Kannada Serial: ‘ಲಕ್ಷ್ಮಿ ನಿವಾಸ’ ದ ಸೈಕೋ ಜಯಂತ್, ನಿಜಜೀವ್ನದಲ್ಲಿ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ!

Kannada Serial: ಇತ್ತೀಚಿನ ದಿನಗಳಲ್ಲಿ ಕಿರುತೆರೆ ವೀಕ್ಷಕರ ಫೇವರೆಟ್ ಧಾರವಾಹಿಗಳಲ್ಲಿ ಒಂದಾಗಿರುವಂತಹ ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಜಯಂತ್ ಎನ್ನುವಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ದೀಪಕ್ ಸುಬ್ರಮಣ್ಯ ಈಗ ಈ ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಅವರು ಸೈಕೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಕೂಡ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳ ಮನಸ್ಸನ್ನ ಗೆಲ್ಲುವುದಕ್ಕೆ ಯಶಸ್ವಿಯಾಗಿದ್ದಾರೆ. ದೀಪಕ್ ಸುಬ್ರಹ್ಮಣ್ಯ ಯಾವ ರೀತಿಯ ಪಾತ್ರವನ್ನು ಕೂಡ ಮಾಡ್ತಾರೆ ಅನ್ನೋದಕ್ಕೆ ಈ ಹಿಂದೆ ದಾಸ ಪುರಂದರ ಧಾರವಾಹಿಯಲ್ಲಿ ಪುರಂದರದ ಪಾತ್ರವನ್ನು ಅವರು ನಿರ್ವಹಿಸಿರುವ ರೀತಿ ಅವರೊಬ್ಬ ವರ್ಷ ಟೈಲ್ ಕಲಾವಿದನದಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಸಾಬೀತುಪಡಿಸುತ್ತದೆ.

ದೀಪಕ್ ಸುಬ್ರಮಣ್ಯ ಅವರ ಶಿಕ್ಷಣ ಹಾಗೂ ಇನ್ನಿತರ ಮಾಹಿತಿ!

ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಅವರ ಎಜುಕೇಶನ್ ಕೂಡ ಸಾಕಷ್ಟು ಹೈ ಲೆವೆಲ್ ನಲ್ಲಿದೆ. ಮುಂಬೈನಲ್ಲಿರುವಂತಹ ವಿಟಿಯು ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರಿಂಗ್ನಲ್ಲಿ ಓದಿದ್ದಾರೆ ಅನ್ನದಾಗಿ ತಿಳಿದುಬರುತ್ತೆ. ಇದರ ಜೊತೆಗೆ ಬೆಂಗಳೂರಿನ ಮೂಲದ ಕಂಪನಿ ಆಗಿರುವಂತಹ ಫ್ಲಿಪ್ಕಾರ್ಟ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕಾರ್ಯವನ್ನು ನಿರ್ವಹಿಸಿದ್ದಾರೆ ಅನ್ನೋದು ಕೂಡ ತಿಳಿದು ಬಂದಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವಂತಹ ಅದ್ಭುತ ಕಲಾವಿದ ದೀಪಕ್ ಸುಬ್ರಮಣ್ಯ.

ನಾರ್ತ್ ಅಮೇರಿಕ ಅಟ್ ಸಾಕಾ ಟೆಕ್ ಇನ್ಫಾರ್ಮಶನ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕೂಡ ಸೇಲ್ಸ್ ಮ್ಯಾನೇಜರ್ ಆಗಿ ದೀಪಕ್ ಸುಬ್ರಮಣ್ಯ ಕೆಲಸವನ್ನು ಮಾಡಿರುವುದು ತಿಳಿದು ಬರುತ್ತದೆ. ಈಗಾಗಲೇ ನಟ ಹಾಗೂ ನಿರ್ಮಾಪಕನಾಗಿ ಕೊಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿರುವಂತಹ ದೀಪಕ್ ಸುಬ್ರಹ್ಮಣ್ಯ ಅವರಿಗೆ ಆದಷ್ಟು ಒಳ್ಳೆಯ ಪಾತ್ರಗಳನ್ನು ನಟಿಸುವುದಕ್ಕೆ ತುಂಬಾನೇ ಆಸೆ.

2017ರಲ್ಲಿ ಬಿಡುಗಡೆ ಆಗಿರುವಂತಹ ಶುದ್ದಿ ಸಿನಿಮಾದಲ್ಲಿ ಕೂಡ ಇವರು ನಟಿಸಿದ್ದಾರೆ ಅನ್ನುವುದಾಗಿ ತಿಳಿದುಬರುತ್ತೆ. ಸಾರಾಂಶ, ಹೊಸ ದಿನಾಚರಿ, ಅಂಬುಜಗಳಂತ ಸಿನಿಮಾಗಳಲ್ಲಿ ಕೂಡ ದೀಪಕ್ ಸುಬ್ರಮಣ್ಯ ಅವರ ಹೆಸರು ಕೇಳಿ ಬರುತ್ತೆ. ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನೆಯನ್ನು ನೀಡುವುದರಲ್ಲಿ ದೀಪಕ್ ಸುಬ್ರಹ್ಮಣ್ಯ ಈ ಎಲ್ಲಾ ಸಿನಿಮಾಗಳು ಹೇಳುತ್ತವೆ. ದೀಪಕ್ ಸುಬ್ರಮಣ್ಯ ಅವರಂತಹ ಕಿರುತೆರೆ ಕಲಾವಿದರು ಅಪರೂಪಕ್ಕೆ ಸಿಕ್ತಾರೆ. ಕೇವಲ ಸಿನಿಮಾ ನಟರು ಮಾತ್ರವಲ್ಲದೆ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವಂತಹ ಕಲಾವಿದರು ಕೂಡ ಯಾವುದೇ ಪಾತ್ರವನ್ನು ನೀಡಿದ್ರು ಅದಕ್ಕೆ ಪರಕಾಯ ಪ್ರವೇಶ ಮಾಡಿದವರಂತೆ ನಟಿಸುವುದಕ್ಕೆ ಯಶಸ್ವಿಯಾಗಿದ್ದಾರೆ ಅನ್ನೋದಕ್ಕೆ ಖಂಡಿತವಾಗಿ ದೀಪಕ್ ಸುಬ್ರಹ್ಮಣ್ಯ ಒಂದೊಳ್ಳೆ ಉದಾಹರಣೆ ಎಂದು ಹೇಳಬಹುದಾಗಿದೆ. ಇದೇ ರೀತಿಯ ಇನ್ನಷ್ಟು ಸಿನಿಮಾಗಳ ಅವಕಾಶಗಳು ದೀಪಕ್ ಸುಬ್ರಹ್ಮಣ್ಯ ಅವರಿಗೆ ಸಿಗಲಿ ಎಂಬುದಾಗಿ ಆಶಿಸೋಣ.

Comments are closed.