Phone Pay: ಸಾಕಷ್ಟು ಸಮಯಗಳಿಂದ ಫೋನ್ ಪೇ ಬಳಸ್ತಾ ಇದ್ದೀರಾ? ಸಂಸ್ಥೆ ನಿಮಗಾಗಿ ತಂದಿದೆ ನೋಡಿ ಸಿಹಿಸುದ್ದಿ!

Phone Pay: ಕಳೆದ ಹತ್ತು ವರ್ಷಗಳಲ್ಲಿ ಭಾರತ ದೇಶದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆನ್ಲೈನ್ ಪೇಮೆಂಟ್ ಫಾರ್ಮ್ಗಳಾಗಿರುವಂತಹ ಫೋನ್ ಪೇ ಹಾಗೂ ಗೂಗಲ್ ಪೇ ಗಳಂತಹ UPI ಪೇಮೆಂಟ್ ಅಪ್ಲಿಕೇಶನ್ ಗಳು ಸಾಕಷ್ಟು ವೇಗವಾಗಿ ಬೆಳೆದು ನಿಂತಿದ್ದು ಭಾರತೀಯ ಗ್ರಾಹಕರ ದಿನ ನಿತ್ಯದ ಹಣದ ಟ್ರಾನ್ಸಾಕ್ಷನ್ ಗಳಿಗೆ ಇವುಗಳು ಬೇಕಾಗಿರುವಂತಹ ಪ್ರಮುಖ ವಸ್ತುಗಳಾಗಿವೆ. ಈ ಅಪ್ಲಿಕೇಶನ್ ಗಳ ಮೂಲಕ ನೀವು ಕ್ಯಾಶ್ ಟ್ರಾನ್ಸಾಕ್ಷನ್ ಮಾಡುವ ಸಂದರ್ಭದಲ್ಲಿ ಸಿಗುವಂತಹ ಕ್ಯಾಶ್ ಬ್ಯಾಕ್ ಸೇರಿದಂತೆ ಇನ್ನಿತರ ಆಫರ್ ಗಳನ್ನು ಕೂಡ ನೀವು ನೋಡಿರಬಹುದಾಗಿದೆ. ಇನ್ನು ಇವತ್ತಿನ ಲೇಖನದಲ್ಲಿ ನಾವು ಫೋನ್ ಪೇ ಬಳಕೆದಾರರಿಗೆ ಕಂಪನಿ ತಂದಿರುವಂತಹ ಒಂದು ಸಿಹಿ ಸುದ್ದಿಯನ್ನು ಹೇಳೋದಕ್ಕೆ ಹೊರಟಿದ್ದೇವೆ.

ಫೋನ್ ಪೇ ಬಳಕೆದಾರರಿಗೆ ಕಂಪನಿಯಿಂದ ಗುಡ್ ನ್ಯೂಸ್!

ಅಕ್ಷಯ ತೃತೀಯದ ಕಾರಣದಿಂದಾಗಿ ಪ್ರತಿಯೊಬ್ಬರು ಕೂಡ ಈಗ ಫೋನ್ ಪೇ ಮೂಲಕ ಆಭರಣ ಖರೀದಿಯಲ್ಲಿ ಹಣದ ಪೇಮೆಂಟ್ ಮಾಡಿದ್ರಾ ಆ ಸಂದರ್ಭದಲ್ಲಿ ಕ್ಯಾಶ್ ಬ್ಯಾಕ್ ದೊರಕುವುದು ಶತಸಿದ್ಧವಾಗಿದೆ. ಈ ಆಫರ್ ಅನ್ನೋಮಿ 14ರ ವರೆಗೆ ಕೂಡ ಫೋನ್ ಪೇ ನಲ್ಲಿ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಅಂದರೆ ನಾಳೆವರೆಗೂ ಕೂಡ ನೀವು ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಆಭರಣವನ್ನು ಖರೀದಿ ಮಾಡುವಂತಹ ಆಭರಣ ಪ್ರಿಯರಿಗೆ ಈ ಆಫರ್ ಇನ್ನಷ್ಟು ಲಾಭದಾಯಕವಾಗಲಿ ಎನ್ನುವ ಕಾರಣಕ್ಕಾಗಿ ಫೋನ್ ಈ ರೀತಿ ನಿರ್ಧಾರವನ್ನು ತೆಗೆದುಕೊಂಡಿದೆ. 24 ಕ್ಯಾರೆಟ್ ಚಿನ್ನ ಖರೀದಿಯನ್ನು ಮಾಡಿದ್ರೆ ಅದರ ಮೇಲೆ ನಿಮಗೆ ರೂ.2000ಗಳವರೆಗೆ ಕ್ಯಾಶ್ ಬ್ಯಾಕ್ ದೊರಕಲಿದೆ. ಇದನ್ನು ಪ್ರತಿ ಚಿನ್ನದ ಖರೀದಿಯ ಮೇಲೆ ನೀಡಲಾಗುವುದಿಲ್ಲ ಕೇವಲ ಒಮ್ಮೆಗೆ ಮಾತ್ರ ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ನಾವು ಮಾತಾಡ್ತಾ ಇರೋದು ನಿಜವಾದ ಚಿನ್ನದ ಖರೀದಿ ಮೇಲೆ ಅಲ್ಲ ಬದಲಾಗಿ ಡಿಜಿಟಲ್ ಚಿನ್ನದ ಮೇಲೆ ನೀವು ಫೋನ್ ಅಪ್ಲಿಕೇಶನ್ ಬಳಸಿಕೊಂಡು ಹಣವನ್ನು ಹೂಡಿಕೆ ಮಾಡಿದಲ್ಲಿ ಮಾತ್ರ.

ನೀವು ನೇರವಾಗಿ ಚಿನ್ನದ ಅಂಗಡಿಗೆ ಹೋಗಿ ಚಿನ್ನ ಖರೀದಿ ಮಾಡಬೇಕಾಗಿಲ್ಲ ಫೋನ್ ಅಪ್ಲಿಕೇಶನ್ ನಲ್ಲಿ ಚಿನ್ನದ ಖರೀದಿಯಾ ಇನ್ವೆಸ್ಟ್ಮೆಂಟ್ ಯೋಜನೆಯ ಜಾರಿಗೆ ತರಲಾಗಿದ್ದು ಅಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಈ ಕ್ಯಾಶ್ಬ್ಯಾಕ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ರೀತಿ ಹಣವನ್ನು ಹುಡುಕಿ ಮಾಡುವುದರಿಂದ ಸಿಗುವಂತಹ ಕ್ಯಾಶ್ ಬ್ಯಾಕ್ ಮೂಲಕ ಗ್ರಾಹಕರು ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ಒಂದು ವೇಳೆ ನೀವು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡುವಂತಹ ಅವಶ್ಯಕತೆಯನ್ನು ಅಥವಾ ಆಸಕ್ತಿಯನ್ನು ಹೊಂದಿದ್ದರೆ ನೀವು ಕೂಡ ಹೂಡಿಕೆ ಮಾಡಬಹುದಾಗಿದೆ.

Comments are closed.