Social Media: 1989ರಲ್ಲಿ ಒಂದು ಬಿಯರ್ ಬಾಟಲ್ ಬೆಲೆ ಎಷ್ಟಿತ್ತು ಅಂತ ಗೊತ್ತಾದ್ರೆ ನೀವು ಬಿಯರ್ ಕುಯ್ಯೋದೇ ಬಿಡ್ತೀರಾ? ವೈರಲ್ ಆಯ್ತು ಓಲ್ಡ್ ಬಿಲ್!

Social Media: ಸೋಶಿಯಲ್ ಮೀಡಿಯ ಅನ್ನೋದು ಪ್ರತಿಯೊಂದು ವಿಚಾರಗಳನ್ನ ಹಂಚಿಕೊಳ್ಳುವಂತಹ ಸ್ಥಳ ಆಗಿದ್ದು ಇಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಮನಸ್ಸಿಗೆ ಬಂದಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಂದು ವಿಚಾರಗಳು ರಾತೋ ರಾತ್ರಿ ವೈರಲ್ ಆಗುವಂತಹ ಸಾಧ್ಯತೆಗಳಿರುತ್ತದೆ. ಇನ್ನು ಕೆಲವರು ತಮ್ಮ ಹಳೆಯ ಕಾಲದ ಕೆಲವೊಂದು ಮೆಮೊರಿಗಳನ್ನ ಇಲ್ಲಿ ಮೆಲುಕು ಹಾಕಿಕೊಳ್ಳುವುದಕ್ಕೆ ಕೂಡ ಸೋಶಿಯಲ್ ಮೀಡಿಯಾ ಅನ್ನು ಬಳಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾ ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿದ್ದು ಕೆಲವರು ಈ ಸೋಶಿಯಲ್ ಮೀಡಿಯಾವನ್ನು ತಮ್ಮ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಬಳಸಿಕೊಂಡರೆ, ಇನ್ನು ಕೆಲವರು ಕೇವಲ ಟೈಮ್ ಪಾಸ್ಗಾಗಿ ಇದನ್ನ ಬಳಸಿಕೊಳ್ಳುತ್ತಿದ್ದಾರೆ.

ಅದರಲ್ಲೂ 45 ಐವತ್ತು ವರ್ಷಕ್ಕಿಂತ ಮೇಲ್ಪಟ್ಟಂತಹ ವ್ಯಕ್ತಿಗಳು ತಮ್ಮ ಕಾಲ ಹಾಗೂ ಈಗ ಇರುವಂತಹ ಕಾಲವನ್ನು ಹೋಲಿಸಿ ನಮ್ಮ ಕಾಲದಲ್ಲಿ ಹಾಗೆ ಇರ್ತಿತ್ತು ಹೀಗೆ ಇರ್ತಿತ್ತು ಅನ್ನೋದಾಗಿ ಹೋಲಿಕೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ರೀತಿಯ ಜನರು ಹೆಚ್ಚಾಗಿ ಅಂದಿನ ಕಾಲದ ವಸ್ತುವಿನ ಬೆಲೆಯನ್ನು ಹಾಗೂ ಇಂದಿನ ಕಾಲದ ವಸ್ತುವಿನ ಬೆಲೆಯನ್ನು ಕಂಪೇರ್ ಮಾಡೋದು ಹೆಚ್ಚು. ಇದರ ನಡುವೆ ಈಗ 1989ನೇ ಇಸವಿಯ ಒಂದು ಬಿಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಬನ್ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

1989 ರಲ್ಲಿ ಒಂದು ಬಿಯರ್ ಬೆಲೆ ಎಷ್ಟಾಗಿತ್ತು ಗೊತ್ತಾ?

ಆಲ್ಕೋಹಾಲ್ ಬೆಲೆ ಆಗಾಗ ಹೆಚ್ಚಾಗುತ್ತದೆ ಯಾಕೆಂದರೆ ಇದರ ಬೆಲೆ ಎಷ್ಟು ಹೆಚ್ಚಾದ್ರೂ ಕೂಡ ಸರ್ಕಾರಕ್ಕೆ ತಿಳಿದಿದೆ ಇದನ್ನ ಕುಡಿಯುವವರು ಖಂಡಿತವಾಗಿ ಕುಡಿದೆ ಕುಡಿತಾರೆ ಅನ್ನೋದಾಗಿದೆ. ಹೀಗಾಗಿ ಸರ್ಕಾರಗಳು ಆಗಾಗ ಆಲ್ಕೋಹಾಲ್ ಬೆಲೆಯನ್ನು ಹೆಚ್ಚಿಸುವುದನ್ನ ರೂಢಿ ಮಾಡಿಕೊಂಡುಬಿಟ್ಟಿವೆ. ಸಾಕಷ್ಟು ವರ್ಷಗಳ ಅಂತರದಲ್ಲಿ ಉದಾಹರಣೆಗೆ ಬಿಯರ್ ಬೆಲೆ ಸಾಕಷ್ಟು ಏರಿಕೆ ಕಂಡಿರುವುದನ್ನ ನೀವು ಕಣ್ಣಾರೆ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇಂತಹ ಬೇಸಿಗೆ ಸಂದರ್ಭದಲ್ಲಿ ಪ್ರಮುಖವಾಗಿ ಮಧ್ಯಪಾನಪ್ರಿಯರು ಪ್ರತಿಯೊಬ್ಬರು ಕೂಡ ಬಿಯರ್ ಅನ್ನು ಹೆಚ್ಚಾಗಿ ಸೇವಿಸುತ್ತಾರೆ. ಇನ್ನು ನಾವು ಈಗ ಮಾತನಾಡುವುದಕ್ಕೆ ಹೊರಟಿರೋದು 30 ವರ್ಷಗಳ ಹಿಂದೆ ಬಿಯರ್ ಬೆಲೆ ಎಷ್ಟಾಗಿತ್ತು ಅನ್ನೋದರ ಬಗ್ಗೆ. ಅಂದ್ರೆ 1989 ನೇ ಇಸವಿಯಲ್ಲಿ ಕಂಡುಬಂದಿರುವಂತಹ ಬಿಲ್ ನಲ್ಲಿ ಒಂದು ಬಿಯರ್ ಬೆಲೆ ಎಷ್ಟು ಅನ್ನೋದನ್ನ ತಿಳಿಯೋಣ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ಬಿಲ್ ನಲ್ಲಿ ಆ ಕಾಲದಲ್ಲಿ ಅಂದರೆ 1989 ರಲ್ಲಿ ಒಂದು ಬಿಯರ್ ಬೆಲೆ 33 ಎಂಬುದಾಗಿ ನಮೂದಿಸಲಾಗಿದೆ. ಇಂದಿನ ಕಡಿಮೆ ಬೆಲೆಯ ಬಿಯರ್ ಪ್ರಾರಂಭ ಆಗೋದೇ 100 ರಿಂದ 120 ರೂಪಾಯಿಗಳಿಗೆ. ಹೀಗಾಗಿ ಅಂದಿನ ಹಾಗೂ ಇಂದಿನ ಕಾಲಕ್ಕೆ ಈ ವಿಚಾರದಲ್ಲಿ ಕೂಡ ಸಾಕಷ್ಟು ಆಕಾಶ ಭೂಮಿಯ ವ್ಯತ್ಯಾಸ ಇದೆ ಎಂದು ಹೇಳಬಹುದು.

Comments are closed.