Film: ದಾಸನ ’ಡೆವಿಲ್’ ಸಿನಿಮಾದ ನಾಯಕಿ ಯಾರು ಗೊತ್ತಾ? ಇವರು ಸಿನಿಮಾಕ್ಕೆ ಬಂದಿದ್ದೇ ಇಂಟರೆಸ್ಟಿಂಗ್ ಕಥೆ!

Film: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಟೇರ ಸಿನಿಮಾದ ನಂತರ ತಮ್ಮ ಮುಂದಿನ ಸಿನಿಮಾ ಆಗಿರುವಂತಹ ಡೆವಿಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರಿಕರಣದ ವಿಚಾರಕ್ಕೆ ಬರುವುದಾದರೆ ದರ್ಶನ್ ರವರು ತಮ್ಮ ಇಂಜುರಿಯ ಕಾರಣದಿಂದಾಗಿ ಚಿತ್ರಿಕರಣದಿಂದ ಸ್ವಲ್ಪ ಮಟ್ಟಿಗೆ ಹೊರಗಿದ್ದಾರೆ ಎಂದು ಹೇಳಬಹುದಾಗಿದ್ದು ಅವರ ಭಾಗದ ಚಿತ್ರೀಕರಣ ಸಾಕಷ್ಟು ಮುಗಿದಿದೆ ಎನ್ನುವಂತಹ ಮಾಹಿತಿಗಳು ಕೂಡ ಸಿಕ್ಕಿವೆ. ಎಲ್ಲ ಅಂದುಕೊಂಡಂತೆ ಆದರೆ ಸಿನಿಮಾ ಇದೇ ವರ್ಷ ಕೊನೆಯ ಭಾಗದಲ್ಲಿ ಬಿಡುಗಡೆಯಾಗುವಂತಹ ಸಾಧ್ಯತೆ ಕೂಡ ಇದೆ.

ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಹೊಸ ನಾಯಕಿ. ಎಲ್ಲಿಯವರು ಗೊತ್ತಾ?

ಡೆವಿಲ್ ಸಿನಿಮಾಗೆ ಯಾರು ನಾಯಕಿ ಆಗ್ತಾರೆ ಅನ್ನೋದನ್ನು ಸಾಕಷ್ಟು ಚರ್ಚೆಗಳು ಸಾಕಷ್ಟು ಸಮಯಗಳಿಂದ ಕೇಳಿ ಬರ್ತಾ ಇತ್ತು ಆದರೆ ಈಗ ಕೊನೆಗೂ ಗೊಂದಲಕ್ಕೆ ತೆರೆ ಎಳೆಯುವಂತಹ ಕೆಲಸವನ್ನು ಚಿತ್ರತಂಡ ಮಾಡಿದೆ ಎಂದು ಹೇಳಬಹುದಾಗಿದೆ. ಹೌದು ರಚನಾ ರೈ ಎನ್ನುವಂತಹ ಹೊಸ ಮುಖ ಡೆವಿಲ್ ಸಿನಿಮಾದ ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ. ಇನ್ನು ಇವರು ಕರಾವಳಿಯ ಪುತ್ತೂರು ಮೂಲದವರು ಎಂಬುದಾಗಿ ತಿಳಿದು ಬಂದಿದೆ.

ಡೆವಿಲ್ ಸಿನಿಮಾದಲ್ಲಿ ಬೇರೆ ಭಾಷೆ ನಾಯಕಿಯರಲ್ಲ ನಮ್ಮ ಭಾಷೆಯ ನಾಯಕಿಯರಿಗೆ ಅವಕಾಶ ನೀಡುತ್ತೇವೆ ಎಂಬುದಾಗಿ ಚಿತ್ರ ತಂಡ ಈ ಹಿಂದೆ ಹೇಳಿಕೊಂಡಿತ್ತು ಹಾಗೂ ಪುತ್ತೂರು ಮೂಲದವರಾಗಿರುವ ರಚನಾ ರೈ ಅವರನ್ನು ಆಯ್ಕೆ ಮಾಡುವ ಮೂಲಕ ತನ್ನ ಮಾತನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ರಚನಾ ರವರು ಸಾಕಷ್ಟು ಜನಪ್ರಿಯ ರಾಗಿದ್ದು ಸಾಕಷ್ಟು ಆಫರ್ಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿವೆ.

ಅವರ ಸಿನಿಮಾ ಜರ್ನಿ ಬಗ್ಗೆ ಮಾತನಾಡೋದಾದ್ರೆ ರೂಪೇಶ್ ಶೆಟ್ಟಿ ಅವರ ಜೊತೆಗೆ ನಟಿಸಿರುವಂತಹ ಸರ್ಕಸ್ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದ ಆಗಿರುವಂತಹ ಇವರು ಪತ್ರಿಕೋದ್ಯಮದಲ್ಲಿ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ. ಬ್ಯಾಡ್ಮಿಂಟನ್ ಗಳಂತ ಕ್ರೀಡೆಯಲ್ಲಿ ಕೂಡ ಇವರಿಗೆ ಸಾಕಷ್ಟು ಆಸಕ್ತಿ ಇದೆ ಅನ್ನೊದಾಗಿ ತಿಳಿದು ಬರುತ್ತದೆ. ದರ್ಶನ್ ರವರಿಗೆ ಯಾವ ರೀತಿಯಲ್ಲಿ ಪ್ರಾಣಿಗಳ ಮೇಲೆ ಪ್ರೀತಿ ಇದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಅದೇ ರೀತಿಯಲ್ಲಿ ರಚನರೈ ಅವರಿಗೆ ಕೂಡ ಪ್ರಾಣಿಗಳು ಅಂದ್ರೆ ಪ್ರೀತಿ. ಕೇವಲ ಡೆವಿಲ್ ಮಾತ್ರ ಬರೋದಿಲ್ಲ ಸತೀಶ್ ನಿನಾಸಂ ರವರ ಅಶೋಕ ಬ್ಲೇಡ್ ಸಿನಿಮಾದಲ್ಲಿ ಕೂಡ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ.

ರಚನಾ ರೈ ಅವರು ಮೊದಲ ಕನ್ನಡ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಂತ ದೊಡ್ಡ ಸ್ಟಾರ್ ರಚನಾ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಅಂತಹ ಅವಕಾಶ ಪಡೆದುಕೊಳ್ಳುತ್ತಿರುವುದು ಖಂಡಿತವಾಗಿ ಅವರ ಸಿನಿಮಾ ಜೀವನಕ್ಕೆ ಸಾಕಷ್ಟು ಬೂಸ್ಟ್ ನೀಡಲಿದೆ ಎಂದು ಹೇಳಬಹುದಾಗಿದೆ.

Comments are closed.