Adhaar Card: ಆಧಾರ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಬಂತು ನೋಡಿ ಪ್ರಮುಖವಾದ ಆದೇಶ!

Adhaar Card: ಆಧಾರ್ ಕಾರ್ಡ್ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಸರ್ಕಾರ ನೀಡಿರುವಂತಹ ಒಂದು ಪ್ರಮುಖ ಗುರುತು ಪತ್ರದ ದಾಖಲೆಯಾಗಿದೆ. ಇದರ ಮೂಲಕ ಈಗಾಗಲೇ ಸಾಕಷ್ಟು ಯೋಜನೆಗಳಿಗೆ ಚಾಲನೆಯನ್ನು ಕೂಡ ನೀಡಲಾಗಿದೆ. ಈಗ ಹೊಸದಾಗಿ ಆಧಾರ್ ಯೂನಿಫೈಡ್ ಪೇಮೆಂಟ್ ಯೋಜನೆಯನ್ನು ಕೂಡ ಸರ್ಕಾರ ಜಾರಿಗೆ ತರೋದಕ್ಕೆ ಹೊರಟಿದೆ. ಈ ಪೋರ್ಟಲ್ ಮೂಲಕ ನೀವು ಸಾಕಷ್ಟು ಯೋಜನೆಗಳನ್ನು ಇದೊಂದೇ ಜಾಗದಲ್ಲಿ ಪಡೆದುಕೊಳ್ಳಬಹುದಾಗಿದೆ.

ಒಂದೇ ಜಾಗದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು!

ಈಗಾಗಲೇ ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳ ಮೂಲಕ ಮಾಹಿತಿಗಳನ್ನು ಪಡೆದು ಈ ಪೋರ್ಟಲ್ ಅನ್ನು ಲಾಂಚ್ ಮಾಡುವಂತಹ ತಯಾರಿ ನಡೆಯುತ್ತಿದೆ. DPI ತಯಾರಿಕೆಗಾಗಿ ಆದೇಶವನ್ನು ಕೂಡ ನೀಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಜನಸಾಮಾನ್ಯರಿಗೆ ಇದ್ರಿಂದ ಯಾವ ಲಾಭ ಸಿಗುತ್ತೆ?

ನೀವು ಈಗ ಸಾಮಾನ್ಯವಾಗಿ ಗಮನಿಸುವುದಾದರೆ ಸರ್ಕಾರದಲ್ಲಿ ಇರುವಂತಹ ಬೇರೆ ಬೇರೆ ಯೋಜನೆಗಳಿಗಾಗಿ ಅವುಗಳದೇ ಆಗಿರುವಂತಹ ಬೇರೆ ಬೇರೆ ಅಧಿಕೃತ ವೆಬ್ಸೈಟ್ ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸುವುದು ಅಥವಾ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವಂತಹ ಕೆಲಸವನ್ನು ಮಾಡಬೇಕಾಗಿರುತ್ತದೆ. ಆದರೆ ಒಂದು ವೇಳೆ ಈ ಪೋರ್ಟಲ್ ಲಾಂಚ್ ಆದರೆ ನೀವು ಬೇರೆ ಬೇರೆ ಕಡೆಗೆ ನಿಮಗೆ ಬೇಕಾಗಿರುವಂತಹ ಸೇವೆಗಳನ್ನು ಅಥವಾ ಯೋಜನೆ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಕಷ್ಟಪಡಬೇಕಾದ ಅಗತ್ಯ ಇರುವುದಿಲ್ಲ.

