Pooja Phala: ದೇವರನ್ನು ಪೂಜೆ ಮಾಡುವಾಗ ಈ ವಸ್ತುಗಳು ಕಾಣಿಸಿಕೊಂಡರೆ ದೇವರು ಸಂತೃಪ್ತನಾಗಿದ್ದಾನೆ ಎಂದೇ ಅರ್ಥ!

Pooja Phala: ಸನಾತನ ಹಿಂದೂ ಧರ್ಮ ಸಂಸ್ಕೃತಿಯನ್ನು ಪಾಲಿಸುವಂತಹ ಪ್ರತಿಯೊಬ್ಬರೂ ಕೂಡ ದೇವರ ಪೂಜೆಯಲ್ಲಿ ನಂಬಿಕೆ ಇಡುತ್ತಾರೆ. ದೇವರ ಪೂಜೆಯಿಂದಾಗಿ ಆತನ ಆಶೀರ್ವಾದವನ್ನು ನಾವು ಪಡೆದುಕೊಳ್ಳಬಹುದಾಗಿದೆ ಅದರಿಂದ ಜೀವನದಲ್ಲಿ ನಾವು ಅಂದುಕೊಂಡಂತಹ ಎಲ್ಲಾ ಕೆಲಸಗಳು ನೆರವೇರುತ್ತವೆ ಎಂಬುದಾಗಿ ಭಾವಿಸುತ್ತಾರೆ. ಇನ್ನು ಕೆಲವೊಂದು ಸೂಚನೆಗಳು ದೇವರು ನಿಮ್ಮ ಪ್ರಾರ್ಥನೆಗೆ ಒಲಿದಿದ್ದಾನೆ ಎಂಬುದಾಗಿ ಅರ್ಥವಾಗಿರುತ್ತದೆ ಅವುಗಳ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಈ ಸೂಚನೆಗಳು ದೇವರು ನಿಮಗೆ ಒಲಿದಿದ್ದಾನೆ ಎಂಬುದರ ಅರ್ಥವಾಗಿದೆ!

  • ನೀವು ಪೂಜೆ ಮಾಡುವಂತಹ ದೇವರಿಗೆ ಇಷ್ಟ ಆಗುವಂತಹ ವಸ್ತುಗಳನ್ನು ಅವರಿಗೆ ನೀಡುವ ಮೂಲಕ ನೀವು ಆ ದೇವರನ್ನು ಪ್ರಸನ್ನಗೊಳಿಸಬಹುದಾಗಿದೆ. ಈ ಸಂದರ್ಭದಲ್ಲಿ ದೇವರು ನಿಮ್ಮ ಮೇಲೆ ಆಶೀರ್ವಾದ ನೀಡಿದ್ದಾನೆ ಎಂಬುದನ್ನ ಒಂದಲ್ಲ ಒಂದು ಸೂಚನೆಯ ಮೂಲಕ ಖಂಡಿತವಾಗಿ ಸಾಬೀತುಪಡಿಸುತ್ತಾನೆ.
  • ದೇವರಿಗೆ ದೀಪ ಹಚ್ಚುವ ಸಂದರ್ಭದಲ್ಲಿ ನೀವು ಹಚ್ಚಿರುವಂತಹ ದೀಪದ ಬೆಂಕಿ ಅನ್ನುವುದು ಮೇಲಕ್ಕೆ ನೇರವಾಗಿ ಉರಿಯುತ್ತಿದ್ದರೆ ದೇವರು ನೀವು ಬೇಡಿಕೊಂಡಿರುವಂತಹ ಪ್ರಾರ್ಥನೆ ಗಳನ್ನು ಈಡೇರಿಸುತ್ತಾನೆ ಎನ್ನುವುದರ ಮುನ್ಸೂಚನೆಯಾಗಿದೆ ಎಂದು ಹೇಳಬಹುದಾಗಿದೆ.
  • ನೀವು ಪ್ರತಿದಿನ ಮಾಡುವಂತಹ ದೇವರ ಪೂಜೆಯಲ್ಲಿ ಖಂಡಿತವಾಗಿ ದೇವರಿಗೆ ಹೂವನ್ನು ಅರ್ಪಿಸಿರುತ್ತಿರಿ. ದೇವರಿಗೆ ಅರ್ಪಿಸಿರುವ ಅಂತಹ ಹೂ ಒಂದುವೇಳೆ ದೇವರ ಫೋಟೋ ಅಥವಾ ಮೂರ್ತಿಯಿಂದ ಕೆಳಗೆ ಬಿದ್ದರೆ ಆ ಸಂದರ್ಭದಲ್ಲಿ ದೇವರು ನಿಮ್ಮ ಕೋರಿಕೆಯನ್ನು ಈಡೇರಿಸುವಂತಹ ಮುನ್ಸೂಚನೆ ನೀಡಿದ್ದಾರೆ ಎಂಬುದಾಗಿ ಅರ್ಥವಾಗಿದೆ.
  • ಒಂದು ವೇಳೆ ನೀವು ದೇವರ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿದು ಹೊರಗೆ ಬರುತ್ತಿದೆ ಅಂದರೆ ಇದರ ಸೂಚನೆ ದೇವರು ನಿಮ್ಮ ಕೋರಿಕೆಗಳನ್ನು ಈಡೇರಿಸುವಂತಹ ಮನಸ್ಸು ಮಾಡಿದ್ದಾನೆ ಎಂಬುದಾಗಿ ಅರ್ಥವಾಗಿರುತ್ತದೆ. ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ನೀವು ಬೇರೆ ಯಾವುದೇ ಯೋಜನೆಗಳನ್ನು ಇಟ್ಟುಕೊಳ್ಳಬೇಡಿ.

ಇವಿಷ್ಟು ಸೂಚನೆಗಳನ್ನು ನೀವು ದೇವರಿಂದ ಪೂಜೆ ಮಾಡುವ ಸಂದರ್ಭದಲ್ಲಿ ಪಡೆದುಕೊಂಡರೆ ಇದರ ಅರ್ಥ ದೇವರು ನಿಮ್ಮ ಮೇಲೆ ಆಶೀರ್ವಾದ ಬೀರಲು ತಯಾರಾಗಿದ್ದಾನೆ ಎಂಬುದಾಗಿ ಅರ್ಥವಾಗಿದೆ.

Comments are closed.