಗುತ್ತದೆ. ಇನ್ನು ಮೂರು ವರ್ಷಗಳ ನಂತರ ಹಣವನ್ನು ತೆಗೆದುಕೊಳ್ಳುವುದಕ್ಕೆ ಹೋದರೆ ಈಗಾಗಲೇ ಪ್ರಾರಂಭವಾಗಿರುವಂತಹ ಬಡ್ಡಿಯಲ್ಲಿ ಕಡಿತಗೊಳಿಸುವಂತಹ ಪ್ರಮಾಣದ ಹಣವನ್ನು ಪೆನಾಲ್ಟಿ ರೂಪದಲ್ಲಿ ಕಟ್ಟಬೇಕಾಗುತ್ತದೆ. ಇನ್ನು ಮರಣದ ಸಂದರ್ಭದಲ್ಲಿ ಯಾರ ಹೆಸರಿಗೆ ನಾಮಿನಿಯನ್ನು ಹಾಕಿರುತ್ತಾರೋ ಅವರ ಹೆಸರಿಗೆ ಹಣ ವರ್ಗಾವಣೆ ಆಗುತ್ತದೆ.

Comments are closed.