HSRP: ಈ ರೀತಿಯ ವಾಹನಗಳಿಗೆ HSRP ಯಿಂದ ರಿಯಾಯಿತಿ ಸಿಗಬಹುದೇ? ನಿಮ್ಮ ವಾಹನಕ್ಕೂ ಸಿಗತ್ತಾ ಡಿಸ್ಕೌಂಡ್; ಚೆಕ್ ಮಾಡಿ!

HSRP: ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಮೇ 31ರ ಒಳಗಡೆ ಪ್ರತಿಯೊಬ್ಬರು ಕೂಡ ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು HSRP ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬುದಾಗಿ. ಈಗಾಗಲೇ ಈ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವುದಕ್ಕೆ ಜನರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸಾಕಷ್ಟು ಗಡುವುಗಳನ್ನು ಕೂಡ ವಿಸ್ತರಿಸಲಾಗಿದ್ದು ಈಗ ಕೊನೆ ದಿನಾಂಕದ ರೂಪದಲ್ಲಿ ಮೇ 31 ನಿಗದಿಯಾಗಿದೆ. ಮೇ 31ರ ಒಳಗೆ ಈ ಪ್ರಕ್ರಿಯೆಯನ್ನು ಪೂರೈಸಲೇಬೇಕಾಗಿದೆ.

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದರ ಮೂಲಕ ಸುರಕ್ಷಿತ ನಂಬರ್ ಪ್ಲೇಟ್ ಅನ್ನು ವಾಹನಗಳಲ್ಲಿ ಬಳಸಿಕೊಳ್ಳುವಂತಹ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಯಾರು ಕೂಡ ನಕಲಿ ನಂಬರ್ ಪ್ಲೇಟ್ ಅನ್ನು ಬಳಸದೆ ಇರಲಿ ಎನ್ನುವ ರೀತಿಯಲ್ಲಿ ತಡೆಯೋದಕ್ಕಾಗಿ ಕೂಡ ಸರ್ಕಾರ ಮುಂದಾಗಿದೆ.

ಇಂತಹ ವಾಹನಗಳ ಮೇಲೆ ಇರಲಿದೆ HSRP ನಂಬರ್ ಪ್ಲೇಟ್ ರಿಯಾಯಿತಿ!

ಹೊಸದಾಗಿ ಖರೀದಿ ಮಾಡಲಾಗಿರುವಂತಹ ವಾಹನಗಳಿಗೆ ಆ ವಾಹನಗಳನ್ನು ಡೆಲಿವರಿ ಮಾಡುವ ಸಂದರ್ಭದಲ್ಲಿ ಶೋರೂಮ್ ಅವರೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿ ನಿಮಗೆ ಕಳುಹಿಸಿಕೊಡುತ್ತಾರೆ ಅನ್ನೋದು ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಇನ್ನು ಈ ಸಂದರ್ಭದಲ್ಲಿ ಕೆಲವೊಂದು ವಾಹನಗಳಿಗೆ ರಿಯಾಯಿತಿ ದೊರಕುವಂತಹ ಸಾಧ್ಯತೆ ಕೂಡ ಇದೆ ಎಂಬುದಾಗಿ ತಿಳಿದು ಬಂದಿದೆ.

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದಕ್ಕಾಗಿ ವೆಬ್ಸೈಟ್ನಲ್ಲಿ ಬೇರೆ ಬೇರೆ ಕಾರುಗಳ ಮಾಡೆಲ್ ಅನ್ನು ಆಯ್ಕೆಯ ರೀತಿಯಲ್ಲಿ ನೀಡಲಾಗಿದೆ. ಆದರೆ ಆಯ್ಕೆಯಲ್ಲಿ ಸಾಕಷ್ಟು ಕಾರುಗಳ ಹೆಸರು ಮಿಸ್ಸಿಂಗ್ ಆಗಿದ್ದು ಅವುಗಳಿಗೆ ರಿಯಾಯಿತಿ ಸಿಗಬಹುದು ಎಂಬುದಾಗಿ ತಿಳಿದು ಬಂದಿದೆ. cielo, Matiz, Hero Puch, ಸೇರಿದಂತೆ ಸಾಕಷ್ಟು ಹಳೆಯ ಮಾಡಲಿನ ಕಾರುಗಳು ಈ ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳೋದಕ್ಕೆ ಸಿಕ್ತಾ ಇಲ್ಲ ಅನ್ನೋದು ಜನರ ಕೂಗಾಗಿದೆ. HSRP ನಂಬರ್ ಪ್ಲೇಟ್ ಅನ್ನು ಈ ರೀತಿಯ ವಾಹನಗಳಿಗೆ ಪಡೆದುಕೊಳ್ಳುವುದು ಈಗ ಅಸಾಧ್ಯವೇ ಸರಿ ಎನ್ನುವ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ.

transport.karnataka.gov.in ಈ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬೇಕಾಗುತ್ತದೆ. ಆದರೆ ಈ ಸ್ಥಳದಲ್ಲಿ ಕೆಲವೊಂದು ವಾಹನಗಳ ಆಪ್ಷನ್ ಇಲ್ಲದೆ ಇರುವುದು ಆ ಗಾಡಿಯ ಮಾಲೀಕರಿಗೆ ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ಈ ವಿಚಾರವನ್ನು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕೂಡ ಮುಟ್ಟಿಸಲಾಗಿದೆ.

HSRP ನಂಬರ್ ಪ್ಲೇಟ್ ಅನ್ನು ಈ ವಾಹನಗಳಿಗೂ ಕೂಡ ಅಳವಡಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವಂತಹ ಕೋರಿಕೆಯನ್ನು ಸಲ್ಲಿಸಲಾಗಿದ್ದು ಮೇ 31 ಗಡುವು ಇರುವ ಕಾರಣದಿಂದಾಗಿ ಈ ವಿಚಾರದಲ್ಲಿ ಇಂತಹ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ರಿಯಾಯಿತಿ ಸಿಗಬಹುದು ಎಂಬುದಾಗಿ ಅನುಮಾನಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಈ ವಿಚಾರದ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.