Citroen C5 Aircross: ಇಷ್ಟ್ ಒಳ್ಳೆ ಕಾರಾಗಿದ್ರು ಕೂಡ ಯಾರು ಖರೀದಿಸುತ್ತಿಲ್ಲ; ಮಾರಾಟ ಆಗಿರೋದು ಒಂದೇ ಒಂದು ಯೂನಿಟ್! ಕಾರಣ ಏನ್ ಗೊತ್ತಾ?

Citroen C5 Aircross: ನಮ್ಮ ಭಾರತ ದೇಶ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಇಡೀ ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ದೇಶವಾಗಿ ಕಾಣಿಸಿಕೊಳ್ಳುತ್ತಿದೆ ಹಾಗೂ ದೊಡ್ಡ ಮಾರುಕಟ್ಟೆಯ ವಿಚಾರಕ್ಕೆ ಬಂದರೆ ಭಾರತ ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕಾಗಿ ಕೇವಲ ಭಾರತದ ಕಂಪನಿಗಳು ಮಾತ್ರವಲ್ಲದೆ ವಿದೇಶಿ ಕಂಪನಿಗಳು ಕೂಡ ಭಾರತಕ್ಕೆ ಬಂದು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡು ಯಶಸ್ವಿಯಾಗಿವೆ.

ಆದರೆ ಇಲ್ಲೊಂದು ಕಾರು ಮಾತ್ರ ಭಾರತ ದೇಶದಲ್ಲಿ ಲಾಂಚ್ ಆಗಿದ್ರು ಕೂಡ ಯಾವುದೇ ಉತ್ತಮ ಸೇಲ್ ಪಡೆದುಕೊಳ್ಳುತ್ತಿಲ್ಲ. ಹೌದು ನಾವ್ ಮಾತಾಡ್ತಿರೋದು ಫ್ರೆಂಚ್ ಮೂಲದ ಕಂಪನಿ ಆಗಿರುವಂತಹ ಸಿಟ್ರನ್ ಕುರಿತಂತೆ. Citroen C5 Aircross ಭಾರತ ದೇಶದಲ್ಲಿ ಲಾಂಚ್ ಆಗಿದ್ರು ಕೂಡ ಯಾವುದೇ ಮಾರಾಟವನ್ನು ಕಾಣುತ್ತಿಲ್ಲ ಎನ್ನುವುದಾಗಿ ತಿಳಿದು ಬಂದಿದೆ. ಕಳೆದ ಆರು ತಿಂಗಳಲ್ಲಿ ಈ ಕಾರು ಮಾರಾಟ ಆಗಿರೋದು ಕೇವಲ ಐದು ಮಾತ್ರ. ಕೆಲವು ತಿಂಗಳಲ್ಲಿ ಒಂದು ಕಾರು ಕೂಡ ಮಾರಾಟ ಆಗದೆ ಇರುವ ರೆಕಾರ್ಡನ್ನು ಕೂಡ ನೀವು ನೋಡಬಹುದಾಗಿದೆ.

Citroen C5 Aircross ಕಾರಿನ ಕಳಪೆ ಮಾರಾಟ!

2024ರ ಜನವರಿ ತಿಂಗಳಲ್ಲಿ Citroen C5 Aircross ಕಾರಿನ ಮಾರಾಟವನ್ನು ನೋಡುವುದಾದರೆ ಕೇವಲ ಒಂದು ಕಾರು ಮಾತ್ರ ಮಾರಾಟ ಆಗಿರುವುದು ಕಂಡುಬರುತ್ತದೆ. ಇನ್ನು ಫೆಬ್ರವರಿ ಮಾರ್ಚ್ ತಿಂಗಳ ಸಂದರ್ಭದಲ್ಲಿ ಒಂದೇ ಒಂದು ಕಾರನ್ನು ಕೂಡ ಇದು ಮಾರಾಟ ಮಾಡಿಲ್ಲ ಅನ್ನೋದಾಗಿ ತಿಳಿದು ಬಂದಿದೆ. ಬಿಡುಗಡೆ ಆದಾಗಿನಿಂದಲೂ ಇದುವರೆಗೂ ಕೇವಲ 404 ಕಾರುಗಳನ್ನು ಮಾರಾಟ ಮಾಡಿರುವಂತಹ ಹಿಸ್ಟರಿಯನ್ನ್ನು ಇದು ಹೊಂದಿದೆ.

Citroen C5 Aircross ಕಾರಿನಲ್ಲಿರುವ ಸ್ಪೆಷಾಲಿಟಿ!

12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಎಂಟು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್, ಪಾನೋರಮಿಕ್ ಸನ್ರೂಫ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಎ ಸಿ ವೆಂಟ್ಸ್ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಹಿಂಬದಿಯ ಸೀಟಿಂಗ್ನಲ್ಲಿ ಮೂರು ಜನರು ಆರಾಮವಾಗಿ ಕೂತ್ಕೋಬಹುದು. ಬೂಟ್ ಸ್ಪೇಸ್ ವಿಚಾರಕ್ಕೆ ಬರೋದಾದ್ರೆ 580 ರಿಂದ 720 ಲೀಟರ್ ಇದೆ. 2.0 ಲೀ ಡೀಸೆಲ್ ಇಂಜಿನ್ ಅಳವಡಿಸಲಾಗಿದೆ. ಎಂಟು ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಗಳನ್ನು ನೀವು ಟ್ರಾನ್ಸ್ ಮಿಷನ್ ರೂಪದಲ್ಲಿ ಇಲ್ಲಿ ಕಾಣಬಹುದಾಗಿದೆ.

Citroen C5 Aircross ಕಾರ್ ಫೇಲ್ ಆಗೋದಕ್ಕೆ ಕಾರಣ ಏನು?

ಈ ಕಾರನ್ನು ನೀವು ಖರೀದಿ ಮಾಡಬೇಕು ಅಂತ ಅಂದ್ರೆ 36 ರಿಂದ 37 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯ ನಡುವೆ ಇವುಗಳನ್ನು ಖರೀದಿ ಮಾಡಬೇಕಾಗಿರುತ್ತದೆ. ಇಷ್ಟೊಂದು ಬೆಲೆಗೆ ಭಾರತ ದೇಶದಲ್ಲಿ ಸಾಕಷ್ಟು ಉನ್ನತ ಪ್ರೀಮಿಯಂ ಮಟ್ಟದ ಕಾರುಗಳನ್ನು ಖರೀದಿ ಮಾಡಬಹುದಾಗಿದ್ದು ಇದೇ ಕಾರಣಕ್ಕಾಗಿ ಭಾರತ ದೇಶದ ಮಾರುಕಟ್ಟೆಯಲ್ಲಿ Citroen C5 Aircross ಕಾರು ಮಾರಾಟ ಆಗುವುದಕ್ಕೆ ವಿಫಲವಾಗಿದೆ. ಆದರೆ ಕಾರಿನ ಕ್ವಾಲಿಟಿ ಬಗ್ಗೆ ಮಾತನಾಡುವುದಾದರೆ ನಿಜಕ್ಕೂ ಕೂಡ ನೆಕ್ಸ್ಟ್ ಲೆವೆಲ್ ಎಂದು ಹೇಳಬಹುದಾಗಿದೆ ಆದರೆ ಬೆಲೆಯ ಕಾರಣಕ್ಕಾಗಿ ಕಾರು ಮಾರುಕಟ್ಟೆಯಲ್ಲಿ ಫೇಲಾಗಿದೆ.

Comments are closed.