HSRP: HSRP ಅಲ್ಲ, ಈ ಡಾಕ್ಯುಮೆಂಟ್ ಪ್ರಮುಖವಾಗಿ ಇರಬೇಕು; ಇಲ್ದಿದ್ರೆ ನಿಮ್ಮ ಗಾಡಿ ಸೀಜ್ ಗ್ಯಾರಂಟಿ!

HSRP: ಕಾನೂನು ನಿಯಮಗಳನ್ನು ಇತ್ತೀಚಿನ ದಿನಗಳಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಸಾಕಷ್ಟು ಕಠಿಣ ಗೊಳಿಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಈಗ ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ ಅನ್ನು ಮೇ 31ರ ಒಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿದೆ. 2019ರ ಒಳಗೆ ಖರೀದಿ ಮಾಡಲಾಗಿರುವಂತಹ ಅಥವಾ ರಿಜಿಸ್ಟರ್ ಮಾಡಲಾಗಿರುವಂತಹ ವಾಹನಗಳಿಗೆ ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ ರಿಜಿಸ್ಟರ್ ಮಾಡಿಕೊಂಡು ಶೋರೂಮ್ ಗೆ ಹೋಗಿ ತಮ್ಮ ನಂಬರ್ ಪ್ಲೇಟ್ ತಂದು ಅಳವಡಿಸಿಕೊಳ್ಳಬೇಕು ಎಂಬುದಾಗಿ ನಿಯಮವಿದೆ. ಆದರೆ ಅದಕ್ಕಿಂತಲೂ ಪ್ರಮುಖವಾಗಿರುವಂತಹ ಡಾಕ್ಯುಮೆಂಟ್ಸ್ ನಿಮ್ಮ ವಾಹನದಲ್ಲಿ ಇರಲೇಬೇಕು.

ಈ ಡಾಕ್ಯುಮೆಂಟ್ಸ್ ಇಲ್ದೆ ಇದ್ರೆ ದಂಡ ಗ್ಯಾರಂಟಿ!

ಹೌದು ನಾವ್ ಮಾತಾಡ್ತಾ ಇರೋದು ಪೊಲ್ಲ್ಯೂಷನ್ ಸರ್ಟಿಫಿಕೇಟ್ ಬಗ್ಗೆ. ಮೊದಲ ಇದರ ಬಗ್ಗೆ ಮಾಡಿದ್ರಾಯ್ತು ಅಷ್ಟೊಂದು ಇಂಪಾರ್ಟೆಂಟ್ ಅಲ್ಲ ಕೇವಲ ಡ್ರೈವಿಂಗ್ ಲೈಸೆನ್ಸ್ ಹಾಗೂ ಗಾಡಿಯ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇರ್ಬೇಕು ಎನ್ನುವುದಾಗಿ ಎಲ್ಲರೂ ಮಾತನಾಡುತ್ತಿದ್ದರು. ಆದರೆ ಈಗ ಪೊಲ್ಯೂಶನ್ ಸರ್ಟಿಫಿಕೇಟ್ ಅನ್ನು ಪ್ರತಿಯೊಬ್ಬರು ಕೂಡ ತಮ್ಮ ವಾಹನದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಹಾಗೂ ಪ್ರಮುಖವಾಗಿದೆ.

ಮಾಹಿತಿ ಪ್ರಕಾರ ಪ್ರತಿಯೊಂದು ಪೆಟ್ರೋಲ್ ಪಂಪ್ ಹಾಗೂ ಸಿಗ್ನಲ್ಗಳಲ್ಲಿ ಸ್ವಯಂ ಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಒಂದು ವೇಳೆ ನಿಮ್ಮ ವಾಹನದ ಮೇಲೆ ನೀವು ಪೋಲುಶನ್ ಸರ್ಟಿಫಿಕೇಟ್ ಮಾಡಿಸಿಲ್ಲ ಅಂದ್ರೆ ಅಥವಾ ಅದರ ವ್ಯಾಲಿಡಿಟಿ ಮುಗಿದು ಹೋಗಿದ್ದು ನೀವು ನವೀಕರಣ ಮಾಡಿಸಿಕೊಳ್ಳದೆ ಹೋದಲ್ಲಿ ಸ್ವಯಂ ಚಾಲಿತವಾಗಿ ದಂಡವನ್ನು ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ತಿಳಿದುಬಂದಿದೆ.

ಇದರ ಜೊತೆಗೆ ನೀವು ನಕಲಿ ಮಾಲಿನ್ಯ ಪ್ರಮಾಣ ಪತ್ರವನ್ನು ನೀಡುವುದು ಕೂಡ ಅಕ್ಷಾಮ್ಯ ಅಪರಾಧವಾಗಿದ್ದು ಇದಕ್ಕಗಿ ನೀವು 10,000ಗಳ ವರೆಗೆ ದಂಡವನ್ನು ಕಟ್ಟಬೇಕಾದ ಅಂತಹ ಸಾಧ್ಯತೆ ಇರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ. ಆ 10000 ದುಡಿಯೋದಕ್ಕಾಗಿ ನೀವು ಕನಿಷ್ಠಪಕ್ಷ ಅರ್ಧ ತಿಂಗಳು ಕೆಲಸ ಮಾಡಬೇಕಾಗಿರುತ್ತದೆ ಆದರೆ ಪೋಲುಷನ್ ಸರ್ಟಿಫಿಕೇಟ್ ಅನ್ನು ನೀವು ಮಾಡೋದಕ್ಕೆ ಅಥವಾ ನವೀಕರಣಗೊಳಿಸುವುದಕ್ಕೆ ಕೇವಲ ನೂರು ರೂಪಾಯಿಗಳ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಿರುತ್ತದೆ. ಹೀಗಾಗಿ ತಪ್ಪದೆ ಪೊಲ್ಲ್ಯೂಷನ್ ಸರ್ಟಿಫಿಕೇಟ್ ಅನ್ನು ಮಾಡಿಸಿ ಹಾಗೂ ಈ ರೀತಿಯ ದೊಡ್ಡ ಮಟ್ಟದ ದಂಡದಿಂದ ತಪ್ಪಿಸಿಕೊಳ್ಳಿ. ಒಂದು ವೇಳೆ ನೀವು ಮಾಲಿನ್ಯ ಸರ್ಟಿಫಿಕೇಟ್ ಮಾಡಿಸಿಕೊಳ್ಳದೆ ಹೋದಲ್ಲಿ ಹಾಗೂ ಹಳೆಯ ವಾಹನಗಳಲ್ಲಿ ತಿರುಗಾಡುತ್ತಿದ್ದರೆ ನೀವು ಕಟ್ಟಬೇಕಾಗಿರುವ ದಂಡ ಹಾಗೂ ಅನುಭವಿಸ ಬೇಕಾಗಿರುವ ಶಿಕ್ಷೆ ಇದಕ್ಕೂ ಮೀರಿದ್ದಾಗಿರಬಹುದು ಎನ್ನುವುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ.

Comments are closed.