Marriage: ಈ ರಾಶಿಯವರಿಗೆ ಮದುವೆ ಅಂದ್ರೆ ಆಗ್ ಬರಲ್ಲ! ಜೀವನಪೂರ್ತಿ ಸಿಂಗಲ್ ಇರ್ತಾರೆ!

Marriage: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರಿಗೆ ಜೀವನಪೂರ್ತಿ ಇದೇ ರೀತಿಯಲ್ಲಿ ಇರಬೇಕು ಎನ್ನುವಂತಹ ಕೆಲವೊಂದು ನಿರ್ದಿಷ್ಟ ಗುಣಗಳನ್ನು ಅಥವಾ ಪರಿಸ್ಥಿತಿಗಳನ್ನು ನೀವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿರ್ಧಾರ ಮಾಡಬಹುದಾಗಿದೆ. ಅದೇ ರೀತಿಯಲ್ಲಿ ಮದುವೆ ವಿಚಾರಕ್ಕೆ ಬಂದರೆ ಕೆಲವು ರಾಶಿಯವರಿಗೆ ಆಗ ಬರುವುದಿಲ್ಲ ಹೀಗಾಗಿ ಅವರು ಜೀವನಪೂರ್ತಿ ಸಿಂಗಲ್ ಆಗಿರುವಂತಹ ಯೋಚನೆ ಮಾಡುತ್ತಾರೆ ಅಥವಾ ನಿಜವಾಗಿಯೂ ಸಿಂಗಲ್ ಆಗಿ ಇರುತ್ತಾರೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕುಂಭ ರಾಶಿ(Aquarius)

ಕುಂಭ ರಾಶಿಯವರು ಆದಷ್ಟು ಡೇಟಿಂಗ್ ಅಂದರೆ ಪ್ರೀತಿ ಮಾಡುವ ವಿಚಾರದಲ್ಲಿ ಮುಂದೆ ಇರ್ತಾರೆ ಆದರೆ ಮದುವೆ ಅಂತ ಬಂದಾಗ ಮಾತ್ರ ಕುಂಭ ರಾಶಿಯವರು ಆದಷ್ಟು ದೂರ ಉಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡುತ್ತಾರೆ. ಜೀವನದಲ್ಲಿ ಕುಂಭ ರಾಶಿಯವರು ಯಾವತ್ತೂ ಕೂಡ ಸ್ವತಂತ್ರರಾಗಿರಬೇಕು ಎನ್ನುವಂತಹ ಮನಸ್ಸನ್ನು ಹೊಂದಿರುತ್ತಾರೆ ಹೀಗಾಗಿ ಪ್ರೀತಿ ಹಾಗೂ ಮದುವೆಯ ಕಾನ್ಸೆಪ್ಟ್ ಎನ್ನುವುದು ಕುಂಭ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಇಷ್ಟ ಆಗದೆ ಇರುವಂತಹ ವಿಚಾರ ಎಂದು ಹೇಳಬಹುದಾಗಿದೆ.

ಸಿಂಹ ರಾಶಿ(Leo)

ನಾಯಕತ್ವದ ಗುಣಗಳನ್ನು ಹೆಚ್ಚಾಗಿ ಹೊಂದಿರುವಂತಹ ಸಿಂಹ ರಾಶಿಯವರು ಪ್ರೀತಿಯ ವಿಚಾರದಲ್ಲಿ ಆಗಲಿ ಅಥವಾ ಸಾಮಾನ್ಯವಾಗಿ ಜನರ ಜೊತೆಗೆ ಬೆರೆಯುವ ವಿಚಾರದಲ್ಲಿ ಆಗಲಿ ಒಂಟಿಯಾಗಿರುವುದಕ್ಕೆ ಹೆಚ್ಚಾಗಿ ಇಷ್ಟಪಡುತ್ತಾರೆ. ಯಾವತ್ತೂ ಕೂಡ ಅವರು ಸ್ನೇಹಿತರ ಜೊತೆಗೆ ಇರೋದಕ್ಕೆ ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಪ್ರತಿಯೊಬ್ಬರ ಜೊತೆಗೆ ಕೂಡ ತಮ್ಮ ವಿಚಾರಗಳನ್ನು ಶೇರ್ ಮಾಡಿಕೊಳ್ಳುವುದಿಲ್ಲ. ಇವರಲ್ಲಿ ಅಹಂ ಭಾವನೆ ಎನ್ನುವುದು ಹೆಚ್ಚಾಗಿರುತ್ತದೆ ಹೀಗಾಗಿ ಹೆಚ್ಚು ಜನರು ಇವರ ಕಡೆಗೆ ಅಟ್ರಾಕ್ಟ್ ಆಗುವುದು ಕೂಡ ಕಡಿಮೆ.