ಈ ಹಿಂದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳಿಗೆ ಬೇರೆಬೇರೆ ರೀತಿಯ ಪೋರ್ಟಲ್ ಗಳನ್ನ ಲಾಂಚ್ ಮಾಡಲಾಗಿರುತ್ತದೆ ಹೀಗಾಗಿ ಇವುಗಳನ್ನ ತಿಳಿದುಕೊಳ್ಳುವುದಕ್ಕೆ ಹಾಗೂ ಇಲ್ಲಿ ಯೋಜನೆಗಳಿಗೆ ಅಪ್ಲೈ ಮಾಡುವುದಕ್ಕೆ ಕೂಡ ಬೇರೆ ಬೇರೆ ವೆಬ್ಸೈಟ್ಗಳಿಗೆ ಹೋಗಬೇಕಾದ ಅಗತ್ಯ ಇರುತ್ತಿತ್ತು ಆದರೆ ಇನ್ಮುಂದೆ ಆಧಾರ್ ಯೂನಿಫೈಡ್ ಪೋರ್ಟಲ್ ಲಾಂಚ್ ಆದ ಮೇಲೆ ಆ ರೀತಿಯ ಸಮಸ್ಯೆ ಇರೋದಿಲ್ಲ. ಕೆಲವೊಂದು ಕಡೆಗಳಲ್ಲಿ ಇಂಟರ್ನೆಟ್ ಸೇವೆ ಸರಿಯಾದ ರೀತಿಯಲ್ಲಿ ಸಿಗೋದಿಲ್ಲ ಎನ್ನುವ ಕಾರಣಕ್ಕಾಗಿ ಕೂಡ ಬೇರೆ ಬೇರೆ ಪೋರ್ಟಲ್ ಇದ್ದಾಗ ಅವುಗಳಿಗೆ ಭೇಟಿ ನೀಡುವುದು ಕಷ್ಟಕರವಾಗುತ್ತದೆ. ಅದರಲ್ಲೂ ವಿಶೇಷವಾಗಿ ಈ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅಲ್ಲಿನ ಕಂಪ್ಯೂಟರ್ ಸೆಂಟರ್ ನವರು ನಿಮ್ಮ ಬಳಿ ಹಣವನ್ನು ಚಾರ್ಜ್ ಮಾಡಬಹುದಾಗಿದೆ ಹೀಗಾಗಿ ಬೇರೆ ಬೇರೆ ಇದ್ದಾಗ ಹೆಚ್ಚು ಹಣವನ್ನು ಚಾರ್ಜ್ ಮಾಡಬಹುದಾದ ಸಾಧ್ಯತೆ ಇರುತ್ತದೆ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಜಾರಿಗೆ ಬಂದರೆ ನಿಮಗೆ ಸಾಕಷ್ಟು ಲಾಭದಾಯಕ ಪರಿಣಾಮಗಳು ಸಿಗಲಿವೆ.

ಸದ್ಯದ ಮಟ್ಟಿಗೆ ಭಾರತ ಸರ್ಕಾರದ ಪ್ರತಿಯೊಂದು ಯೋಜನೆಗಳು ಹಾಗೂ ಎಲ್ಲಾ ಪ್ರಮುಖ ವಿಚಾರಗಳು ಕೂಡ ಆನ್ಲೈನ್ ನಲ್ಲಿ ಕಂಡುಬರುತ್ತಿದೆ. ಆನ್‌ಲೈನಲ್ಲಿ ಇರುವಂತಹ ಈ ರೀತಿಯ ಸೇವೆಗಳು ಕೇವಲ ಪಡೆದುಕೊಳ್ಳುವುದಕ್ಕೆ ಸುಲಭ ಮಾತ್ರವಲ್ಲ ಇದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಜನರಿಗೂ ಕೂಡ ಪಾರದರ್ಶಕವಾಗಿರುತ್ತದೆ ಅನ್ನೋದನ್ನ ನಾವು ಎಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ. ಡಿಜಿಟಲ್ ಲೋಕದಲ್ಲಿ ಭಾರತ ಮುಂದಿನ ಕೆಲವೇ ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಎನ್ನುವಂತಹ ಅಂದಾಜು ಲೆಕ್ಕಾಚಾರ ಇದೆ. ಹೀಗಾಗಿಯೇ ಪ್ರತಿಯೊಬ್ಬ ಭಾರತೀಯನಿಗೂ ಕೂಡ ಇಂತಹ ಸೇವೆಗಳು ಡಿಜಿಟಲ್ ಅಥವಾ ಆನ್ಲೈನ್ ಮೂಲಕ ಸಿಗಬೇಕು ಎನ್ನುವ ದೃಷ್ಟಿಕೋನವನ್ನು ಭಾರತೀಯ ಸರ್ಕಾರ ಹೊಂದಿದೆ ಎಂಬುದಾಗಿ ಹೇಳಬಹುದಾಗಿದೆ.

Comments are closed.