Ration Card: ಇಂಥವರ ಮನೆಗೆ ಹೋಗಿ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಿದೆ ಆಹಾರ ಇಲಾಖೆ?

Ration Card: ನಮ್ಮ ರಾಜ್ಯ ಸರ್ಕಾರದ ಅಧಿಕಾರ ಅವಧಿಯಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದ್ದು ಆ ಯೋಜನೆಗಳಿಗೆ ಬಹುತೇಕ ರೇಷನ್ ಕಾರ್ಡ್ ಅತ್ಯಂತ ಅಗತ್ಯವಾಗಿರುವಂತಹ ದಾಖಲೆ ಪತ್ರ ವಾಗಿದೆ. ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ರವರಿಗೆ ಅಂದರೆ ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಈಗಾಗಲೇ ಒದಗಿಸಲಾಗಿದ್ದು ಇಂತಹ ಜನರಿಗೆ ಅಂದರೆ ಬಹಳ ಜನರಿಗೆ ಬೇಕಾಗಿರುವಂತಹ ಅಗತ್ಯವಾದ ನೆರವುಗಳು ಸರ್ಕಾರದಿಂದ ಸಿಗಲಿ ಎನ್ನುವ ಕಾರಣಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಅವರಿಗೆ ನೀಡಲಾಗಿರುತ್ತದೆ. ಆದರೆ ಇಲ್ಲಿ ಬೇಸರ ಪಡಬೇಕಾಗಿರುವಂತಹ ಮತ್ತೊಂದು ವಿಚಾರ ಏನಂದ್ರೆ? ಇಂತಹ ಬಿಪಿಎಲ್ ರೇಷನ್ ಕಾರ್ಡ್ ಗಳು ಸಿಗಬೇಕಾಗಿರುವಂತಹ ಜನರಿಗೆ ಸಿಕ್ತಾ ಇಲ್ಲ ಬದಲಾಗಿ ಅನರ್ಹರಾಗಿರುವವರು ಹೆಚ್ಚಾಗಿ ಇದನ್ನು ಪಡೆದುಕೊಂಡು ಸರ್ಕಾರದಿಂದ ಸಿಗುತ್ತಿರುವ ಲಾಭವನ್ನು ತಾವು ಬಳಸಿಕೊಳ್ಳುತ್ತಿದ್ದಾರೆ.

ಈ ರೀತಿ ಇರುವವರ ರೇಷನ್ ಕಾರ್ಡ್ ಕ್ಯಾನ್ಸಲ್!

ಕೇವಲ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವಂತಹ ಜನರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವಂತಹ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಪ್ರಾರಂಭವಾಗಿದ್ದು ಆಹಾರ ಇಲಾಖೆ ಅಧಿಕಾರಿಗಳಿಂದ ಈ ವಿಚಾರದಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈ ತೆಗೆದುಕೊಳ್ಳುವಂತಹ ಸಾಧ್ಯತೆ ಇದ್ದು ಇದರ ಹುಡುಕಾಟವನ್ನು ಕೂಡ ಅವರು ಖುದ್ದಾಗಿ ನಡೆಸುತ್ತಿದ್ದಾರೆ. ಈಗಾಗಲೇ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ರೀತಿಯ ಅಭಿಯಾನದಲ್ಲಿ ಈಗಾಗಲೇ 35,000ಕ್ಕೂ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಆದಾಯ ಹೆಚ್ಚಾಗಿದ್ದರೂ ಹಾಗೂ ಬಡತನದ ರೇಖೆಗಿಂತ ಮೇಲೆ ಕೂಡ ಕೆಲವರು ಬಿಪಿಎಲ್ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಂಥವರಿಗೂ ಕೂಡ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡುವುದಕ್ಕಿಂತ ಮುಂಚೆ ಅವರ ಸ್ಥಿತಿಗತಿಗಳನ್ನು ಪರಿಶೀಲಿಸಿ ನಂತರ ಅವರಿಗೆ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಬೇಕು ಇಲ್ವಾ ಅನ್ನೋದನ್ನ ನಿರ್ಧರಿಸಿ ನಂತರ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿಯೂ ಕೂಡ ಸಾಕಷ್ಟು ಬಿಪಿಎಲ್ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಿರುವುದನ್ನು ಕೂಡ ನಾವು ಕಾಣಬಹುದಾಗಿದೆ.

ಇಂಥವರಿಗೆ ಸಿಗೋದಿಲ್ಲ ಬಿಪಿಎಲ್ ರೇಷನ್ ಕಾರ್ಡ್!

  • ವಾರ್ಷಿಕ ಆದಾಯ 2 ಅಂಥವರಿಗೆ ಸಿಗೋದಿಲ್ಲ. ಒಂದು ವೇಳೆ ವೈಟ್ ಬೋರ್ಡ್ ಕಾರ್ ಅನ್ನು ಅವರು ಹೊಂದಿದ್ದರೆ ಅವರಿಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಲು ಸಾಧ್ಯವಿಲ್ಲ.
  • ಒಂದು ವೇಳೆ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಬಂದಿದ್ದು ಅವರ ಮನೆಯಲ್ಲಿ ಯಾರಾದರೂ ಸರ್ಕಾರಿ ಕೆಲಸಕ್ಕೆ ಹೋಗುವವರಿದ್ರೆ ನಿಮ್ಮ ಬಿಪಿಎಲ್ ರೇಷನ್ ಕ್ಯಾನ್ಸಲ್ ಆಗಲಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
  • ಇನ್ಕಮ್ ಟ್ಯಾಕ್ಸ್ ಅನ್ನು ಕಟ್ಟುವವರು ಹಾಗೂ ಹೆಚ್ಚಿನ ಜಮೀನು ಹಾಗೂ ಪ್ರಾಪರ್ಟಿಯನ್ನು ಹೊಂದಿರುವವರು ಕೂಡ ಇದೇ ಸಾಲಿಗೆ ಸೇರಿಕೊಳ್ಳುತ್ತಾರೆ ಹಾಗೂ ಅವರಿಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಸಿಗೋದಿಲ್ಲ.

Comments are closed.