Dhoni: ಮುಂದಿನ ವರ್ಷ ಧೋನಿ ಐಪಿಎಲ್ ಆಡ್ತಾರ? ಕೊನೆಗೂ ಹೊರಬಿತ್ತು ಅಸಲಿ ವಿಷ್ಯ!

Dhoni: ಈ ಬಾರಿ ಐಪಿಎಲ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತನ್ನ ಕೊನೆಯ ಪಂದ್ಯವನ್ನ ಸೋತು ಈ ಬಾರಿ ಐಪಿಎಲ್ ನಿಂದ ಹೊರ ಬಿದ್ದಿದೆ. ಇನ್ನು ಈ ಬಾರಿಯ ಐಪಿಎಲ್ ಸಾಕಷ್ಟು ಕಡೆಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಎನ್ನುವಂತಹ ಮಾತುಕತೆ ಕೇಳಿ ಬಂದಿತ್ತು. ಇನ್ನು ಧೋನಿ ಅವರು ಈ ಪಂದ್ಯದಲ್ಲಿ ಕೂಡ ಕೊನೆ ಕೊನೆಯಲ್ಲಿ ತಂಡವನ್ನು ಗೆಲ್ಲಿಸುವಂತಹ ಪ್ರಯತ್ನ ಮಾಡಿದ್ರು ಕೂಡ ಕೊನೆಯಲ್ಲಿ ವಿಫಲರಾದರು. 43ನೇ ವಯಸ್ಸಿನಲ್ಲಿ ಕೂಡ ಮಹೇಂದ್ರ ಸಿಂಗ್ ಧೋನಿ ರವರ ಅದ್ಭುತ ವ್ಯಾಟಿಂಗ್ ಪ್ರದರ್ಶನ ಹಾಗೂ ಕೀಪಿಂಗ್ ಎಲ್ಲರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಮಹೇಂದ್ರ ಸಿಂಗ್ ಧೋನಿ ರವರು ಕಳೆದ ಬಾರಿ ತಮ್ಮ ಮೊಣಕಾಲಿನ ಸರ್ಜರಿಯನ್ನು ಮಾಡಿಸಿಕೊಂಡಿದ್ದರು ಹೀಗಾಗಿ ಈ ಬಾರಿ ಅವರು ಆಡ್ತಾರೆ ಅಂತ ಯಾರು ಕೂಡ ಭಾವಿಸಿರಲಿಲ್ಲ. ಈ ಬಾರಿ ಕೂಡ ಮೊಣಕಾಲಿನ ಸಮಸ್ಯೆ ಹಾಗೂ ಕಾಲಿನಲ್ಲಿ ನೋವಿನ ಸಮಸ್ಯೆ ಇದ್ದರೂ ಕೂಡ ಮಹೇಂದ್ರ ಸಿಂಗ್ ಧೋನಿ ರವರು ಅದನ್ನೆಲ್ಲ ಬಿಟ್ಟು ಅಭಿಮಾನಿಗಳಿಗಾಗಿ ಈ ಬಾರಿ ಆಡಲೇಬೇಕು ಅಂತ ಆಡಿ ನಿಜವಾದ ಕ್ರಿಕೆಟಿಗನ ಅರ್ಥವನ್ನು ಎಲ್ಲರಿಗೂ ತೋರ್ಪಡಿಸಿದ್ದಾರೆ.

ಈ ಬಾರಿ ಪ್ರತಿಯೊಬ್ಬರು ಕೂಡ ಮಹೇಂದ್ರ ಸಿಂಗ್ ಧೋನಿ ರವರು ಐಪಿಎಲ್ ಗೆದ್ದು ತಮ್ಮ ಕ್ರಿಕೆಟ್ ಕರಿಯರ್ ಗೆ ನಿವೃತ್ತಿಯನ್ನು ಘೋಷಿಸುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು. ಆದರೆ ತಂಡದ ಕೆಲವೊಂದು ಪ್ರಮುಖ ಆಟಗಾರರು ಟೂರ್ನಮೆಂಟ್ನ ಮಧ್ಯದಲ್ಲಿಯೇ ನಿರ್ಗಮಿಸಿರುವ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸೋಲನ್ನು ಕಾಣಬೇಕಾಗಿ ಬಂತು.

ಮುಂದಿನ ವರ್ಷ ದೋನಿ ಆಡ್ತಾರ?

ಮಹೇಂದ್ರ ಸಿಂಗ್ ಧೋನಿ ಸದ್ಯದ ಮಟ್ಟಿಗೆ ಐಪಿಎಲ್ ಅನುಮೋದಿಸಿಕೊಂಡು ಮುಂದಿನ ತಿಂಗಳು ಲಂಡನ್ಗೆ ತಮ್ಮ ಮಾಂಸಖಂಡದ ಸರ್ಜರಿಯ ಕಾರಣಕ್ಕಾಗಿ ಹೋಗಲಿದ್ದಾರೆ. ಈ ಸಂದರ್ಭದಲ್ಲಿ ಯಾವ ರೀತಿಯ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಮುಂದಿನ ಐಪಿಎಲ್ ಅನ್ನು ಆಡಬಹುದಾ ಇಲ್ವಾ ಅನ್ನೋದನ್ನ ಸಿಎಸ್‌ಕೆ ಟೀಮ್ ಮ್ಯಾನೇಜ್ಮೆಂಟ್ ಗೆ ತಿಳಿಸುತ್ತಾರೆ ಅನ್ನೋದನ್ನ ಹೇಳಿದ್ದಾರೆ ಅನ್ನೋದಾಗಿ ಸಿಎಸ್‌ಕೆ ತಂಡದ ಸಿಇಒ ಆಗಿರುವ ಕಾಶಿ ಹೇಳಿದ್ದಾರೆ.

ಪ್ರತಿಯೊಬ್ಬ ಅಭಿಮಾನಿ ಕೂಡ ಮುಂದಿನ ಬಾರಿ ಮಹೇಂದ್ರ ಸಿಂಗ್ ಧೋನಿ ರವರು ಮತ್ತೆ ಸಿಎಸ್‌ಕೆ ತಂಡಕ್ಕೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿ ತಂಡವನ್ನು ಮುನ್ನಡೆಸಿ ಟ್ರೋಫಿಯನ್ನು ಗೆದ್ದುಕೊಂಡು ಪರ್ಫೆಕ್ಟ್ ನಿವೃತ್ತಿಯನ್ನು ಪಡೆದುಕೊಳ್ಳಲು ಎನ್ನುವುದಾಗಿ ಹಾರೈಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಾಧ್ಯವಾಗುತ್ತಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Comments are closed.