HSRP: HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಇದ್ದಲ್ಲಿ ಇಷ್ಟು ಫೈನ್ ಕಟ್ಟೋದಕ್ಕೆ ರೆಡಿಯಾಗಿ!

HSRP: ಮೇ 31ರವರೆಗೆ ಪ್ರತಿಯೊಬ್ಬರೂ ಕೂಡ ತಮ್ಮ ವಾಹನಗಳಲ್ಲಿ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಎನ್ನುವುದಾಗಿ ಕರ್ನಾಟಕ ಸಾರಿಗೆ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿತು. ಇನ್ನು ಇದು ಈಗಾಗಲೇ ಮೂರು ಬಾರಿ ಮುಂದುವರಿದ ದಿನಾಂಕದೊಂದಿಗೆ ಮೇ 31 ಕೊನೆಯ ದಿನಾಂಕ ಎಂಬುದಾಗಿ ನಿರ್ಧಾರವಾಗಿತ್ತು. ಹಾಗಿದ್ರೂ ಕೂಡ ಎರಡು ಕೋಟಿಗೂ ಹೆಚ್ಚಿನ ವಾಹನಗಳಲ್ಲಿ ಕೇವಲ 18 ಪ್ರತಿಶತ ವಾಹನಗಳು ಮಾತ್ರ ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

HSRP ನಂಬರ್ ಪ್ಲೇಟ್ ಎನ್ನುವುದು ಅತ್ಯಂತ ಸುರಕ್ಷಿತ ಅಲ್ಯೂಮಿನಿಯಂ ಪ್ಲೇಟ್ ನಿಂದ ತಯಾರಿಸಲಾಗಿರುವಂತಹ ನಂಬರ್ ಪ್ಲೇಟ್ ಆಗಿದ್ದು ಇದನ್ನ ಯಾರು ಕೂಡ ಅಷ್ಟೊಂದು ಸುಲಭವಾಗಿ ತೆಗೆಯಲು ಸಾಧ್ಯ ಇರೋದಿಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಹ ನಕಲಿ ನಂಬರ್ ಪ್ಲೇಟ್ ಅಳವಡಿಕೆಯ ವಿರುದ್ಧವಾಗಿ ಕೂಡ ಇದು ಸಾಕಷ್ಟು ಉತ್ತಮವಾದ ಪರಿಣಾಮವನ್ನು ಬೀರುತ್ತಿದೆ.

HSRP ಅಪ್ಡೇಟ್!

ರಾಜ್ಯದಲ್ಲಿ ಈಗಾಗಲೇ ಎರಡು ಕೋಟಿ ವಾಹನಗಳು ಇದ್ದವು ಆದರೆ ಈ ಹೊಸ ಯೋಜನೆ ಜಾರಿಗೆ ಬಂದ ಮೇಲೆ HSRP ನಂಬರ್ ಪ್ಲೇಟ್ ಅನ್ನು ಇದರಲ್ಲಿ ಅಳವಡಿಸಿಕೊಂಡಿರೋದು ಕೇವಲ 35 ಲಕ್ಷ ಮಾತ್ರ. ಇನ್ನು ಉಳಿದಿರುವಂತಹ ಕೆಲವೇ ದಿನಗಳಲ್ಲಿ ನೀವು ನಿಮ್ಮ ನಂಬರ್ ಪ್ಲೇಟ್ ಅನ್ನು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ಪಡೆದುಕೊಳ್ಳಬಹುದಾಗಿದೆ ಇಲ್ಲವಾದಲ್ಲಿ ಜೂನ್ ಒಂದನೇ ತಾರೀಖಿನಿಂದ ಪ್ರಾರಂಭವಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

HSRP ನಂಬರ್ ಪ್ಲೇಟ್ ಅನ್ನು ನೀವು ಅಳವಡಿಸಿಕೊಳ್ಳದೆ ಹೋದಲ್ಲಿ ಎಷ್ಟು ದಂಡ ಕಟ್ಟಬೇಕಾಗುತ್ತದೆ?

HSRP ಕರ್ನಾಟಕ ಸಾರಿಗೆ ಇಲಾಖೆ ಜಾರಿಗೆ ತಂದಿರುವಂತಹ ಅತ್ಯಂತ ಪ್ರಮುಖ ನಿಯಮಗಳಲ್ಲಿ ಇದು ಕೂಡ ಒಂದಾಗಿದ್ದು ಸರ್ಕಾರದ ಕಟ್ಟುನಿಟ್ಟಿನ ನಿಯಮದಂತೆ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಾಗಿರುತ್ತದೆ. HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಪ್ರತಿ ಬಾರಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಒಂದು ಸಾವಿರ ರೂಪಾಯಿ ಫೈನ್ ಅನ್ನು ಕಟ್ಟಬೇಕಾಗುತ್ತದೆ ಅನ್ನೋದು ಖಾತ್ರಿ ಯಾಗಿದೆ. ಹೀಗಾಗಿ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತ ಇದ್ದರೆ ಮೇ 31ರ ಒಳಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ತಪ್ಪದೇ ಹಾಕಿಸಿಕೊಳ್ಳಬೇಕಾಗಿರುತ್ತದೆ ಅದರಲ್ಲಿ ವಿಶೇಷವಾಗಿ 2019ರ ಒಳಗೆ ವಾಹನವನ್ನು ಖರೀದಿ ಮಾಡಿರುವವರು ಇದನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಲೇ ಬೇಕಾಗುತ್ತದೆ.

Comments are closed.