Whatsapp: ಭಾರತ ಬಿಟ್ಟು ಹೋಗ್ತಾ ಇದ್ಯಾ ವಾಟ್ಸಾಪ್? ವಾಟ್ಸ್ ಆಪ್ ಬಳಕೆದಾರರಿಗೆ ಆತಂಕ; ಆಗ್ತಿದೆ ಎಕೌಂಟ್ ಬ್ಯಾನ್!

Whatsapp: ದಿನ ಬೆಳಗಾದ್ರೆ ಸಾಕು ಮೊದಲಿಗೆ ಎದ್ದ ಕೂಡಲೇ ಪ್ರತಿಯೊಬ್ರು ಕೂಡ ಕೈಗೆ ಹಿಡಿದುಕೊಳ್ಳುವುದು ಮೊಬೈಲನ್ನು. ಮೊಬೈಲ್ ಅನ್ನೋದು ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಕೂಡ ಪ್ರಮುಖ ವಸ್ತುವಾಗಿ ಕಾಣಿಸಿಕೊಳ್ಳುತ್ತಿದೆ. ಜೀವನದ ಅವಿಭಾಜ್ಯ ಅಂಗವಾಗಿ ಮೊಬೈಲ್ ಕಾಣಿಸಿಕೊಳ್ಳುತ್ತದೆ. ನಾವು ನಮ್ಮ ಪ್ರೀತಿ ಪಾತ್ರರ ಜೊತೆಗೆ ಮೊದಲಿಗೆ ಕನೆಕ್ಟೆಡ್ ಆಗಿರಬೇಕು ಅಂತ ಅಂದ್ರೆ ಅಂಚೆ ಕಚೇರಿಯ ಮೂಲಕ ಪತ್ರವನ್ನು ಕಳಿಸಬೇಕಾಗಿತ್ತು ಇಲ್ಲವೇ ಲ್ಯಾಂಡ್ ಲೈನ್ ಮೂಲಕ ಅವರಿಗೆ ಫೋನ್ ಮಾಡಬೇಕಾಗಿತ್ತು. ಆದರೆ ಎಲ್ಲಾ ಕಾರ್ಯಕ್ರಮಗಳನ್ನು ಈಗ ಇನ್ನಷ್ಟು ಸುಲಭವಾಗಿ ಮಾಡಿರೋದು ಈ ಮೊಬೈಲ್. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ಮಾತನಾಡಲು ಹೊರಟಿರೋದು ವಾಟ್ಸಾಪ್ ಬಗ್ಗೆ.

ವಾಟ್ಸಾಪ್ ಅನ್ನೋದು ತಮ್ಮ ಪ್ರೀತಿಪಾತ್ರರಿಗೆ ಅಥವಾ ಪರಿಚಿತರಿಗೆ ತಮ್ಮ ಜೀವನದ ಕುರಿತಂತೆ ಇರುವಂತಹ ಫೋಟೋ ಹಾಗೂ ವಿಡಿಯೋಗಳನ್ನು ಅಥವಾ ಟೆಕ್ಸ್ಟ್ ಮೆಸೇಜ್ ಗಳನ್ನು ಕೂಡ ಕಳುಹಿಸುವಂತಹ ಒಂದು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ಒಂದು ಡಿಜಿಟಲ್ ಪ್ಲಾಟ್ಫಾರ್ಮ್ ಅಪ್ಲಿಕೇಶನ್ ಆಗಿದೆ ಅಂತ ಹೇಳಬಹುದು. ಆದರೆ ಈಗ ಈ ಅಪ್ಲಿಕೇಶನ್ ಮೇಲೆ ಭಾರತ ಸರ್ಕಾರದಿಂದ ಸಾಕಷ್ಟು ಒತ್ತಡ ಬೀಳುತ್ತಿದೆ ಎಂದು ಹೇಳಬಹುದಾಗಿದೆ.

ಭಾರತ ಬಿಟ್ಟು ಹೋಗೋಕೆ ರೆಡಿಯಾಗಿದ್ಯಾ ವಾಟ್ಸಪ್?

