JIO OTT: ಜಿಯೋ ಸಂಸ್ಥೆಯಿಂದ ಓ ಟಿ ಟಿ ಗ್ರಾಹಕರಿಗೆ ಸಿಕ್ತು ನೋಡಿ ಬಿಗ್ ಗುಡ್ ನ್ಯೂಸ್; ಒಂದು ವರ್ಷ ಉಚಿತ ಸೇವೆ!

JIO OTT: ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ಯಶಸ್ಸು ಹಾಗೂ ಗ್ರಾಹಕರನ್ನು ಹೊಂದಿರುವಂತಹ ಕಂಪನಿ ಅಂದ್ರೆ ಅದು ಮುಕೇಶ್ ಅಂಬಾನಿ ಅವರ ಒಡೆತನದಲ್ಲಿ ಇರುವಂತಹ ಜಿಯೋ ಸಂಸ್ಥೆ. ಆರಂಭದಲ್ಲಿ ಉಚಿತ ಟೆಲಿಕಾಂ ಸೇವೆಯನ್ನು ಒದಗಿಸಿದಂತಹ ಈ ಕಂಪನಿ ನಂತರ ಕಡಿಮೆ ಬೆಲೆಗೆ ಯಾವ ರೀತಿಯಲ್ಲಿ ಉತ್ಕೃಷ್ಟವಾದ ಟೆಲಿಕಾಂ ಸೇವೆಯನ್ನು ನೆಟ್ವರ್ಕ್ ಗಳನ್ನು ಒದಗಿಸಬಹುದು ಎನ್ನುವುದನ್ನ ಭಾರತದ ಟೆಲಿಕಾಂ ಇಂಡಸ್ಟ್ರಿಗೆ ಸಾಧಿಸಿ ತೋರಿಸಿದೆ. ಅದೇ ರೀತಿಯಲ್ಲಿ ಈಗ ಹೊಸದಾಗಿ ಓಟಿಟಿ ಗ್ರಾಹಕರಿಗೆ ಜಾರಿಗೆ ತಂದಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೀಯೋದ ಹೊಸ ಓಟಿಟಿ ರಿಚಾರ್ಜ್ ಪ್ಲಾನ್!

ನಮ್ಮ ಭಾರತ ದೇಶದಲ್ಲಿ ಲಾಕ್ಡೌನ್ ನಂತರದಿಂದ ಓ ಟಿ ಟಿ ಪ್ಲಾಟ್ ಫಾರ್ಮ್ ಗಳಲ್ಲಿ ಮನೆಯಲ್ಲಿ ಕುಳಿತುಕೊಂಡು ಸಿನಿಮಾಗಳನ್ನು ಹಾಗೂ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡುವ ಜನಸಂಖ್ಯೆ ಹೆಚ್ಚಾಗಿದೆ. ಇನ್ನು ಟೆಲಿಕಾಂ ಕಂಪನಿಗಳು ಕೂಡ ಈ ರೀತಿ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಬೇಕಾಗಿರುವ ರಿಚಾರ್ಜ್ ಪ್ಲಾನ್ ಅನ್ನು ಲಾಂಚ್ ಮಾಡೋದ್ರಲ್ಲಿ ಎತ್ತಿದ ಕೈ. ಜಿಯೋ ಸಂಸ್ಥೆ ಕೂಡ ಇಲ್ಲಿ ಹಿಂದೆ ಬಿದ್ದಿಲ್ಲ.

ಇನ್ನು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ನೋಡುವಂತಹ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಕೂಡ ಒಂದಾಗಿದೆ. ಇದಕ್ಕೆ ಪ್ರಮುಖವಾದ ಕಾರಣ ಸಾಕಷ್ಟು ಹೆಚ್ಚಿನ ಭಾರತೀಯ ಕಾರ್ಯಕ್ರಮಗಳು ಈ ಪ್ಲಾಟ್ ಫಾರ್ಮ್ ನಲ್ಲಿ ನಿಮಗೆ ಸಿಗುತ್ತವೆ. ಇದೇ ಕಾರಣಕ್ಕಾಗಿ ಜಿಯೋ ಸಂಸ್ಥೆ ಈ ಪ್ಲಾಟ್ ಫಾರ್ಮ್ ಮೇಲೆ ಆಫರ್ ನಡೀತಾ ಇರೋದು.

ಅನ್ಲಿಮಿಟೆಡ್ 5ಜಿ ಸರ್ವಿಸ್!

ಇತ್ತೀಚಿನ ದಿನಗಳಲ್ಲಿ ಹೊಸ ಸಿಮ್ ಕಾರ್ಡ್ ಗಳಿಗೆ ಜಿಯೋ ನಲ್ಲಿ 5G ಸೇವೆಯನ್ನು ನೀಡ್ತಾ ಇದ್ದು ಈ ಸಮಯದಲ್ಲಿ ನೀವು
ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇವೆಯನ್ನು ಪಡೆದುಕೊಳ್ಳುವುದರ ಮೂಲಕ ಅನ್ಲಿಮಿಟೆಡ್ ಇಂಟರ್ನೆಟ್ ನಲ್ಲಿ ಕಾರ್ಯಕ್ರಮಗಳನ್ನು ಎಂಜಾಯ್ ಮಾಡಬಹುದಾಗಿದೆ. ಇದರ ಜೊತೆಗೆ ಜಿಯೋ ನೆಟ್ವರ್ಕ್ ನ ಸಾಕಷ್ಟು ಅಪ್ಲಿಕೇಶನ್ ಗಳ ಚಂದಾದಾರಿಕೆ ಕೂಡ ದೊರಕಲಿದೆ.

ಇದಕ್ಕಾಗಿ ನೀವು 598 ರೂಪಾಯಿಗಳ ರಿಚಾರ್ಜ್ ಮಾಡಬೇಕಾಗಿರುತ್ತದೆ. 28 ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿ ದಿನ ಎರಡು ಜಿಬಿ ಇಂಟರ್ನೆಟ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ 100 ಮೆಸೇಜ್ ಗಳನ್ನು ಕೂಡ ಉಚಿತವಾಗಿ ಮಾಡಬಹುದಾಗಿದ್ದು ಒಂದು ವರ್ಷದ ಉಚಿತ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದದಾರಿಕೆಯನ್ನು ನೀವು ಪಡೆದುಕೊಳ್ಳಲಿದ್ದೀರಿ.

Comments are closed.