ಧನು ರಾಶಿ(Sagittarius)

ಇವರು ಕೂಡ ಹೆಚ್ಚಾಗಿ ಸ್ವಾತಂತ್ರ್ಯವಾಗಿ ಬದುಕೋದಕ್ಕೆ ಇಷ್ಟಪಡುತ್ತಾರೆ ಹೀಗಾಗಿ ಮದುವೆ ವಿಚಾರಕ್ಕೆ ಬಂದರೆ ಸ್ವಲ್ಪ ಮಟ್ಟಿಗೆ ಇವರು ಹಿಂಜರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಜೀವನದಲ್ಲಿ ಧನು ರಾಶಿಯವರು ಯಾರಿಂದಲೂ ಕೂಡ ಒತ್ತಡವನ್ನು ಹೊಂದುವಂತಹ ಭಾವನೆಗಳಿಗೆ ಅಡಿಯಾಳಾಗಿರಲು ಇಷ್ಟಪಡುವುದಿಲ್ಲ ಅದಕ್ಕಾಗಿಯೇ ಈ ರೀತಿಯ ನಿರ್ಧಾರಗಳನ್ನು ಅವರು ತಮ್ಮ ಜೀವನದಲ್ಲಿ ತೆಗೆದುಕೊಳ್ಳುತ್ತಾರೆ. ತಮ್ಮ ಜೀವನ ಹಾಗೂ ಕೆಲಸ ಎರಡರಲ್ಲಿ ಕೂಡ ಆಗಾಗ ಇವರು ಹೊಸ ಪ್ರಯೋಗಗಳನ್ನು ಮಾಡುತ್ತಾರೆ.

ಮಿಥುನ ರಾಶಿ (Gemini)

ಹೃದಯ ಮತ್ತು ಪ್ರೀತಿಯ ವಿಚಾರಕ್ಕೆ ಬಂದರೆ ಮಿಥುನ ರಾಶಿಯವರು ಸಾಕಷ್ಟು ಬಾರಿ ದುಃಖಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಯಾವುದೇ ರೀತಿಯ ಪ್ರೀತಿ ಅಥವಾ ಮದುವೆಯಲ್ಲಿ ಇವರು ಒಳಪಡುವುದಕ್ಕೆ ಇಷ್ಟಪಡುವುದಿಲ್ಲ. ಇನ್ನು ತಮ್ಮ ಜೀವನದಲ್ಲಿ ಕೂಡ ತಮ್ಮ ಕೆಲಸಗಳಿಗೆ ಬೇರೆಯವರು ಅಡ್ಡ ಬರೋದು ಅದರಲ್ಲೂ ವಿಶೇಷವಾಗಿ ಈ ರೀತಿ ಮದುವೆಯಾಗುವಂತಹ ಸಂಬಂಧಗಳ ಅಡೆತಡೆ ಅನ್ನೋದು ಅವರಿಗೆ ಇಷ್ಟ ಆಗೋದಿಲ್ಲ ಎನ್ನುವ ಕಾರಣಕ್ಕಾಗಿ ಅವರು ಜೀವನದಲ್ಲಿ ಸಿಂಗಲ್ ಆಗಿರೋದಕ್ಕೆ ಇಷ್ಟ ಪಡ್ತಾರೆ.

Comments are closed.