ನಿಮಗೆ ತಿಳಿದಿರಬಹುದು ವಾಟ್ಸಪ್ ಗೆ ಅತ್ಯಂತ ಹೆಚ್ಚು ಗ್ರಾಹಕರು ಅಥವಾ ಕಸ್ಟಮರ್ಗಳು ಇರುವಂತಹ ದೇಶ ಅಂದ್ರೆ ಅದು ಖಂಡಿತವಾಗಿ ಭಾರತ ಯಾಕೆಂದರೆ ಭಾರತ ದೇಶದಲ್ಲಿರುವಂತಹ ಜನಸಂಖ್ಯೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಭಾರತ ದೇಶದಲ್ಲಿಯೇ 500 ಮಿಲಿಯನ್ಗಳಿಗಿಂತಲೂ ಅಧಿಕ whatsapp ಬಳಕೆದಾರರು ಇದ್ದಾರೆ.

ಈಗಾಗಲೇ 22.31 ಮಿಲಿಯನ್ ಗ್ರಾಹಕರನ್ನು ಬ್ಯಾನ್ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಭಾರತ ಸರ್ಕಾರದ ಅನ್ವಯ end to end encryption ನಲ್ಲಿ ಇರುವಂತಹ ಡಾಟಾ ಸೇಫ್ಟಿ ಬಗ್ಗೆ ಅನುಮಾನಗಳನ್ನ ಪ್ರಶ್ನಿಸಿದೆ. ಇನ್ನು ಸಂಸ್ಥೆ ಇದರಲ್ಲಿ ಯಾವುದು ರಾಜ್ಯ ಇಲ್ಲ ಈ ರೀತಿ ಅಗತ್ಯಕ್ಕೂ ಮೀರಿದ ಕಠಿಣ ನಿಯಮಗಳನ್ನು ಹೇಳೋದಾದ್ರೆ ನಾವು ಭಾರತ ಬಿಟ್ಟು ಹೋಗುವುದಕ್ಕೆ ಸಿದ್ಧವಾಗಿದ್ದೇವೆ ಎನ್ನುವುದಾಗಿ ವಾಟ್ಸಾಪ್ ಹೇಳಿಕೊಂಡಿದೆ. ಐಟಿ ಮಿನಿಸ್ಟ್ರಿ ಕೂಡ ಈ ಕಡೆ ಭಾರತದ ನಾಗರಿಕರ ಡಾಟಾ ಎಷ್ಟು ಮಟ್ಟಿಗೆ ಸೇಫ್ ಆಗಿದೆ ಎನ್ನುವಂತಹ ರಿಪೋರ್ಟ್ ಅನ್ನು ಕೂಡ ವಾಟ್ಸಾಪ್ ಕಂಪನಿಯಿಂದ ಕೇಳುತ್ತಿದ್ದು ಎರಡು ಕಡೆಯಿಂದ ಹಗ್ಗ ಜಗ್ಗಾಟ ನಡೆಯುತ್ತಿದೆ. ಒಂದು ವೇಳೆ ಭಾರತ ದೇಶದ ನಿಯಮಗಳಿಗೆ ಸರಿಯಾದ ರೀತಿಯಲ್ಲಿ ವಾಟ್ಸಾಪ್ ಸಂಸ್ಥೆ ಪ್ರತಿಸ್ಪಂದನೆ ನೀಡಿದೆ ಹೋದಲ್ಲಿ ಮುಂದಿನ ದಿನಗಳಲ್ಲಿ ವಾಟ್ಸಾಪ್ ತನ್ನ ಆಪರೇಷನ್ ಅನ್ನು ಭಾರತದಲ್ಲಿ ಮುಗಿಸಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು. ಆದರೆ ಈ ಸಂದರ್ಭದಲ್ಲಿ ಕೂಡ ವಾಟ್ಸಪ್ ನೆನಪಿಸಿಕೊಳ್ಳಬೇಕಾಗಿರೋದು ಭಾರತ ದೇಶ ವಾಟ್ಸಪ್ಪ್ ಗೆ ದೊಡ್ಡ ಮಾರುಕಟ್ಟೆಯಾಗಿದೆ.

Comments are closed.