Kannada Serial: ತೆಲುಗುವಿನಲ್ಲೂ ಮಿಂಚಲು ಹೊರಟ ಲಕ್ಷ್ಮೀ ಬಾರಮ್ಮ ಖ್ಯಾತಿಯ ಭೂಮಿಕಾ ರಮೇಶ್! ಕನ್ನಡ ಬಿಟ್ರಾ ಅಂದ ಅಭಿಮಾನಿಗಳು!

Kannada Serial: ಕೇವಲ ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡುತ್ತಿರುವಂತಹ ಕಲಾವಿದರು ಮಾತ್ರ ಬೇರೆ ಭಾಷೆಗಳಲ್ಲಿ ಹೋಗಿ ನಟನೆ ಮಾಡ್ತಾ ಇಲ್ಲ ಬದಲಾಗಿ ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸಿರುವ ಅಂತಹ ನಟ ನಟಿಯರು ಕೂಡ ಈ ರೀತಿಯ ಸಾಧನೆಯನ್ನು ಈಗ ಮಾಡುತ್ತಿದ್ದಾರೆ. ಹೌದು ನಾವ್ ಮಾತಾಡ್ತಿರೋದು ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟಿಸಿರುವಂತಹ ಭೂಮಿಕ ರಮೇಶ್ ಅವರ ಬಗ್ಗೆ. ಹೌದು ತೆಲುಗಿನಲ್ಲಿ ಪ್ರಸಾದ ಕಾಣುತ್ತಿರುವಂತಹ ಮೇಘ ಸಂದೇಶ ಎನ್ನುವಂತಹ ಧಾರವಾಹಿಯಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದಾರೆ.

ಧಾರವಾಹಿ ಕಥೆ ಏನು?

ಮೇಘ ಸಂದೇಶ ಧಾರವಾಹಿಯ ರೂಮು ಈಗಾಗಲೇ ಬಿಡುಗಡೆಯಾಗಿದ್ದು ಅಭಿನವ್ ಹಾಗೂ ಭೂಮಿಕಾ ರಮೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ತಂದೆ ತಾಯಿ ಹಾಗೂ ಪ್ರೀತಿಸಿದ ಮಗಳು ಎನ್ನುವಂತಹ ವಿಚಾರವನ್ನು ಈ ಕಥೆಯ ಮುನ್ಸೂಚನೆಯ ರೂಪದಲ್ಲಿ ನೀಡಲಾಗಿದೆ.

ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಲಕ್ಷ್ಮಿ ಪಾತ್ರ ಇವರನ್ನ ಎಲ್ಲಾ ಪ್ರೇಕ್ಷಕರು ಇಷ್ಟಪಡುವ ಹಾಗೆ ಮಾಡಿರುವುದು. ಇನ್ನು ಇವರ ಜೊತೆಗೆ ತೆಲುಗು ಧಾರವಾಹಿಯಲ್ಲಿ ನಟಿಸುತ್ತಿರುವಂತಹ ಅಭಿನವ್ ಕೂಡ ತ್ರಿಪುರ ಸುಂದರಿ ಕನ್ನಡ ಧಾರವಾಹಿಯಲ್ಲಿ ನಟಿಸಿದ್ದರು. ಇಬ್ಬರು ಕನ್ನಡ ಕಿರುತೆರೆಯ ಕಲಾವಿದರು ತೆಲುಗು ಭಾಷೆಯ ಕಿರುತೆರೆಯಲ್ಲಿ ಮಿಂಚುವುದಕ್ಕೆ ರೆಡಿಯಾಗಿರುವುದು ನಿಜಕ್ಕೂ ಕೂಡ ನಮ್ಮೆಲ್ಲರಿಗೂ ಹೆಮ್ಮೆ ಅಂತ ಅನಿಸುತ್ತದೆ. ಈಗಾಗಲೇ ಕಿರುತೆರೆಯ ವಿಚಾರಕ್ಕೆ ಬಂದರೆ ಬೇರೆ ಭಾಷೆಗಳಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಭಾಷೆಯಲ್ಲಿ ನಟಿಸಿರುವಂತಹ ಹಲವಾರು ಕನ್ನಡದ ಕಲಾವಿದರನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಭೂಮಿ ಶೆಟ್ಟಿ, ದೀಪ್ತಿ ಮಾನೆ, ಶರ್ಮಿತ ಗೌಡ, ಭವ್ಯ ಗೌಡ ಚಂದ್ರು, ಬಿ ಗೌಡ ಸೇರಿದಂತೆ ಸಾಕಷ್ಟು ಕಲಾವಿದರನ್ನು ಕಾಣಬಹುದಾಗಿದೆ. ಇವ್ರು ಕನ್ನಡ ಹಾಗೂ ತೆಲುಗು ಎರಡು ಕಿರುತೆರೆಯಲ್ಲಿ ಕೂಡ ತಿಂಗಳಿನ ಎರಡು ಭಾಗವನ್ನು ಮಾಡಿ ಕೆಲಸ ಮಾಡುತ್ತಾರೆ.

ಭೂಮಿಕ ರಮೇಶ್ ರವರು ದೊರೆಸಾನಿ ಧಾರವಾಹಿಗೆ ಕೂಡ ಆಡಿಶನ್ ನೀಡಿದ್ರು ಅನ್ನುವದಾಗಿ ತಿಳಿದು ಬಂದಿದ್ದು ಆ ಸಂದರ್ಭದಲ್ಲಿ ಅವರು ಚಿಕ್ಕವರು ಅಂತ ಅವರಿಗೆ ಅವಕಾಶವನ್ನು ನೀಡಿರಲಿಲ್ಲ. ನಂತರ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು ಅನ್ನೋದನ್ನ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಭೂಮಿಕ ರಮೇಶ್ ಎಂಟನೇ ತರಗತಿಯಲ್ಲಿ ಇದ್ದಾಗ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಭರತನಾಟ್ಯ ಹಾಗೂ ವೆಸ್ಟರ್ನ್ ಡ್ಯಾನ್ಸ್ ನಲ್ಲಿ ಭೂಮಿಕ ರಮೇಶ್ ಸಾಕಷ್ಟು ಪ್ರಾವೀಣ್ಯತೆಯನ್ನು ಹೊಂದಿದ್ದಾರೆ ಅನ್ನೋದನ್ನ ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಬೇರೆ ಭಾಷೆಯ ಕಿರುತೆರೆಯಲ್ಲಿ ಅವಕಾಶವನ್ನು ಪಡೆದುಕೊಂಡಿರುವಂತಹ ಭೂಮಿಕಾ ರಮೇಶ್ ಮುಂದಿನ ದಿನಗಳಲ್ಲಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಅವಕಾಶ ಪಡೆದರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಬಹುದಾಗಿದೆ.

Comments are closed.