JIO: ಜಿಯೋದಿಂದ ಭರ್ಜರಿ ಅನ್ಲಿಮಿಟೆಡ್ ಆಫರ್: ಇದನ್ನು ಹಾಕಿಸಿಕೊಂಡರೆ ಲೈಫು ಜಿಂಗಾಲಾಲ!

JIO: ಜಿಯೋ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಅಥವಾ ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದೇ ರೀತಿಯಲ್ಲಿ ಗ್ರಾಹಕರಿಗೆ ಇಷ್ಟ ಆಗುವ ರೀತಿಯಲ್ಲಿ ಹೊಸ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಕೂಡ ಜಿಯೋ ಸಂಸ್ಥೆ ಇನ್ನು ಜಿಯೋ ಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹಕರಿಗೆ ಜಿಯೋ ಸಂಸ್ಥೆಯ ಕಡೆಯಿಂದ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಲಾಗಿದ್ದು ವಿಶೇಷವಾಗಿ 15 ಓ ಟಿ ಟಿ ಪ್ಲಾಟ್ ಫಾರ್ಮ್ಗಳ ಉಚಿತ ಚಂದಾದಾರಿಕೆ ಈ ರೀಚಾರ್ಜ್ ಪ್ಲಾನ್ ಜೊತೆಗೆ ಸಿಗಲಿದೆ. ಹೌದು ನಾವ್ ಮಾತಾಡ್ತಿರೋದು 888 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಗ್ಗೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಜಿಯೋ ಸಂಸ್ಥೆ ಪರಿಚಯಿಸಿದ 888 ರೂಪಾಯಿಗಳ ರಿಚಾರ್ಜ್ ಪ್ಲಾನ್!

OTT ಪ್ರಿಯರಿಗಾಗಿಯೇ ಜಿಯೋ ಸಂಸ್ಥೆ 888 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನು ಪ್ರಾರಂಭ ಮಾಡಿದ್ದು 15 ಓ ಟಿ ಟಿ ಫ್ಲಾಟ್ ಫಾರಂ ಗಳ ಚಂದಾದಾರಿಕೆಯನ್ನು ನೀವು ಈ ರಿಚಾರ್ಜ್ ಪ್ಲಾನ್ ಮೂಲಕ ಪಡೆದುಕೊಳ್ಳಬಹುದು. ನೆಟ್ ಪ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ 15 ಒಟಿಪಿ ಪ್ಲಾಟ್ ಫಾರ್ಮ್ಗಳ ಚಂದಾದಾರಿಕೆ ನಿಮಗೆ ಸಿಗಲಿದ್ದು ಸಂಪೂರ್ಣ ಮನೋರಂಜನೆಯ ಪ್ಯಾಕೇಜ್ ನಿಮಗಾಗಿ ಕಾದಿದೆ ಎಂದು ಹೇಳಬಹುದಾಗಿದೆ. ಪೋಸ್ಟ್ ಪೇಡ್ ಯೋಜನೆಗಳನ್ನು ಆನಂದಿಸುವವರಿಗೆ ಇದೊಂದು ಪರ್ಫೆಕ್ಟ್ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದಾಗಿದೆ. ಎಲ್ಲಿ ಬೇಕಾದರೂ ಕೂಡ ತಮಗಿಷ್ಟವಾಗಿರುವಂತಹ ಮನರಂಜನೆ ಕಾರ್ಯಕ್ರಮಗಳನ್ನು ಈ ಓ ಟಿ ಟಿ ಪ್ಲಾಟ್ ಫಾರ್ಮ್ ಗಳಲ್ಲಿ ನೋಡಬಹುದಾಗಿದೆ.

ಈ ರಿಚಾರ್ಜ್ ಪ್ಲಾನ್ ಯಾವ ದಿನಾಂಕದವರೆಗೆ ಇರುತ್ತೆ?

ಸಂಸ್ಥೆ ತಿಳಿಸಿರುವ ಮಾಹಿತಿಯ ಪ್ರಕಾರ ಮೇ 31ರವರೆಗೆ ಈ ರಿಚಾರ್ಜ್ ಪ್ಲಾನ್ ಆಕ್ಟಿವ್ ಆಗಿರಲಿದೆ ಎಂಬುದಾಗಿ ತಿಳಿದು ಬಂದಿದೆ. ಜಿಯೋ ಫೈಬರ್ ಹಾಗೂ ಜಿಯೋ ಏರ್ ಫೈಬರ್ ನ ಅರ್ಹ ಗ್ರಾಹಕರು ಹೋಂ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ 50 ದಿನಗಳ ಕ್ರೆಡಿಟ್ ವೋಚರ್ ಕೂಡ ಪಡೆದುಕೊಳ್ಳಬಹುದಾಗಿದೆ.

ಈ ಚಂದದಾರಿಕೆ ಯಾರಿಗೆ ಸಿಗುತ್ತೆ?

ಈ ರಿಚಾರ್ಜ್ ಪ್ಲಾನ್ ಅನ್ನು ಯಾರೆಲ್ಲಾ ಹಾಕಿಸಿಕೊಳ್ಳುತ್ತಾರೋ ಅವರಿಗೆ ಮಾತ್ರ 15 ಓ ಟಿ ಟಿ ಪ್ಲಾಟ್ ಫಾರ್ಮ್ಗಳ ಚಂದದಾರಿಕೆಯನ್ನು ಪಡೆದುಕೊಳ್ಳುವ ಹಾಗೂ ಕಾರ್ಯಕ್ರಮಗಳನ್ನು ಆನಂದಿಸುವಂತಹ ಅವಕಾಶ ದೊರಕುತ್ತದೆ. 10-30mbps ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳುತ್ತಿರುವಂತಹ ಚಂದದಾರರು ಕೂಡ ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಪ್ರಿಪೇಯ್ಡ್ ಗ್ರಾಹಕರು ಕೂಡ ಈ ಪೋಸ್ಟ್ ಪೇಯ್ಡ್ ಯೋಜನೆಯನ್ನು ಆನಂದಿಸಲು ಪೋಸ್ಟ್ ಪೇಯ್ಡ್ ಗೆ ಕನ್ವರ್ಟ್ ಆಗಿ ಈ ರಿಚಾರ್ಜ್ ಪ್ಲಾನಿನ ಲಾಭವನ್ನು ಪಡೆದುಕೊಳ್ಳಬಹುದಾದ ಅವಕಾಶವನ್ನು ಜಿಯೋ ಸಂಸ್ಥೆ ಮಾಡಿಕೊಟ್ಟಿದೆ.

Comments are closed.