TVS iQube: 140 ಕಿ.ಮಿ ರೇಂಜ್ ನೀಡಬಲ್ಲ ಈ ಸ್ಟೂತರ್ ಬೆಲೆಯಲ್ಲಿ ಬರೋಬ್ಬರಿ 32,000 ರೂ. ಇಳಿಕೆ; ಬುಕ್ಕಿಂಗ್ ಬೇಗ ಮಾಡ್ಕೊಳ್ಳಿ!

TVS iQube: ದ್ವಿಚಕ್ರ ವಾಹನಗಳ ವಿಚಾರಕ್ಕೆ ಬರುವುದಾದರೆ ಭಾರತ ದೇಶದಲ್ಲಿ ಟಿವಿಎಸ್ ಅತ್ಯಂತ ನಂಬಿಕಸ್ಥ ಹಾಗೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವಂತಹ ಕಂಪನಿಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ಮಾತನಾಡೋಕೆ ಹೊರಟಿರೋದು ಟಿವಿಎಸ್ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ TVS iQube ಬಗ್ಗೆ. ಇದರ ಬೆಲೆ ರೂ.32,000ಗಳವರೆಗೆ ಕಡಿಮೆಯಾಗಿದೆ.

TVS iQube ಎಲೆಕ್ಟ್ರಿಕ್ ಸ್ಕೂಟರ್ ನ ಸಂಪೂರ್ಣ ಮಾಹಿತಿ!

TVS iQube ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಂಡುಬಂದಿರುವ ಅಂತಹ ಮತ್ತೊಂದು ಬದಲಾವಣೆ ಕೇವಲ ಇದು 3 ಗಂಟೆ ಒಳಗೆ ಫುಲ್ ಚಾರ್ಜ್ ಆಗುತ್ತದೆ. 135 kmಗಳಿಗಿಂತಲೂ ಹೆಚ್ಚಿನ ರೇಂಜ್ ಅನ್ನು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. 3.08 ಲಿಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಿರುವ ಕಾರಣದಿಂದಾಗಿ 130 ರಿಂದ 140 ಕಿಲೋಮೀಟರ್ಗಳ ವರೆಗೆ ಕೂಡ ನೀವು ರೇಂಜ್ ಅನ್ನು ನೀರಿಕ್ಷೆ ಮಾಡಬಹುದಾಗಿದೆ.

ಅತ್ಯಂತ ಕಡಿಮೆ ಸಮಯದಲ್ಲಿ ಚಾರ್ಜ್ ಆಗುವ ಕಾರಣದಿಂದಾಗಿ ಕೂಡ ಇದು ಗ್ರಾಹಕರಿಗೆ ಇನ್ನಷ್ಟು ಉತ್ತಮವಾಗಿರುತ್ತದೆ. 45ಕ್ಕೂ ಅಧಿಕ ಫೀಚರ್ ಅನ್ನು ನೀವು TVS iQube ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. ಕನೆಕ್ಟೆಡ್ ಫ್ಯೂಚರ್ ಗಳನ್ನು ಕೂಡ ಇದರಲ್ಲಿ ಬಳಸಿಕೊಳ್ಳಲಾಗಿದೆ. ಮೂರು ರೀಡಿಂಗ್ ಮೋಡ್ ಗಳನ್ನು ಕೂಡ ಇದರಲ್ಲಿ ಕಾಣಬಹುದಾಗಿದೆ. ಟಿ ಎಫ್ ಟಿ ಟಚ್ ಸ್ಕ್ರೀನ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅಲ್ಲಿ ಕಾಣಬಹುದಾಗಿದೆ.

TVS iQube ಎಲೆಕ್ಟ್ರಿಕ್ ಸ್ಕೂಟರ್ ನ ಹೊಸಬೆಲೆ ಏನು?

TVS iQube ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಈಗಾಗಲೇ 32 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಈ ಹಿಂದೆ ಈ ಎಲೆಕ್ಟ್ರಿಕ್ ಸ್ಕೂಟರ್ 1.31 ಲಕ್ಷಗಳ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ರಿಯಾಯಿತಿಯ ನಂತರ 99,000 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಸದ್ಯದ ಮಟ್ಟಿಗೆ ಭಾರತದಲ್ಲಿ ಇರುವಂತಹ ಬೇರೆ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ ಟಿವಿಎಸ್ ಸಂಸ್ಥೆಯ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಹೊಂದಿದರು ಕೂಡ ಅತ್ಯಂತ ಕಡಿಮೆ ಬೆಲೆಗೆ ಸಿಗ್ತಾ ಇದೆ ಅನ್ನೋದು ವಿಶೇಷವಾಗಿದೆ. ಒಂದು ವೇಳೆ ನೀವು ಇದನ್ನು ಖರೀದಿಸುವಂತಹ ಯೋಚನೆಯನ್ನು ಮಾಡಿಕೊಂಡಿದ್ದಾರೆ ನಿಮ್ಮ ಹತ್ತಿರದಲ್ಲಿರುವಂತಹ ಟಿವಿಎಸ್ ಶೋರೂಮ್ ಗೆ ಹೋಗಿ ಶೋರೂಮ್ ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ನೀವು ಈ ದ್ವಿಚಕ್ರ ವಾಹನವನ್ನು ಖರೀದಿ ಮಾಡಬಹುದಾಗಿದೆ.

Comments are closed.